18ನೇ ಸೀಸನ್ ಕಪ್ RCBಗೆ ಫಿಕ್ಸ್ RCB Vs CSK ನಡುವೆ ಫೈನಲ್
ಬಾಬ ಸ್ಫೋಟಕ ಭವಿಷ್ಯ!!

18ನೇ ಸೀಸನ್ ಕಪ್ RCBಗೆ ಫಿಕ್ಸ್  RCB Vs CSK  ನಡುವೆ ಫೈನಲ್ಬಾಬ ಸ್ಫೋಟಕ ಭವಿಷ್ಯ!!

ಈ ಬಾರಿ ಐಪಿಎಲ್‌ ಆರ್‌ಸಿಬಿ ರಾಯಲ್ ಆಗೇ ಎಂಟ್ರಿ ಕೊಟ್ಟಿದೆ.. ಕಂಟಿನ್ಯೂ ಆಗಿ ಎರಡು ಪಂದ್ಯ ಗೆದ್ದು ತನ್ನ ತಾಕತ್ತು ತೋರಿಸಿದೆ.. ಆರ್‌ಸಿಬಿ ಫಾನ್ಸ್‌ಗೆ ಬೆಂಗಳೂರು ಟೀಂ ಸಖತ್ ಕಿಕ್ ಕೊಟ್ಟಿದೆ. ಅಷ್ಟೇ ಕಪ್ ಗೆಲ್ಲೋ ಭರವಸೆಯನ್ನು ನೀಡಿದೆ.  ಈಗ ಫೈನಲ್‌ಗೆ ಆರ್‌ಸಿಬಿ ಹೋಗೆ ಹೋಗುತ್ತೆ ಅನ್ನೋ ಹೋಪ್ ನಡುವೆ  ಐಐಟಿ ಬಾಬ ಹೊಸ ಒಂದು ಭವಿಷ್ಯ ನುಡಿದಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಮಯದಲ್ಲಿ ಐಐಟಿ ಬಾಬ ಎಂದೇ ಖ್ಯಾತಿ ಗೊಂಡಿರುವ ಅಭಯ್ ಸಿಂಗ್ ಭಾರಿ ಸಂಚಲನ ಸೃಷ್ಟಿಸಿದ್ದರು. ಐಐಟಿ ತೊರೆದೆ ಸನ್ಯಾಸತ್ವ ಸ್ವೀಕರಿಸಿದ ಈ ಅಭಯ್ ಸಿಂಗ್ ಇದೀಗ ಐಪಿಎಲ್ ಟೂರ್ನಿ ಕುರಿತು ಭವಿಷ್ಯ ನುಡಿದಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಐಐಟಿ ಬಾಬಾ ಭವಿಷ್ಯ ನುಡಿದು ಎಲ್ಲರ ಕೈಯಿಂದ ಟ್ರೋಲ್ ಆಗಿದ್ದರು. ಕಾರಣ ಪಾಕಿಸ್ತಾನ ವಿರುದ್ಧ ಭಾರತ ಸೋಲು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಭಾರತ ಗೆಲುವು ಸಾಧಿಸಿದ್ದು ಮಾತ್ರವಲ್ಲ, ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಇಷ್ಟೇ ಅಲ್ಲ ಬಾಬಾ ಹೇಳಿದ ಪಾಕಿಸ್ತಾನ ತಂಡ ಭಾರತ ಮಾತ್ರವಲ್ಲ, ಯಾವ ತಂಡದ ವಿರುದ್ಧವೂ ಗೆಲುವು ಕಾಣದೆ ಮೊದಲ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಇದೇ ಬಾಬಾ ಐಪಿಎಲ್ ಭವಿಷ್ಯ  ನುಡಿದಿದ್ದಾರೆ. ಇದು ಖುಷಿ ಜೊತೆ ಭಯಕ್ಕೆ ಕಾರಣವಾಗಿದೆ.

ಐಐಟಿ ಬಾಬ ಪ್ರಕಾರ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ ಎಂದಿದ್ದಾರೆ. ಆರ್‌ಸಿಬಿ ಹಾಗೂ ಸಿಎಸ್‌ಕೆ 2025ರ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಫೈನಲ್ ಪ್ರವೇಶಿಸಲಿದೆ ಎಂದಿದ್ದಾರೆ. ಇಷ್ಟಕ್ಕೆ ಬಾಬಾ ಭವಿಷ್ಯ ಮುಗಿದಿಲ್ಲ. ಫೈನಲ್ ಪಂದ್ಯದಲ್ಲಿ ರೋಚಕ ಹಣಾಹಣಿ ನಡೆಯಲಿದೆ. ಕೊನೆಗೆ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದ್ದಾರೆ. ಐಐಟಿ ಬಾಬ ಈ ಭವಿಷ್ಯ ನುಡಿಯುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳಲ್ಲಿ ಸಂಭ್ರಮಕ್ಕಿಂತ ಆತಂಕ ಹೆಚ್ಚಾಗಿದೆ. ಕಾರಣ ಚಾಂಪಿಯನ್ಸ್ ಟ್ರೋಫಿ ರೀತಿ ಪಾಕಿಸ್ತಾನ ಭಾರತ ವಿರುದ್ದ ಗೆಲ್ಲಲಿದೆ ಎಂದು ಒಂದು ಪಂದ್ಯವನ್ನೂ ಗೆಲ್ಲಲಿಲ್ಲ. ಇದೀಗ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ಅಭಿಮಾನಿಗಳ ಆತಂಕ ಹೆಚ್ಚಿಸಿದ್ದಾರೆ.

ಆರ್‌ಸಿಬಿ ಈ ಬಾರಿ ಉತ್ತಮ ಆರಂಭ ಪಡೆದಿದೆ. ಕಳೆದೆಲ್ಲಾ ಆವೃತ್ತಿಗಳಿಗಿಂತ ತಂಡ ಉತ್ತಮವಾಗಿ ಎಂದು ಸಾಬೀತು ಮಾಡಿದೆ. ಹೀಗಾಗಿ ಐಟಿಟಿ ಬಾಬ ಭವಿಷ್ಯ ನಿಜವಾಗಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.  ಆರ್‌ಸಿಬಿ ಇಷ್ಟು ವರ್ಷ ಟ್ರೋಫಿಗಾಗಿ ಕಾದಿದೆ.  ಬಾಬಾ ಹೇಳಿದಂತೆ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.  2008 ರಿಂದ ಆರ್‌ಸಿಬಿ ಒಂದೇ ಒಂದು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಹಲವಾರು ಬಾರಿ ಫೈನಲ್ ತಲುಪಿದ್ದರೂ, ನಮ್ಮ ಆರ್‌ಸಿಬಿ ಹಡಗು ದಡ ತಲುಪುವ ವೇಳೆ ಮುಳುಗಿತು. ಈ ಸಲ ಬಾಬಾ ಹೇಳಿದಂತೆ ಆರ್‌ಸಿಬಿ ಸಿಎಸ್‌ಕೆನೇ ಫೈನಲ್‌ಗೆ ಬರಲಿ.. ಇದ್ರಲ್ಲಿ ಆರ್‌ಸಿಬಿನೇ ಗೆಲ್ಲಲಿ ಅನ್ನೋದು  ಫ್ಯಾನ್ಸ್ ಬಯಕೆ..

Kishor KV

Leave a Reply

Your email address will not be published. Required fields are marked *