25 ವರ್ಷದೊಳಗೆ ಮದುವೆಯಾಗದಿದ್ದರೆ ಕಾದಿದೆ ಕಠೋರ ಶಿಕ್ಷೆ!
ಯಾರಾದರೂ ಮದುವೆ ಯಾವಾಗ ಅಂತ ಕೇಳಿದರೆ, ಆಯ್ಯೋ… ಇಷ್ಟು ಬೇಗ ಮದುವೆನಾ ಅಂತ ಹಲವರು ಮೂಗುಮುರಿಯುತ್ತಾರೆ. ಪೋಷಕರು ಮದುವೆ ಆಗು ಎಂದು ಒತ್ತಾಯ ಮಾಡಿದರೆ, ಇನ್ನೂ ಬೇಜಾನ್ ಟೈಮ್ ಇದೆ ಅಂತ ಮದುವೆಯನ್ನು ಹಲವು ವರ್ಷ ಮುಂದೂಡುತ್ತಾರೆ. ಇನ್ನೂ ಕೆಲವರು ಮದುವೆ ಆದ್ರೆ ದೊಡ್ಡ ಸಮಸ್ಯೆ. ಎಂಜಾಯ್ ಮಾಡಲು ಆಗಲ್ಲ ಅಂತ 30 ಕಳೆದು 35 ವರ್ಷವಾದ್ರೂ ಒಂಟಿಯಾಗಿ ಜೀವನ ಕಳೆಯುತ್ತಾರೆ. ಆದರೆ ಈ ದೇಶದಲ್ಲಿ ಮಾತ್ರ 25 ವರ್ಷದೊಳಗೆ ಯುವಕ – ಯುವತಿಯರು ಮದುವೆ ಆಗದಿದ್ರೆ ಕಠೋರ ಶಿಕ್ಷೆ ಕಾದಿದೆಯಂತೆ!
ಮದುವೆ ಅಂದಾಗ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಆಚರಣೆಗಳಿರುತ್ತದೆ. ಅರಿಶಿನ ಶಾಸ್ತ್ರ, ನಾಂದಿ, ಮೆಹೆಂದಿ ಶಾಸ್ತ್ರ ಹೀಗೆ ಹತ್ತು ಹಲವು ಆಚರಣೆಗಳನ್ನು ಮಾಡಲಾಗುತ್ತದೆ. ಆದರೆ ಡೆನ್ಮಾರ್ಕ್ ನಲ್ಲಿ ವಿಚಿತ್ರ ಪದ್ದತಿಯಿದೆ. ಯಾರಾದರೂ ಯುವಕ – ಯುವತಿ 25 ವರ್ಷ ತುಂಬುವುದರೊಳಗೆ ಮದುವೆ ಆಗದಿದ್ದರೆ ಅವರಿಗೆ ಕಠೋರ ಶಿಕ್ಷೆ ನೀಡಲಾಗುತ್ತಂತೆ!
ಇದನ್ನೂ ಓದಿ: ಪ್ರಿಯತಮನನ್ನು ಬಿಟ್ಟು ಬೆಡ್ ಶೀಟ್ ನೇ ಮದುವೆಯಾದ ಯುವತಿ! – ಹಿಂಗೂ ಆಗುತ್ತಾ?
ಡೆನ್ಮಾರ್ಕ್ ನ ಡ್ಯಾನಿಶ್ ಸಮಾಜದಲ್ಲಿ ಯಾರಾದರು ಅವಿವಾಹಿತರಾಗಿದ್ದರೆ, ಆ ಯುವಕ/ ಯುವತಿಯನ್ನು ಮರಕ್ಕೆ ಕಟ್ಟಿ ಅವರ ಮೇಲೆ ದಾಲ್ಚಿನ್ನಿ, ಖಾರದ ಪುಡಿಯನ್ನು ಸುರಿಯಲಾಗುತ್ತದಂತೆ. ಇದು ಅವಿವಾಹಿತರಿಗೆ ಕೊಡುವ ಕಠೋರ ಶಿಕ್ಷೆಯಂತೆ.
ಅಲ್ಲಿನ ಮಾಧ್ಯಮ ವರದಿಗಳ ಪ್ರಕಾರ, ಡೆನ್ಮಾರ್ಕ್‌ನ ಈ ಸಂಪ್ರದಾಯವು ಹಲವು ವರ್ಷಗಳಷ್ಟು ಹಳೆಯದು. ಹಿಂದಿನ ಕಾಲದಲ್ಲಿ ಮಾರಾಟಗಾರರು ಮಸಾಲೆಗಳನ್ನು ಮಾರಾಟ ಮಾಡಲು ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸುತ್ತಿದ್ದರು. ಆಗ ಕೆಲವು ಮನೆಯಲ್ಲಿ ಮದುವೆ ಸಮಯಕ್ಕೆ ಸರಿಯಾಗಿ ನಡೆಯುತ್ತಿರಲಿಲ್ಲ. ಡ್ಯಾನಿಶ್ ಸಮಾಜದಲ್ಲಿ, ಅಂತಹ ಮಾರಾಟಗಾರರನ್ನು ಪೇಪರ್ ಡ್ಯೂಡ್ಸ್ (ಪೆಬರ್ಸ್ವೆಂಡ್ಸ್) ಮತ್ತು ಮಹಿಳೆಯರನ್ನು ಪೇಪರ್ ಮೇಡನ್ಸ್ (ಪೆಬರ್ಮೊ) ಎಂದು ಕರೆಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವರು ಮಸಾಲೆಗಳೊಂದಿಗೆ ಸ್ನಾನ ಮಾಡಲು ಪ್ರಾರಂಭಿಸಿದರು. ಅಂದಿನಿಂದ ಈ ಅಭ್ಯಾಸ ಚಾಲ್ತಿಯಲ್ಲಿದೆ. ಈ ಆಚರಣೆಯ ಸಮಯದಲ್ಲಿ, ಜನರು ದಾಲ್ಚಿನ್ನಿ ಪುಡಿಯನ್ನು ತಲೆಯಿಂದ ಕಾಲಿನವರೆಗೆ ಹಚ್ಚುತ್ತಾರೆ. ಹುಲ್ಲುಗಾವಲು ಪ್ರದೇಶದಲ್ಲಿ ವ್ಯಕ್ತಿಯನ್ನು ಕುಳ್ಳಿರಿಸಿ ಖಾರ ಮಸಾಲೆಯಿಂದ ಅವರಿಗೆ ಸ್ನಾನ ಮಾಡಿಸುತ್ತಾರೆ.
ಭಾರತದಲ್ಲಿನ ವಿವಾಹಗಳಿಗೆ ಸಂಬಂಧಿಸಿದ ಅನೇಕ ಆಚರಣೆಗಳಂತೆ ಡೆನ್ಮಾರ್ಕ್ ನಲ್ಲಿ ಈ ಅಭ್ಯಾಸ ಇದೆ. ಈ ಪದ್ದತಿ ಪ್ರಕಾರ ಅವಿವಾಹಿತ ಹುಡುಗ ಹುಡುಗಿಯರು ಶೀಘ್ರದಲ್ಲೇ ಉತ್ತಮ ಸಂಗಾತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಈ ಪದ್ದತಿಯನ್ನು ಸಾಮೂಹಿಕವಾಗಿ ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ಡೆನ್ಮಾರ್ಕ್‌ನ ಬೀದಿಗಳು ದಾಲ್ಚಿನ್ನಿ ಪುಡಿಯಿಂದ ತುಂಬಿ ತುಳುಕಿರುತ್ತಂತೆ.