ಪಾಕ್ ಪ್ರವಾಸದಲ್ಲಿರುವ ಇಂಗ್ಲೆಂಡ್ ಆಟಗಾರರ ಆರೋಗ್ಯದಲ್ಲಿ ಏರುಪೇರು..!

ಪಾಕ್ ಪ್ರವಾಸದಲ್ಲಿರುವ ಇಂಗ್ಲೆಂಡ್ ಆಟಗಾರರ ಆರೋಗ್ಯದಲ್ಲಿ ಏರುಪೇರು..!

17 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ತಂಡದ ಕ್ರಿಕೆಟ್ ಆಟಗಾರರ ಆರೋಗ್ಯದಲ್ಲಿ ಏರುಪೇರಾಗಿದೆ. ರಾವಲ್ಪಿಂಡಿಯಲ್ಲಿ ಡಿಸೆಂಬರ್ 1 ರಂದು ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಬೇಕಿತ್ತು. ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗಲೇ ಆಟಗಾರರಿಗೆ ಅನಾರೋಗ್ಯ ಕಾಡಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕ್ ನೆಲಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ತಂಡದ ಮೇಲೆ ವೈರಸ್ ದಾಳಿ ಮಾಡಿದೆ ಎನ್ನಲಾಗುತ್ತಿದೆ. ಟೀಮ್ ನ ಪ್ರಮುಖ ಆಟಗಾರರಾದ ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ಸ್ಟನ್, ಮೊಯಿನ್ ಅಲಿಯಂತವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಆಟಗಾರರು ಆಡುವ ಸ್ಥಿತಿಯಲ್ಲೂ ಇಲ್ಲ ಎನ್ನಲಾಗಿದೆ.

ಇದನ್ನೂ ಓದಿ :  ಮಳೆಗೆ ಆಹುತಿಯಾದ ಮೂರನೇ ಪಂದ್ಯ – ಕಿವೀಸ್ ವಿರುದ್ಧ ಏಕದಿನ ಸರಣಿ ಸೋತ ಭಾರತ

ಪಾಕ್ ಪ್ರವಾಸ ಮಾಡಿರುವ ಒಟ್ಟು ತಂಡದಲ್ಲಿ ಕೇವಲ 5 ಆಟಗಾರರು ಮಾತ್ರ ಆರೋಗ್ಯವಾಗಿದ್ದಾರೆ.  ಮೊದಲ ಟೆಸ್ಟ್​ಗಾಗಿ ಇಂಗ್ಲೆಂಡ್ ಮಂಡಳಿ ಮಂಗಳವಾರವೇ ತನ್ನ ತಂಡವನ್ನು ಪ್ರಕಟಿಸಿತ್ತು. ಆದರೆ ಪ್ರಕಟಿಸಿದ 11 ಆಟಗಾರರ ತಂಡದಲ್ಲಿ 7 ಆಟಗಾರರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಇಂಗ್ಲೆಂಡ್ ಆಟಗಾರರು, ಅಭ್ಯಾಸ ಪಂದ್ಯ ಕೂಡಾ ಆಡಿರಲಿಲ್ಲ. ಜೊತೆಗೆ ಪ್ರಾಕ್ಟೀಸ್ ಕೂಡಾ ಮಾಡಲು ಅಸಾಧ್ಯವಾಗಿದೆ.

ಟಿ20 ವಿಶ್ವಕಪ್​ಗೂ ಮುನ್ನ ಟಿ20 ಸರಣಿಗಾಗಿ ಪಾಕ್ ಪ್ರವಾಸ ಮಾಡಿದ್ದ ಇಂಗ್ಲೆಂಡ್ ತಂಡದ ಆಟಗಾರರು ಪಾಕ್ ಮಂಡಳಿ ನೀಡಿದ್ದ ಊಟೋಪಚಾರದ ಬಗ್ಗೆ ಅಪಸ್ವರ ಎತ್ತಿದ್ದರು. ತಂಡದ ಆಲ್​ರೌಂಡರ್ ಮೊಯಿನ್ ಅಲಿ ನನಗೆ ಲಾಹೋರ್​ನಲ್ಲಿ ನೀಡಿದ್ದ ಊಟ ಇಷ್ಟವಾಗಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಈ ಕಾರಣಕ್ಕಾಗಿಯೇ ಈ ಬಾರಿ ಟೆಸ್ಟ್ ಸರಣಿಗಾಗಿ ಪಾಕ್ ಪ್ರವಾಸ ಮಾಡಿರುವ ಇಂಗ್ಲೆಂಡ್‌ ತಂಡ ತಮ್ಮ ತಂಡದೊಂದಿಗೆ ಬಾಣಸಿಗರನ್ನು ಕರೆತಂದಿದೆ. ಆದರೆ ಇದರ ಹೊರತಾಗಿಯೂ ತಂಡದ ಆಟಗಾರರ ಆರೋಗ್ಯವು ಹದಗೆಟ್ಟಿರವುದು ಮಂಡಳಿಯನ್ನು ಚಿಂತೆಗೀಡುಮಾಡಿದೆ.

suddiyaana