3 ಕಾರಣಕ್ಕೆ ಹಿಂದೂಗಳೇ ಟಾರ್ಗೆಟ್!! ಬೀದಿಗೆ ಬಿದ್ದ J & K ಪ್ರವಾಸೋದ್ಯಮ!!
ಹಿಂದೂ- ಮುಸ್ಲಿಂ ದ್ವೇಷದ ಬೆಂಕಿ ಹಚ್ಚಿದ್ರಾ?

ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿಯನ್ನು ಕೇಂದ್ರ ಬಿಜೆಪಿ ಸರ್ಕಾರ ರದ್ದು ಮಾಡಿದ ಮೇಲೆ ಇಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವುದಕ್ಕೆ ಪ್ರಾರಂಭಿಸಿತ್ತು. ಇದಾದ ಮೇಲೆ ಇಲ್ಲಿಗೆ ಭಾರತೀಯರು ಬರುವುದು ಹೆಚ್ಚಾಗಿತ್ತು. ಆದರೆ, ಏಪ್ರಿಲ್ 22ರಂದು ಏಕಾಏಕಿ ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿರುವುದರ ಹಿಂದೆ ಹಲವು ಕಾರಣಗಳು ಇವೆ. ಅದರಲ್ಲಿ ಮೂರು ಪ್ರಮುಖ ಕಾರಣ ಭಾರತದ ಸೌಹಾರ್ದತೆಗೆ ಪೆಟ್ಟು, ಜಮ್ಮು ಮತ್ತು ಕಾಶ್ಮೀರದ ಪ್ರವಾಸಕ್ಕೆ ಪೆಟ್ಟು ಬೀಳಿಸುವುದು ಅಲ್ಲಿ ಅತಂತ್ರ ವಾತಾವರಣವನ್ನು ನಿರ್ಮಿಸುವುದು ಹಾಗೂ 370 ವಿಧಿ ತೆಗೆದಿರುವುದರಿಂದ ಹಿನ್ನಡೆ ಆಗಿದೆ ಎಂದು ತೋರಿಸುವುದು ಸೇರಿದಂತೆ ಹಿಂದೂಗಳಲ್ಲಿ ಭೀತಿ ಹುಟ್ಟಿಸುವುದು ಸಹ ಸೇರಿದೆ.
ಭಾರತದ ಸೌಹಾರ್ದತೆಗೆ ಪೆಟ್ಟು
ಉಗ್ರರ ಮುಖ್ಯ ಉದ್ದೇಶವೇ ಭಾರತದ ಸೌಹಾರ್ದತೆಗೆ ಪೆಟ್ಟು ನೀಡುವುದೇ ಆಗಿದೆ. ಆದರೆ, ಹಿಂದೂ – ಮುಸ್ಲಿಮರ ನಡುವೆ ವೈಷಮ್ಯವನ್ನು ಹೆಚ್ಚಿಸುವುದಕ್ಕೆ ಹಾಗೂ ಭೀತಿಯ ವಾತಾವರಣವನ್ನು ಸೃಷ್ಟಿ ಮಾಡುವುದಕ್ಕೆ ಹೇಗೆಲ್ಲಾ ಸಾಧ್ಯವೋ ಆ ಎಲ್ಲಾ ಮಾರ್ಗಗಳಿಂದ ಈ ಉಗ್ರರು ಈ ದಾಳಿಯನ್ನು ಬಳಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪ್ರವಾಸಕ್ಕೆ ಪೆಟ್ಟು
ಜಮ್ಮು ಮತ್ತು ಕಾಶ್ಮೀರಕ್ಕೆ ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಭೇಟಿ ನೀಡುವ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿತ್ತು. ಇಲ್ಲಿನ ಹಿಂದೂಗಳು ಸಹ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದರು. ಮುಸ್ಲಿಮರು ಈ ಇಲ್ಲಿನ ಪ್ರವಾಸೋದ್ಯಮ ಚಿಗುರೊಡೆದಿದ್ದ ಸಂಭ್ರಮದಲ್ಲಿದ್ದರು. ಆದರೆ, ಈಗ ಆಗಿರುವ ಉಗ್ರರ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇಲ್ಲಿನ ಜನ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಮತ್ತೆ ಇಲ್ಲಿ ಅತಂತ್ರ ವಾತಾವರಣ ಸೃಷ್ಟಿಸುವುದೇ ಇವರ ಉದ್ದೇಶವಾದಂತೆ ಇದೆ. ಜೀವದ ಭಯದಿಂದ ಪ್ರವಾಸಿಗರು ತಮ್ಮ ಹೋಟೆಲ್ ಬುಕಿಂಗ್‌ಗಳನ್ನು ರದ್ದುಗೊಳಿಸುತ್ತಿದ್ದಾರೆ. ಅಲ್ಲದೆ ತಮ್ಮ ಪ್ರಯಾಣದ ಯೋಜನೆಗಳನ್ನು ರದ್ದುಗೊಳಿಸುತ್ತಿದ್ದು, ಇದು ಕಣಿವೆ ರಾಜ್ಯದ ಪ್ರಮುಖ ಆದಾಯದ ಮೂಲವಾದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಪ್ರವಾಸಿಗರು ತಮ್ಮ ರಜಾ ದಿನಗಳನ್ನು ಕಣಿವೆಯಲ್ಲಿ ಕಳೆಯುವ ಕನಸನ್ನ ಕೈಬಿಡುತ್ತಿದ್ದಾರೆ. ಅಲ್ಲದೇ ಮತ್ತೆ ಜಮ್ಮ ಕಾಶ್ಮೀರದ ಜನರ ಜೀವನ ಬೀದಿಗೆ ಬೀಳಲಿದೆ. ಇದೇ ಪಾಕ್ ಹಾಗೂ ಭಯೋತ್ಪಾದಕರಿಗೆ ಬೇಕಾಗಿದ್ದು, ಅದು ಈಗ ಯಶಸ್ವಿಯಾಗಿದೆ ಅಂದ್ರೆ ತಪ್ಪಿಲ್ಲ..
ಹಿಂದೂ – ಮುಸ್ಲಿಮರ ನಡುವೆ ದ್ವೇಷದ ಬೆಂಕಿ
ಭಾರತದಲ್ಲಿ ಹಿಂದೂ – ಮುಸ್ಲಿಮರ ನಡುವೆ ದ್ವೇಷವನ್ನು ಹೆಚ್ಚಿಸುವುದರ ಮೂಲಕ ದೇಶ ವಿಭಜನೆಯಂತಹ ಕ್ರಮಗಳನ್ನು ಹೇಯ ಕೃತ್ಯಗಳನ್ನು ನಡೆಸುವುದಕ್ಕೆ ಇದನ್ನು ದಾಳವಾಗಿಯೂ ಬಳಸಿಕೊಳ್ಳಲಾಗಿದೆ. ಹಿಂದೂಗಳನ್ನೇ ಗುರಿ ಇರಿಸಿಕೊಂಡು ಅವರ ಧರ್ಮವನ್ನು ಕೇಳಿ ಕೊಲೆ ಮಾಡಲಾಗಿದೆ. ಈ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಶೇ 99.99ರಷ್ಟು ಜನ ಹಿಂದೂಗಳೇ ಆಗಿದ್ದಾರೆ. ಇದು ಭಾರತದಲ್ಲಿ ಆಶಾಂತಿ ಉಂಟು ಮಾಡಿ ಭಾರತವನ್ನ ಒಡೆಯೋ ಪ್ಲ್ಯಾನ್ ಕೂಡ ಆಗಿರಬಹುದು.
370 ವಿಧಿಗೆ ಹಿನ್ನಡೆ ಮಾಡೋದು!
ನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿ ರದ್ದಾದ ಮೇಲೆ ಇದನ್ನು ವಿರೋಧಿಸಿ ಹೊಸ ಭಯೋತ್ಪಾದಕ ಸಂಘಟನೆ ಟಿಆರ್‌ಎಫ್ ಹುಟ್ಟಿಕೊಂಡಿತ್ತು. ಎಲ್ಇಟಿಯ ಅಂಗ ಸಂಸ್ಥೆ ಇದಾಗಿದೆ. ಇದೇ ಉಗ್ರ ಸಂಘಟನೆ ಇದೀಗ ಈ ದಾಳಿಯನ್ನು ನಡೆಸಿರುವುದಾಗಿ ಒಪ್ಪಿಕೊಂಡಿದೆ. ಆರ್ಟಿಕಲ್ 370 ರದ್ದಾಗಿರುವುದರಿಂದ ಹಿನ್ನಡೆ ಆಗಿದೆ ಎಂದು ಬಿಂಬಿಸುವುದಕ್ಕೆ ಉಗ್ರರ ಸಂಘಟನೆ ಮುಂದಾಗಿದೆ. ಇದರ ಭಾಗವಾಗಿಯೇ ಈ ದಾಳಿ ನಡೆದಿದೆ. ಒಟ್ನಲ್ಲಿ ಇಲ್ಲಿ ಉಗ್ರರು ಮತ್ತು ಪಾಕ್‌ನ ಟಾರ್ಗೆಟ್ ಒಂದೇ ಜಮ್ಮ ಕಾಶ್ಮೀರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು, ಭಾರತವನ್ನ ಒಡೆಯ ಬೇಕು ಅನ್ನೋದು. ಆದ್ರೆ ಅದು ಪಾಕ್ ಕೈಯಲ್ಲಿ ಸಾಧ್ಯನೇ ಇಲ್ಲ.. ಕೆಲ ದಿನಗಳೇ ಈ ದಾಳಿಗೆ ತಕ್ಕ ಉತ್ತರವನ್ನ ಭಾರತ ನೀಡಲಿದೆ.