ನಮಸ್ಕಾರ ನಿನಗೆ ಭಾಸ್ಕರ.. ಸೂರ್ಯ ದೇವನಿಗೆ ತಲೆಬಾಗಿದ ಚಿರತೆ
ದೇಹ ಹಾಗೂ ಮನಸ್ಸಿನ ಆರೋಗ್ಯ ಕಾಪಾಡಲು ಯೋಗಾಸನ ಮಾಡುವುದು ಅತ್ಯವಶ್ಯಕ. ಹೀಗಾಗಿ ಹೆಚ್ಚಿನವರು ಯೋಗಾಸಾನ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಂತೂ ಜನರು ಯೋಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಹೀಗಾಗಿ ವಿದೇಶಿಗರೂ ಕೂಡ ಯೋಗಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇಲ್ಲೊಂದು ಚಿರತೆ ಸೂರ್ಯ ನಮಸ್ಕಾರ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆ್ಯಕ್ಟಿವ್ ಆಗಿರುತ್ತಾರೆ. ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಆಸಕ್ತಿಕರ ವಿಡಿಯೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಇದೀಗ ಚಿರತೆಯೊಂದರ ವಿಡಿಯೋ ಪೋಸ್ಟ್ ಮಾಡಿದ್ದು, ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಚಿರತೆ ಬೆನ್ನಟ್ಟಿ ಹೋದ ಹುಲಿ – ಹೀರೋ ಆಗಲು ಹೋಗಿ ಝೀರೋ ಆಗಿದ್ದೇಗೆ?
ವೈರಲ್ ಆದ ವಿಡಿಯೋದಲ್ಲಿ ಚಿರತೆ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಂತೆ ಕಾಣಿಸಿಕೊಂಡಿದೆ. ಈ ಚಿರತೆ ಮುಂಜಾನೆ ಗುಡ್ಡದ ಮೇಲೆ ನಿಂತು ಸ್ಟ್ರೇಚ್ ಮಾಡುತ್ತಿದೆ. ಆದರೆ ವಿಚಿತ್ರ ಎನ್ನುವಂತೆ ಈ ಚಿರತೆ ಮಾಡುತ್ತಿರುವ ಭಂಗಿಗಳೆಲ್ಲವೂ ಸೂರ್ಯ ನಮಸ್ಕಾರ ಮಾಡುವಂತೆ ಹೋಲುತ್ತಿದೆ. ಹೀಗಾಗಿ ಸುಸಂತ ನಂದಾ ಅವರು ಚಿರತೆಯಿಂದ ಸೂರ್ಯ ನಮಸ್ಕಾರ ಅನ್ನೋ ಶೀರ್ಷಿಕೆಯನ್ನು ನೀಡಿದ್ದಾರೆ.
ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಈ ಯೋಗದ ಚಲನೆಗಳನ್ನು ಚಿರತೆಗೆ ಯಾರು ಕಲಿಸಿದ್ದಾರೆ? ಯೋಗ ಶಿಕ್ಷಕರಿಲ್ಲ, ಯುಟ್ಯೂಬ್ ಇಲ್ಲ, ಪುಸ್ತಕಗಳಿಲ್ಲ. ಆದರೂ ಈ ಚಿರತೆ ಇಷ್ಟೊಂದು ಅಚ್ಚುಕಟ್ಟಾಗಿ ಯೋಗ ಮಾಡಲು ಹೇಗೆ ಸಾಧ್ಯ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಫಿಟ್ನೆಸ್ ಫ್ರೀಕ್ ಚಿರತೆ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ನನ್ನ ಮನೆ ನಾಯಿಗಳು ಸಂಜೆ ವೇಳೆ ಹಾಗೇ ಮಾಡುತ್ತವೆ. ಅದು ಸೂರ್ಯ ನಮಸ್ಕಾರ ಅಲ್ಲ, ಬೇಟೆಗೆ ಹೋಗಲು ಸೋಮಾರಿತನ ಎಂದು ಹೇಳಿದ್ದಾರೆ.
Surya Namaskar by the leopard 👌👌
Via @Saket_Badola pic.twitter.com/jklZqEeo89— Susanta Nanda (@susantananda3) March 27, 2023