ವಿಶ್ವದಲ್ಲಿ ವರ್ಷಕ್ಕೆ ಕೆಲಸದ ಒತ್ತಡಕ್ಕೆ ಬಲಿಯಾಗುತ್ತಿದ್ದಾರೆ 8.4 ಲಕ್ಷಕ್ಕೂ ಹೆಚ್ಚು ಜನ!

ಉದ್ಯೋಗ ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯ. ಕುಟುಂಬಕ್ಕಾಗಿ, ತನಗಾಗಿ, ತನ್ನವರಿಗಾಗಿ ಪ್ರತಿಯೊಬ್ಬ ವ್ಯಕ್ತಿ ಕಷ್ಟ ಪಟ್ಟು ಕೆಲಸ ಮಾಡುತ್ತಾನೆ. ತಮ್ಮ ಹುಟ್ಟೂರನ್ನು ಬಿಟ್ಟು ನೂರಾರು ಕಿಲೋ ಮೀಟರ್ ದೂರದ ಊರಿನಲ್ಲಿ ಕೆಲಸ ಮಾಡ್ತಾರೆ. ಆದರೆ, ಇತ್ತೀಚೆಗೆ ಜಿನೀವಾದ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಕೆಲಸದ ಸ್ಥಳದಲ್ಲಿನ ಮಾನಸಿಕ ಒತ್ತಡದಿಂದಾಗಿ ಜಾಗತಿಕವಾಗಿ ಪ್ರತಿ ವರ್ಷ 8.4 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಅಂಕಿಅಂಶವು ಕೆಲಸದ ನಿಯಮಗಳು ಎಷ್ಟು ಮಾರಕವಾಗುತ್ತಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.
ಇದನ್ನೂ ಓದಿ: ನಿಮಗೆ ಹಣದ ಸಮಸ್ಯೆ ಇದ್ಯಾ, ಪರಿಹಾರ ಬೇಕಾ? – ಶುಕ್ರವಾರ ಈ ಬಣ್ಣದ ಬಟ್ಟೆ ಧರಿಸಿ ಲಕ್ಷ್ಮಿ ದೇವಿಯನ್ನ ಪೂಜೆಸಿ
ಕೆಲಸದ ಒತ್ತಡ ಕೇವಲ ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮೆದುಳಿನ ಪಾರ್ಶ್ವವಾಯುವಿನಂತಹ ಗಂಭೀರ ದೈಹಿಕ ಸಮಸ್ಯೆಗಳಿಗೂ ದಾರಿಯೊದಗಿಸುತ್ತವೆ. ಕೆಲವು ಸಂದರ್ಭಗಳಲ್ಲಿ, ವಿಪರೀತ ಕೆಲಸದ ಒತ್ತಡವು ವ್ಯಕ್ತಿಯನ್ನು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೂ ಕಾರಣವಾಗುತ್ತೆ.
ಕೆಲಸದ ಸ್ಥಳದ ಮಾನಸಿಕ ಆರೋಗ್ಯವು ಮುಖ್ಯವಾಗಿ ಮೂರು ಅಂಶಗಳನ್ನು ಅವಲಂಬಿಸಿದೆ.
- ಮೊದಲನೆಯದಾಗಿ, ಉದ್ಯೋಗಿ ತನ್ನ ಗುರಿಯನ್ನು ತಲುಪಲು ಕೆಲಸದ ಪ್ರಕ್ರಿಯೆಗಳನ್ನು ಎಷ್ಟು ಸುಗಮವಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದು
- ಎರಡನೆಯದಾಗಿ, ಕಚೇರಿಯ ವಾತಾವರಣ ಹಾಗೂ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಉದ್ಯೋಗಿ ಹೊಂದಿರುವ ಸಂಬಂಧಗಳು. ಇವುಗಳಲ್ಲಿ ಕಹಿ ಉಂಟಾದಾಗ ಮಾನಸಿಕ ಅಸ್ವಸ್ಥತೆ ಹೆಚ್ಚಾಗುತ್ತದೆ.
- ಮೂರನೆಯದಾಗಿ, ಕಚೇರಿಯ ನೀತಿಗಳು; ಉದಾಹರಣೆಗೆ ವೈಯಕ್ತಿಕ ಅಗತ್ಯಗಳಿಗೆ ಸಿಗುವ ರಜೆಗಳು ಮತ್ತು ಆರೋಗ್ಯ ವಿಮೆಯಂತಹ ಸೌಲಭ್ಯಗಳು ಉದ್ಯೋಗಿಯ ಮನೋಸ್ಥಿತಿಯನ್ನು ನಿರ್ಧರಿಸುತ್ತವೆ.
ಈ 8.4 ಲಕ್ಷ ಸಾವುಗಳ ಅಂಕಿಅಂಶವು ಐದು ಪ್ರಮುಖ ಅಪಾಯಕಾರಿ ಅಂಶಗಳ ಆಧಾರದ ಮೇಲೆ ಬೆಳಕಿಗೆ ಬಂದಿದೆ. ಕೆಲಸದ ವಿಪರೀತ ಒತ್ತಡ, ಮಾಡುವ ಕೆಲಸಕ್ಕೆ ತಕ್ಕಷ್ಟು ಪ್ರತಿಫಲ ಅಥವಾ ವೇತನ ಇಲ್ಲದಿರುವುದು, ಕೆಲಸದ ಅಭದ್ರತೆ ಮತ್ತು ವಿಶ್ರಾಂತಿ ಇಲ್ಲದ ದೀರ್ಘ ಕೆಲಸದ ಅವಧಿ ಇವುಗಳೇ ಆ ಐದು ಅಂಶಗಳು. ILO ಈ ದತ್ತಾಂಶವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (GBD) ಅಧ್ಯಯನದೊಂದಿಗೆ ಸಮೀಕರಿಸಿ ಈ ಆತಂಕಕಾರಿ ವರದಿಯನ್ನು ಸಿದ್ಧಪಡಿಸಿದೆ.

ನೋಡಿರಿ

