ಸಿಲಿಕಾನ್ ಸಿಟಿಯಲ್ಲಿ IPL ಕ್ರೇಜ್! – ಟಿಕೆಟ್ ಗಾಗಿ ರಾತ್ರಿಯಿಡೀ ಜಾಗರಣೆ ಮಾಡಿದ RCB ಫ್ಯಾನ್ಸ್

ಸಿಲಿಕಾನ್ ಸಿಟಿಯಲ್ಲಿ IPL ಕ್ರೇಜ್! – ಟಿಕೆಟ್ ಗಾಗಿ ರಾತ್ರಿಯಿಡೀ ಜಾಗರಣೆ ಮಾಡಿದ RCB ಫ್ಯಾನ್ಸ್

ಇನ್ನು ಒಂದು ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್​ ಹಬ್ಬ.. ಜಗತ್ತಿನ ಅತೀ ದೊಡ್ಡ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಕೋಟ್ಯಂತರ ಕ್ರಿಕೆಟ್ ಪ್ರಿಯರನ್ನು ಮತ್ತೆ ಟಿವಿ ಬುಡಕ್ಕೆ ತಂದು ಕೂರಿಸಿದೆ. ಸ್ಟೇಡಿಯಂನಲ್ಲಿ ಮ್ಯಾಚ್​ ನೋಡಲು ಟಿಕೆಟ್​ಗಾಗಿ ಜನರು ಮುಗಿ ಬೀಳ್ತಿದ್ದಾರೆ. ಕಳೆದ 15 ಆವೃತ್ತಿಗಳಲ್ಲಿ ಆರ್ ಸಿ ಬಿ ತಂಡ ಕಪ್ ಗೆಲ್ಲದೇ ಇದ್ರೂ ಕೂಡ ಅಭಿಮಾನಿಗಳು ಮಾತ್ರ ಕಪ್ ನಮ್ದೇ ಅಂತಾ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ: ಐಪಿಎಲ್ ಆರಂಭಕ್ಕೆ ಇನ್ನು ಮೂರೇ ದಿನ -ಆರ್‌ಸಿಬಿ ಪಂದ್ಯ ಯಾವಾಗ ? ಎಲ್ಲಿ?

ಇನ್ನು ಸಿಲಿಕಾನ್ ಸಿಟಿಯಲ್ಲೂ ಐಪಿಎಲ್ ಕ್ರೇಜ್ ಜೋರಾಗಿಯೇ ಇದೆ. ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ – ಮುಂಬೈ, ಆರ್ ಸಿಬಿ – ಎಲ್ ಎಸ್ ಜಿ ನಡುವಿನ ಪಂದ್ಯಗಳ ಟಿಕೆಟ್ ವಿರತಣೆ ಮಾಡಲಾಗಿದ್ದು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಪಂದ್ಯದ ಟಿಕೆಟ್ ಪಡೆಯಲು ಅಭಿಮಾನಿಗಳು ರಾತ್ರಿ 1 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದು ಟಿಕೆಟ್ ಪಡೆಯಲು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ಕಬ್ಬನ್ ಪಾರ್ಕ್ ವೃತ್ತದಿಂದ ಶುರುವಾಗಿ, ಅನಿಲ್ ಕುಂಬ್ಳೆ ವೃತ್ತದವರೆಗೂ ಸುಮಾರು 10 ಸಾವಿರಕ್ಕೂ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು 2ಕಿಲೋ ಮೀಟರ್ ಗೂ ಹೆಚ್ಚು ದೂರ ಕ್ಯೂ ನಿಂತಿದ್ದರು ಅಂತಾ ವರದಿಯಾಗಿದೆ.

suddiyaana