ಚಿನ್ನದ ಗಣಿ ತೋಡುವಾಗ ಗುಡ್ಡ ಕುಸಿದು 30 ಮಂದಿ ಸಾವು!

ಚಿನ್ನದ ಗಣಿ ತೋಡುವಾಗ ಗುಡ್ಡ ಕುಸಿದು 30 ಮಂದಿ ಸಾವು!

ಚಿನ್ನದ ಆಸೆಗಾಗಿ ಗಣಿ ತೋಡಲು ಕಾರ್ಮಿಕರು ಹೋಗಿದ್ದು, ಈ ವೇಳೆ ಗುಡ್ಡ ಕುಸಿದಿದೆ. ಪರಿಣಾಮ ಸುಮಾರು 30 ಮಂದಿ ಸಾವನ್ನಪ್ಪಿರುವ ಘಟನೆ ವೆನೆಜುವೆಲಾದ ಬೊಲಿವರ್ ನಲ್ಲಿ ನಡೆದಿದೆ.

ಬೊಲಿವರ್ ರಾಜ್ಯದಲ್ಲಿ ಅಕ್ರಮವಾಗಿ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತಿತ್ತು ನೂರಾರು ಕಾರ್ಮಿಕರು ಈ ಚಿನ್ನದ ಗಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕಾರ್ಮಿಕರ ಮೇಲೆ ಮಣ್ಣು ಕುಸಿದಿದೆ. ಈ ಅವಘಡದಲ್ಲಿ ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಮಣ್ಣಿನಿಂದ  23 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಸ್ಥಳೀಯ ಅಧಿಕಾರಿ ಯೋರ್ಗಿ ಆರ್ಸಿನಿಗಾ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಚಲೋ ವೇಳೆ ಪೊಲೀಸರೊಂದಿಗೆ ಘರ್ಷಣೆ –  ರೈತ ಸಾವು, 2 ದಿನಗಳ ಕಾಲ ಪ್ರತಿಭಟನೆ ತಾತ್ಕಾಲಿಕ ಸ್ಥಗಿತ

ನಾಗರಿಕ ರಕ್ಷಣೆಯ ಉಪ ಮಂತ್ರಿ ಕಾರ್ಲೋಸ್ ಪೆರೆಜ್ ಆಂಪ್ಯೂಡಾ ಅವರು X ಟ್ವಿಟ್ಟರ್​ ಖಾತೆಯಲ್ಲಿ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತೆರೆದ ಗಣಿಯಲ್ಲಿ ನೀರಿಲ್ಲದ ಬೃಹತ್​ ಹೊಂಡದಲ್ಲಿ ಕೆಲಸ ಮಾಡುತ್ತಿದ್ದ ಜನರ ಮೇಲೆ ನೆಲದ ಗೋಡೆಯು ನಿಧಾನವಾಗಿ ಕುಸಿಯುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಇದನ್ನು ಕಂಡು ಕೆಲವರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರೆ, ಅನೇಕ ಮಂದಿ ಮಣ್ಣಿನಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ಮಿಲಿಟರಿ, ಅಗ್ನಿಶಾಮಕ ದಳಗಳು ಮತ್ತು ಇತರ ಸಂಸ್ಥೆಗಳು ವಾಯು ಪ್ರದೇಶದ ಮೂಲಕ ಸ್ಥಳಕ್ಕೆ ತಲುಪಿವೆ. ಬದುಕುಳಿದವರ ಹುಡುಕಾಟದಲ್ಲಿ ಸಹಾಯ ಮಾಡಲು ರಕ್ಷಣಾ ತಂಡಗಳನ್ನು ಕ್ಯಾರಕಾಸ್‌ನಿಂದ ವಾಯುಮಾರ್ಗದಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ಅವರು ಹೇಳಿದರು.

Shwetha M