ಐಎಂಡಿಬಿ ಟಾಪ್ 10 ಚಿತ್ರಗಳಲ್ಲಿ ಕೆಜಿಎಫ್ 2, ಕಾಂತಾರ, 777 ಚಾರ್ಲಿ

ಐಎಂಡಿಬಿ ಟಾಪ್ 10 ಚಿತ್ರಗಳಲ್ಲಿ ಕೆಜಿಎಫ್ 2, ಕಾಂತಾರ, 777 ಚಾರ್ಲಿ

2022ರಲ್ಲಿ ಕನ್ನಡದ ಸಿನಿಮಾಗಳು ರಾಜ್ಯ ಮಾತ್ರವಲ್ಲದೇ ಜಗತ್ತಿನೆಲ್ಲೆಡೆ ಸಖತ್ ಸೌಂಡ್ ಮಾಡಿದ್ದವು. ಯಶ್ ಅಭಿನಯದ ಕೆಜಿಎಫ್ 2, ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ, ಹಾಗೂ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಈ ಬಾರಿ ಐಎಂಡಿಬಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಐಎಂಡಿಬಿ ಟಾಪ್ 10 ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಥಾನಪಡೆದ ಕನ್ನಡ ಚಿತ್ರಗಳ ನಿರ್ದೇಶಕರಿಗೆ ಸ್ಮರಣಿಕೆ ಕೂಡಾ ನೀಡಲಾಗಿದೆ.

ಇದನ್ನೂ ಓದಿ:  ‘ನಿನ್ನ ಶ್ರಮಕ್ಕೆ ತಕ್ಕ ಪ್ರತಿಫಲ…. ‘- ಮರಿ ತೆಂಡೂಲ್ಕರ್‌ಗೆ ಭಾವನಾತ್ಮಕ ಪತ್ರ ಬರೆದ ಅಕ್ಕ ಸಾರಾ

ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿನಯದ, ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಈ ವರ್ಷ ಸೂಪರ್ ಹಿಟ್ ಆಗಿತ್ತು. ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ತ್ರಿಬಲ್ ಆರ್ ಮೊದಲ ಸ್ಥಾನದಲ್ಲಿದೆ. ಭಾರತದಾದ್ಯಂತ ಹೊಸ ಸಂಚಲನವನ್ನೇ ಮೂಡಿಸಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಚಿತ್ರ, 2ನೇ ಸ್ಥಾನದಲ್ಲಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ದೇಶ, ವಿದೇಶಗಳಲ್ಲೂ ಸದ್ದು ಮಾಡಿತ್ತು. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಕೆಜಿಎಫ್ 3ನೇ ಸ್ಥಾನದಲ್ಲಿದೆ. ಕಮಲ್ ಹಾಸನ್ ಅವರ ಬ್ಲಾಕ್ಬಸ್ಟರ್ ಚಿತ್ರ ವಿಕ್ರಮ್ , ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ 4ನೇ ಸ್ಥಾನದಲ್ಲಿದೆ. ಕನ್ನಡದಲ್ಲಿ ಹೊಸ ಹೊಸ ದಾಖಲೆ ಬರೆದ ಕಾಂತಾರ ಸಿನಿಮಾ ಐಎಂಡಿಬಿ ಟಾಪ್ 10 ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಬಹುಭಾಷಾ ನಟ ಮಾಧವನ್ ಅವರ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಸಿನಿಮಾ, 6ನೇ ಸ್ಥಾನದಲ್ಲಿದೆ. ಶಶಿ ಕಿರಣ್ ನಿರ್ದೇಶನದ ಮೇಜರ್ ಸಿನಿಮಾ, ಐಎಂಡಿಬಿ ಟಾಪ್ 10 ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಹನು ರಾಘವಪುಡಿ ಬರೆದು ನಿರ್ದೇಶಿಸಿದ ತೆಲುಗು ಭಾಷೆಯ ರೊಮ್ಯಾಂಟಿಕ್ ಸಿನಿಮಾ ಸೀತಾ ರಾಮಂ, ಟಾಪ್ 10 ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಮಣಿರತ್ನಂ ಅವರ ಅದ್ಭುತ ಸಿನಿಮಾ ಪೊನ್ನಿಯಿನ್ ಸೆಲ್ವನ್, ಐಎಂಡಿಬಿ ಟಾಪ್ 10 ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ 777 ಚಾರ್ಲಿ, ಐಎಂಡಿಬಿ ಟಾಪ್ 10 ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

suddiyaana