ಕೊಹ್ಲಿ ಕ್ಯಾಪ್ಟನ್ಸಿಗೆ ರೋಹಿತ್‌ ಫಿದಾ! ಚಹಾರ್ ಬ್ಯಾಟ್ ಹುಡುಕ್ತಾರಾ ಮೋದಿ?
ಪಿಚ್‌ನಲ್ಲೇ ಬವುಮಾ & ಡಿ ಕಾಕ್ ಫೈಟ್

ಕೊಹ್ಲಿ ಕ್ಯಾಪ್ಟನ್ಸಿಗೆ ರೋಹಿತ್‌ ಫಿದಾ! ಚಹಾರ್ ಬ್ಯಾಟ್ ಹುಡುಕ್ತಾರಾ ಮೋದಿ?ಪಿಚ್‌ನಲ್ಲೇ ಬವುಮಾ & ಡಿ ಕಾಕ್ ಫೈಟ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ,  ವಿರಾಟ್ ಕೊಹ್ಲಿ ಅವರ ಟೆಸ್ಟ್ ನಾಯಕತ್ವದ ದಿನಗಳನ್ನು ಮುಕ್ತಕಂಠದಿಂದ ಶ್ಲಾಘಿಸುವ ಮೂಲಕ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. “ವಿರಾಟ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಾಗ ಅವರು ಮಾಡಿದ ಸಾಧನೆ ನಿಜಕ್ಕೂ ಅದ್ಭುತ. ನಾನು ಕೊಹ್ಲಿ ಅವರ ಟೆಸ್ಟ್ ನಾಯಕತ್ವದ ದೊಡ್ಡ ಅಭಿಮಾನಿ” ಎಂದು ಹೇಳಿಕೊಂಡಿದ್ದಾರೆ.

ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಶ್ರೀಲಂಕಾ ಎದುರಾಳಿ. ಮಳೆಯಿಂದ ಭಾರತ–ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ–ನೇಪಾಳ ಕ್ವಾರ್ಟರ್‌ಫೈನಲ್‌ಗಳು ರದ್ದಾದ ಬಳಿಕ, ಶ್ರೇಯಾಂಕದ ಆಧಾರದಲ್ಲಿ ಭಾರತ ಮತ್ತು ಶ್ರೀಲಂಕಾ ಸೆಮಿಫೈನಲ್‌ಗೆ ಪ್ರವೇಶಿಸಿವೆ. ಅಕ್ಟೋಬರ್ 1ರಂದು ಸೆಮಿಫೈನಲ್ ನಡೆಯಲಿದೆ.

ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅವಧಿ ಶೀಘ್ರದಲ್ಲೇ ಕೊನೆಗೊಳ್ಳಲಿದ್ದು, ನೂತನ ಅಧ್ಯಕ್ಷರ ನೇಮಕಕ್ಕೆ ಮಂಡಳಿ ಸಜ್ಜಾಗಿದೆ. ಈ ಬೆನ್ನಲ್ಲೇ ಮಾಜಿ ನಾಯಕ ಸುನಿಲ್ ಗವಾಸ್ಕರ್, ಮುಂದಿನ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಆಯ್ಕೆ ಸಮಿತಿಯ ಅಧ್ಯಕ್ಷ ಹುದ್ದೆ ಗೌರವ ತಂದರೂ, ಇತರ ಸದಸ್ಯರ ತಪ್ಪು ನಿರ್ಧಾರಗಳಿಗೂ ಅಧ್ಯಕ್ಷರೇ ಬಲಿಪಶುವಾಗಬೇಕಾಗುತ್ತದೆ ಮತ್ತು ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಗವಾಸ್ಕರ್ ಹೇಳಿದ್ದಾರೆ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ODI ಸೆಪ್ಟೆಂಬರ್ 30ರಂದು ಗುವಾಹಟಿಯಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 1-0 ಮುನ್ನಡೆಯಲ್ಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ ಸರಣಿ ಮುನ್ನಡೆ ಹೆಚ್ಚಿಸಿಕೊಳ್ಳುವ ಗುರಿಯಲ್ಲಿದೆ.

WPL 2027ರ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಐದು ತಂಡಗಳು ಒಟ್ಟು 63 ಆಟಗಾರರನ್ನು ಉಳಿಸಿಕೊಂಡಿದ್ದು, 23 ವಿದೇಶಿ ಆಟಗಾರರು ಇದರಲ್ಲಿದ್ದಾರೆ. ಇನ್ನೂ 27 ಸ್ಲಾಟ್‌ಗಳು, ಅದರಲ್ಲಿ 7 ವಿದೇಶಿ ಸ್ಥಾನಗಳು ಖಾಲಿ ಉಳಿದಿವೆ.    WPL ಹರಾಜು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್​ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಅಂತಿಮ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿದೆ. ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಮರಳಿರುವುದು ಆರ್‌ಸಿಬಿ ಪಾಳಯಕ್ಕೆ ಆನೆ ಬಲ ತಂದಿದ್ದರೆ, ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ರೇಸ್ ಹ್ಯಾರಿಸ್ ಸೇರಿ ನಾಲ್ವರು ಆಟಗಾರ್ತಿಯರನ್ನು ಆರ್​ಸಿಬಿ ಬಿಡುಗಡೆ ಮಾಡಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನ ಗೆದ್ದ ತಂಡದ ಭಾಗವಾಗಿದ್ದ ಜಿ. ಕಮಲಿನಿಯನ್ನು ಮುಂಬೈ ಇಂಡಿಯನ್ಸ್ WPL 2027ಕ್ಕೆ ಉಳಿಸಿಕೊಂಡಿಲ್ಲ. 18 ವರ್ಷದ ಕಮಲಿನಿ WPLನಲ್ಲಿ ಅತ್ಯಂತ ಕಿರಿಯ ಡೆಬ್ಯೂ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದರು. ಇದೀಗ ಹರಾಜಿನಲ್ಲಿ ಹೊಸ ತಂಡ ಪಡೆಯುವ ಅವಕಾಶ ಅವರ ಮುಂದಿದೆ.

ರಿಷಭ್ ಪಂತ್ ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕತ್ವ ವಹಿಸಲಿದ್ದಾರೆ. ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯ ಅಕ್ಟೋಬರ್ 1ರಿಂದ 5ರವರೆಗೆ ಶ್ರೀನಗರದಲ್ಲಿ ನಡೆಯಲಿದೆ. ಸರಫರಾಜ್ ಖಾನ್ ಉಪನಾಯಕರಾಗಿದ್ದಾರೆ. ನಾಲ್ಕು ದಶಕಗಳ ಬಳಿಕ ಶ್ರೀನಗರದಲ್ಲಿ ಉನ್ನತ ಮಟ್ಟದ ದೇಶೀಯ ಕ್ರಿಕೆಟ್ ನಡೆಯುತ್ತಿರುವುದು ವಿಶೇಷ.

ಟೀಮ್ ಇಂಡಿಯಾದ ಸ್ಟಾರ್​ ವೇಗಿ ದೀಪಕ್ ಚಹಾರ್ ಇದೀಗ ಕಳ್ಳತನದ ಬಗ್ಗೆ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.  ಪ್ರ್ಯಾಕ್ಟೀಸ್​ ಮಾಡುತ್ತಿದ್ದ ವೇಳೆ 1.5 ಲಕ್ಷ ಮೌಲ್ಯದ ಮೂರು ಬ್ಯಾಟ್​ಗಳನ್ನು ಯಾರೋ ಕಳ್ಳತನ ಮಾಡಿದ್ದಾರೆ. ಈಗ ಇದನ್ನು ವಾಪಾಸ್​ ಪಡೆಯಲು ನಾನು ಪೊಲೀಸರು, ಉತ್ತರ ಪ್ರದೇಶ ಸಿಎಂ ಯೋಗಿ  ಪ್ರಧಾನಿ ನರೇಂದ್ರ ಮೋದಿ? ಯಾರನ್ನ ಕೇಳಬೇಕು ಎಂದಿದ್ದಾರೆ. ಇದ್ದನ ನೋಡಿದವರು ನಿಜಕ್ಕೂ ಕಳೆದು ಹೋಗಿದ್ಯಾ ಅಥವಾ ಚಹಾರ್ ತಮಾಷೆ ಮಾಡುತ್ತಿದ್ದಾರಾ ಅನ್ನೋ ಪ್ರಶ್ನೆ ಕೇಳುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾ ನಾಯಕ ತೆಂಬಾ ಬವುಮಾ ಮತ್ತು ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್ ನಡುವೆ ಮೈದಾನದಲ್ಲೇ ವಾಗ್ವಾದ ನಡೆದಿದೆ. ಲಿಝಾಡ್ ವಿಲಿಯಮ್ಸ್ ಎಸೆದ ಯಾರ್ಕರ್ ಬಾರ್ಟ್ಲೆಟ್ ಅವರ ಪ್ಯಾಡ್‌ಗೆ ಬಡಿದಾಗ, ಸೌತ್ ಆಫ್ರಿಕಾ ಆಟಗಾರರು ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿದರು. ಅಂಪೈರ್ ನಾಟ್‌ಔಟ್ ನೀಡಿದರು. ವಿಲಿಯಮ್ಸ್ ಡಿಆರ್‌ಎಸ್‌ಗೆ ಮನವಿ ಮಾಡಿದರೆ, ಡಿ ಕಾಕ್ ಚೆಂಡು ಲೆಗ್ ಸ್ಟಂಪ್‌ನಿಂದ ಹೊರಗೆ ಹೋಗುತ್ತಿದೆ ಎಂದು ರಿವ್ಯೂ ಬೇಡ ಎಂದು ಬವುಮಾಗೆ ಸನ್ನೆ ಮಾಡಿದರು. ಆದರೂ ಬವುಮಾ ರಿವ್ಯೂ ಪಡೆದರು. ಇದರಿಂದ ಅಸಮಾಧಾನಗೊಂಡ ಡಿ ಕಾಕ್‌ಗೆ ಬವುಮಾ ಕೈಬೆರಳು ತೋರಿಸಿ ಸುಮ್ಮನಿರುವಂತೆ ಸೂಚಿಸಿದರು.

Kishor KV

Leave a Reply

Your email address will not be published. Required fields are marked *