ಹೊಸ ಕ್ರಿಕೆಟ್‌ ಟೀಂ ಕಟ್ಟುತ್ತಿದ್ದಾರಾ ಧೋನಿ? – ಕೂಲ್‌ ಕ್ಯಾಪ್ಟನ್‌ ಹೇಳಿದ್ದೇನು?  

ಹೊಸ ಕ್ರಿಕೆಟ್‌ ಟೀಂ ಕಟ್ಟುತ್ತಿದ್ದಾರಾ ಧೋನಿ? – ಕೂಲ್‌ ಕ್ಯಾಪ್ಟನ್‌ ಹೇಳಿದ್ದೇನು?  

ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಮುಂದೇನು ಮಾಡ್ತಾರೆ ಅನ್ನೋ ಪ್ರಶ್ನೆಗೆ ಕೂಲ್ ಆದ ಉತ್ತರ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿಗೆ ಬೆದರಿಕೆ.. ಆರ್‌ಸಿಬಿ ಅಭ್ಯಾಸ ರದ್ದು! – ನಾಲ್ವರು ಶಂಕಿತ ಉಗ್ರರು ಅರೆಸ್ಟ್‌

ಎಂ.ಎಸ್ ಧೋನಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಇದು ಮತ್ತೊಮ್ಮೆ ಪುಟಿದೇಳುವ ಸಮಯ ಆಗಿದೆ. ಬಹಳ ಮುಖ್ಯವಾದ ಕಾರ್ಯಕ್ಕೆ ಮುಂದಾಗುವ ಸಮಯವು ಇದಾಗಿದೆ. ನಾನು ನನ್ನ ಸ್ವಂತ ಟೀಮ್‌ ಕಟ್ಟುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಹೊಸ ಟೀಮ್ ಕಟ್ಟುತ್ತೇನೆ ಎಂದು ಅನೌನ್ಸ್ ಮಾಡಿರೋದು ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಧೋನಿ ಅವರ ಈ ಪೋಸ್ಟ್‌ಗೆ ಕಮೆಂಟ್‌ಗಳ ಸುರಿಮಳೆ ಹರಿದು ಬಂದಿದ್ದು, ಲೆಜೆಂಡ್ ಈಸ್ ಲೆಜೆಂಡ್ ಎಂದು ಶುಭ ಹಾರೈಸಿದ್ದಾರೆ. ಮಹೀ ಫ್ಯಾನ್ಸ್‌ ಅಂತೂ ಹೊಸ ತಂಡ ಕಟ್ಟಿ ಐಪಿಎಲ್‌ಗೆ ಧೋನಿ ಎಂಟ್ರಿ ಕೊಡಲಿ ಎಂದು ಶುಭ ಕೋರಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಕನ್ನಡಿಗರನ್ನು ನಿಮ್ಮ ತಂಡದಲ್ಲಿ ಸೇರಿಸಿಕೊಳ್ಳಿ ಅನ್ನೋ ಸಲಹೆಗಳನ್ನು ನೀಡಿದ್ದಾರೆ.

Shwetha M