ಮದುವೆಗೂ ಮುನ್ನವೇ ನಟಿ ಗರ್ಭಿಣಿ – ಇಲಿಯಾನಾ ಪಾರ್ಟ್ನರ್ ಬಗ್ಗೆ ಅಭಿಮಾನಿಗಳಿಗೆ ಕುತೂಹಲ..!

ಮದುವೆಗೂ ಮುನ್ನವೇ ನಟಿ ಗರ್ಭಿಣಿ – ಇಲಿಯಾನಾ ಪಾರ್ಟ್ನರ್ ಬಗ್ಗೆ ಅಭಿಮಾನಿಗಳಿಗೆ ಕುತೂಹಲ..!

ನಟಿ ಇಲಿಯಾನಾ ಡಿಕ್ರೂಜ್ ಶೀಘ್ರದಲ್ಲೇ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಆದರೆ, ನಟಿ ಇಲಿಯಾನಾ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಯಾಕೆಂದರೆ ಇಲಿಯಾನಾ ಡಿಕ್ರೂಜ್ ಅವರಿಗೆ ಇನ್ನೂ ಮದುವೆ ಆಗಿಲ್ಲ. ಮದುವೆ ಆಗದೆಯೇ ಅವರು ಗರ್ಭಿಣಿ ಆಗಿದ್ದಾರೆ. ಹಾಗಿದ್ದರೆ ಇಲಿಯಾನಾ ಪಾರ್ಟ್ನರ್ ಯಾರು ಅಂತಾ ತಿಳಿಸಿ ಅಂತಾ ಫ್ಯಾನ್ಸ್ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ.

ಇದನ್ನೂ ಓದಿ:  ಇದು ಚಿಯಾನ್ ವಿಕ್ರಮ್ ಹೌದಾ?… – ‘ತಂಗಲಾನ್’ ಸಿನಿಮಾದಲ್ಲಿ ನೆಚ್ಚಿನ ನಟನ ಲುಕ್ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್..!

ತಾವು ಪ್ರೆಗ್ನೆಂಟ್ ಎಂಬುದನ್ನು ಇಲಿಯಾನಾ ಡಿಕ್ರೂಜ್ ಅವರು ನೇರವಾಗಿ ಹೇಳಿಲ್ಲ. ಇನ್ಸ್ಟಾಗ್ರಾಮ್‌ನಲ್ಲಿ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ. ‘ಕಮಿಂಗ್ ಸೂನ್.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್ ಡಾರ್ಲಿಂಗ್’ ಎಂದು ಇಲಿಯಾನಾ ಡಿಕ್ರೂಜ್ ಅವರು ಬರೆದುಕೊಂಡಿದ್ದಾರೆ. ಅದರ ಜೊತೆ ಮಗುವಿನ ಬಟ್ಟೆ ಮತ್ತು ಅಮ್ಮಎಂಬ ಡಾಲರ್ ಇರುವ ಸರದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಇಲಿಯಾನಾ ಅವರ ತಾಯಿ ಸಮೀರಾ ಡಿಕ್ರೂಜ್ ಕೂಡ ಕಮೆಂಟ್ ಮಾಡಿದ್ದಾರೆ. ‘ನನ್ನ ಮೊಮ್ಮಗುವಿಗೆ ಶೀಘ್ರದಲ್ಲೇ ಈ ಪ್ರಪಂಚಕ್ಕೆ ಸ್ವಾಗತ ಕೋರುವೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇಲಿಯಾನಾ ಡಿಕ್ರೂಜ್ ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆ್ಯಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ನಡೆಸುತ್ತಿದ್ದರು. ನಂತರ ಈ ಜೋಡಿ ಬ್ರೇಕಪ್ ಮಾಡಿಕೊಂಡಿತ್ತು. ಇತ್ತೀಚೆಗೆ ಇಲಿಯಾನಾ ಡಿಕ್ರೂಜ್ ಅವರು ನಟಿ ಕತ್ರಿನಾ ಕೈಫ್ ಸಹೋದರ ಸೆಬ್ಬಾಸ್ಟಿಯನ್ ಲೊರಾನ್ ಮಿಶಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಆದರೆ ಈಗ ತಾವು ಮಗು ಪಡೆಯುತ್ತಿರುವುದು ಯಾರ ಜೊತೆ ಎಂಬುದನ್ನು ಇಲಿಯಾನಾ ತಿಳಿಸಿಲ್ಲ.

suddiyaana