ಕರ್ನಾಟಕದಲ್ಲಿ ಈ ಬಾರಿ ಸಿಕ್ಕಾಪಟ್ಟೆ ಧಗೆ! – ರಾಜ್ಯದ ಈ ಭಾಗದಲ್ಲಿ ಮೈ ಸುಡಲಿದೆ ರಣಬಿಸಿಲು!

ಕರ್ನಾಟಕದಲ್ಲಿ ಈ ಬಾರಿ ಸಿಕ್ಕಾಪಟ್ಟೆ ಧಗೆ! – ರಾಜ್ಯದ ಈ ಭಾಗದಲ್ಲಿ ಮೈ ಸುಡಲಿದೆ ರಣಬಿಸಿಲು!

ಮಾರ್ಚ್‌ ಆರಂಭವಾಗುತ್ತಿದ್ದಂತೆ ಬೇಸಿಗೆ ಕಾಲ ಕೂಡ ಶುರುವಾಗ್ತಿದೆ. ಇದೀಗ ರಾಜ್ಯದಲ್ಲಿ ತಾಪಮಾನ ಕೂಡ ದಿನೇ ದಿನೆ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯದ ಜನರಿಗೆ ಹವಾಮಾನ ಇಲಾಖೆ ಎಚ್ಚರಿಗೆ ನೀಡಿದೆ. ಈ ಬಾರಿ ಕರ್ನಾಟಕದಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ದಿವಾನ್‌ ಮನೆಗೆ ಗೌತಮ್ ರೀ ಎಂಟ್ರಿ!‌  – ಗೌತಮ್‌ ಆರ್ಭಟಕ್ಕೆ ಜೈದೇವ್‌ ಗಪ್‌ಚುಪ್!‌

ಕರ್ನಾಟಕದಲ್ಲಿ ಈ ವರ್ಷ ವಿಪರೀತ ಬಿಸಿಲು ಇರಲಿದೆಕೆಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಬಹುದು. ಅಲ್ಲದೆ, ಫೆಬ್ರವರಿ 15 ರಿಂದ ತಾಪಮಾನವು ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಬೇಸಿಗೆಯ ಆರಂಭವೂ ಆಗಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಈಗಾಗಲೇ ಕಲಬುರಗಿ, ಹಾವೇರಿ, ಬಾಗಲಕೋಟೆ, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ವರದಿಯಾಗಿದ್ದು, 2 ರಿಂದ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳ ಕಂಡುಬಂದಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನಷ್ಟು ಹೆಚ್ಚಾಗಲಿದ್ದು, ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 42 ರಿಂದ 45 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಲಿದೆ. ಬೆಂಗಳೂರಿನಲ್ಲಿ ಕೂಡ ತಾಪಮಾನ 39 ಡಿಗ್ರಿಗೆ ತಲುಪಲಿದೆ ಎಂದು ಮಾಹಿತಿ ನೀಡಿದೆ.

ಈ ಕುರಿತು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿ ಸಿಎಸ್ ಪಾಟೀಲ್ ಮಾಹಿತಿ ನೀಡಿದ್ದು, ಮಾ.1ರಿಂದ ಬೇಸಿಗೆ ಆರಂಭವಾಗಲಿದ್ದು, ಆದರೆ ಬೇಸಿಗೆಗಿಂತ ಮೊದಲೇ ಫೆಬ್ರವರಿಯಲ್ಲಿ ಬಿಸಿಲು ಹೆಚ್ಚಾಗಿದೆ. ಜಾಗತಿಕ ತಾಪಮಾನ, ತೇವಾಂಶ ಕೊರತೆಯಿಂದ ಬಿಸಿಲು ಹೆಚ್ಚಿರಲಿದೆ ಎಂದು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *