ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ – ಚೇಸಿಂಗ್ ಮಾಡಿದರೆ ಸೋಲುತ್ತಾರಾ?

ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ – ಚೇಸಿಂಗ್  ಮಾಡಿದರೆ ಸೋಲುತ್ತಾರಾ?

ಈ ಬಾರಿಯ ವರ್ಲ್ಡ್​​ಕಪ್​​ನಲ್ಲಿ ಆಲ್​​ಮೋಸ್ಟ್ ಎಲ್ಲಾ ಟೀಂಗಳು ಕೂಡ, ಬಹುತೇಕ ಎಲ್ಲಾ ಮ್ಯಾಚ್​​ಗಳಲ್ಲೂ ಫಸ್ಟ್ ಬ್ಯಾಟಿಂಗ್​ನ್ನೇ ಆಯ್ಕೆ ಮಾಡಿಕೊಂಡಿವೆ. ಟಾಸ್ ಗೆದ್ರೆ ಸಾಕು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳೋದು ರೂಢಿಯಾಗಿದೆ. ಟೀಂ ಇಂಡಿಯಾ ಕೂಡ ಬಹುತೇಕ ಮ್ಯಾಚ್​​ಗಳಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿತ್ತು. ಹಾಗಿದ್ರೆ ಎಲ್ರೂ ಟಾಸ್ ಗೆದ್ದಾಗ ಬ್ಯಾಟಿಂಗ್​​ನ್ನೇ ಆಯ್ಕೆ ಮಾಡಿಕೊಳ್ತಿರೋದ್ಯಾಕೆ? ಇದಕ್ಕೆ ನಿಜವಾದ ಕಾರಣ ಏನು? ಫಸ್ಟ್​ ಬ್ಯಾಟಿಂಗ್ ಮಾಡಿದ್ರಷ್ಟೇ ಮ್ಯಾಚ್ ಗೆಲ್ಲೋಕೆ ಸಾಧ್ಯನಾ? ಇವೆಲ್ಲದರ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವರ್ಲ್ಡ್​ ಕ್ರಿಕೆಟ್​​ಗೆ ರಿಷಬ್ ಪಂತ್ ಕಮ್​ಬ್ಯಾಕ್ ಯಾವಾಗ? -2024ರಲ್ಲಿ ಟಿ-20 ವರ್ಲ್ಡ್ ​​ಕಪ್​ ನಲ್ಲಿ ಆಡ್ತಾರಾ ಪಂತ್?

ಕಳೆದ 20 ಮ್ಯಾಚ್​ಗಳಲ್ಲಿ ಚೇಸಿಂಗ್ ವೇಳೆ ಟೀಂ ಇಂಡಿಯಾ ಸೋತಾಗಲೆಲ್ಲಾ ಕೇವಲ 6 ಪಂದ್ಯಗಳಲ್ಲಿ ಮಾತ್ರ 40 ರನ್​ಗಿಂತಲೂ ಹೆಚ್ಚು ಅಂತರದಿಂದ ಭಾರತ ಸೋತಿತ್ತು. ಚೇಸಿಂಗ್​ ಮಾಡಿದಾಗ.. ಅಂದ್ರೆ ವರ್ಲ್ಡ್​​ಕಪ್​ನಲ್ಲಿ ಅಲ್ಲ, ಅದಕ್ಕೂ ಮುನ್ನ ಆಡಿರುವ 20 ಮ್ಯಾಚ್​ಗಳಲ್ಲಿ ಟೀಂ ಇಂಡಿಯಾ ಚೇಸಿಂಗ್ ಮಾಡಿದಾಗ. ಇನ್ನು ಚೇಸಿಂಗ್​ ಮಾಡಿ ಸೋತಾಗ ಐದು ಮ್ಯಾಚ್​ಗಳಲ್ಲಿ ಟೀಂ ಇಂಡಿಯಾ ಗೆಲ್ಲೋ ಹಂತದಲ್ಲಿ ಸೋಲನುಭವಿಸಿತ್ತು. ಅಂದ್ರೆ ತುಂಬಾ ಕಡಿಮೆ ರನ್​ಗಳ ಅಂತರದಿಂದ ಪಂದ್ಯವನ್ನ ಸೋತಿತ್ತು. ಮೂರು ಬಾರಿ 10 ರನ್​​ಗಳ ಡಿಸ್ಟೆನ್ಸ್​ನಲ್ಲಿ ಭಾರತ ಮ್ಯಾಚ್ ಸೋತಿದೆ. ಮತ್ತೊಂದು ಇಂಪಾರ್ಟೆಂಟ್ ಸಂಗತಿ ಏನಂದ್ರೆ, 2017ರ ಜುಲೈನಿಂದ ಇದುವರೆಗೆ ಟೀಂ ಇಂಡಿಯಾ ಚೇಸಿಂಗ್ ವೇಳೆ ಒಂದು ಬಾರಿ ಮಾತ್ರ 100 ರನ್​ಗಳ ಅಂತರದಿಂದ ಸೋತಿದೆ. ಆದ್ರೆ 2017ರಿಂದ ಎದುರಾಳಿ ತಂಡಗಳು ಚೇಸಿಂಗ್ ಮಾಡೋ ವೇಳೆ 14 ಬಾರಿ 100ಕ್ಕೂ ಅಧಿಕ ರನ್​​ಗಳಿಂದ ಸೋಲಿಸಿದ್ರೆ. ಅಂದ್ರೆ ಇದ್ರ ಕ್ರೆಡಿಟ್ ನಮ್ಮ ಬೌಲರ್ಸ್​ಗಳಿಗೆ ಸಲ್ಲಬೇಕು. ಇನ್ನು ಚೇಸಿಂಗ್ ವೇಳೆ ಭಾರತದ ಗೆಲುವಿನಲ್ಲಿ ಪ್ರಮುಖ ರೋಲ್ ನಿಭಾಯಿಸಿರೋದೆ ವಿರಾಟ್ ಕೊಹ್ಲಿ. ಆದ್ರೆ ಚೇಸಿಂಗ್ ಮಾಡೋದು ಅಂದ್ರೆ ಅಷ್ಟು ಸುಲಭದ ವಿಚಾರ ಅಲ್ಲ. ಇದು ಬ್ಯಾಟ್ಸ್​​ಮನ್​ಗಳಿಗೆ ಯಾವತ್ತಿಗೂ ಕಠಿಣ ಸವಾಲು. ಅದ್ರಲ್ಲೂ ಡೇ & ನೈಟ್ ಮ್ಯಾಚ್​ನಲ್ಲಿ 275+ ಸ್ಕೋರ್​​ನ್ನ ಚೇಸ್ ಮಾಡೋದು, ಅದ್ರಲ್ಲೂ ಸಬ್​ ಕಾಂಟಿನೆಂಟ್ ಕಂಡೀಷನ್​​ನಲ್ಲಿ ಇನ್ನಷ್ಟು ದೊಡ್ಡ ಸವಾಲು. ಹೀಗಾಗಿ ಡೇ & ನೈಟ್ ಮ್ಯಾಚ್​ನಲ್ಲಿ ಯಾವಾಗಲೂ ಫಸ್ಟ್ ಬ್ಯಾಟಿಂಗ್ ಮಾಡೋದು ಅಂದ್ರೆ ಸನ್​ಲೈಟ್ ಇರೋವಾಗಲೇ ಬ್ಯಾಟಿಂಗ್ ಮಾಡೋದು ಬೆಟರ್ ಆಪ್ಷನ್ ಆಗಿರುತ್ತೆ.

ರೀಸೆಂಟ್ ಟ್ರೆಂಡ್ ಪ್ರಕಾರ ವಂಡೇ ಕ್ರಿಕೆಟ್​​ನಲ್ಲಿ ಚೇಸಿಂಗ್ ವೇಳೆ ಹೇಗೂ ಮ್ಯಾಚ್ ಸೋಲುತ್ತೆ ಅನ್ನೋದಾದ್ರೆ ಭಾರಿ ಅಂತದಲ್ಲಿ ಮ್ಯಾಚ್​ ಸೋತ್ರೂ ಟೀಂಗಳು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಟಿ-20 ಕ್ರಿಕೆಟ್​ನಲ್ಲಿ ಕ್ಲೋಸೆಸ್ಟ್ ಗೇಮ್ ಅಂದ್ರೆ ಚೇಸಿಂಗ್ ವೇಳೆ ಭಾರಿ ಫೈಟ್ ಕೊಡೋದು ಸುಲಭ. ಆದ್ರೆ, ಏಕದಿನ ಕ್ರಿಕೆಟ್​​ನಲ್ಲಿ 50 ಓವರ್​​ಗಳಿರುವಾಗ ಚೇಸಿಂಗ್ ಮಾಡಿದರೆ ಬೇಗನೆ ಆಲೌಟ್ ಆಗುವ ಚಾನ್ಸ್ ಹೆಚ್ಚಿರುತ್ತೆ.

ಇಲ್ಲಿ ODI ಕ್ರಿಕೆಟ್​ನಲ್ಲಿ ಚೇಸಿಂಗ್​ ವೇಳೆ ಬೇರೆ ಬೇರೆ ಟೀಂಗಳು ಎಷ್ಟು ಅಂತರದಲ್ಲಿ ಸೋತಿವೆ. ಚೇಸಿಂಗ್ ವೇಳೆ ಸೋಲಿನ ಟ್ರೆಂಡ್ ಹೇಗಿದೆ ಎಂಬ ವಿವರ ಇಲ್ಲಿದೆ.

ಚೇಸಿಂಗ್ ಸೋಲು!

  • ಚೇಸಿಂಗ್ ಮಾಡಿ ಸೋತ 14 ಮ್ಯಾಚ್​ ಗಳಲ್ಲಿ
  • 10 ರನ್ ​ಗಳ ಒಳಗಿನ ಅಂತರದಲ್ಲಿ ಒಂದೂ ಮ್ಯಾಚ್ ಗೆದ್ದಿಲ್ಲ
  • 2 ಮ್ಯಾಚ್ ​ಗಳು ಮಾತ್ರ ಲಾಸ್ಟ್ ಓವರ್ ತನಕ ಹೋಗಿತ್ತು
  • ನ್ಯೂಜಿಲ್ಯಾಂಡ್ & ಇಂಗ್ಲೆಂಡ್ ಸೇರಿ 24 ಮ್ಯಾಚ್ ಸೋತಿವೆ
  • ಈ ಪೈಕಿ 16 ಮ್ಯಾಚ್ ​ಗಳನ್ನ 50+ ರನ್​​ಗಳಿಂದ ಸೋತಿವೆ
  • ಕೇವಲ 6 ಮ್ಯಾಚ್​ ಗಳಷ್ಟೇ ಕೊನೆಯ ಓವರ್​ನವರೆಗೆ ಬಂದಿತ್ತು
  • ಆಸ್ಟ್ರೇಲಿಯಾ ಚೇಸಿಂಗ್ ವೇಳೆ ಇತ್ತೀಚಿಗೆ 5 ಮ್ಯಾಚ್ ಸೋತಿದೆ
  • 30 ರನ್ ​ಗಳ ಒಳಗಿನ ಅಂತರದಲ್ಲಿ 4 ಮ್ಯಾಚ್ ​ಗಳನ್ನ​​ ಸೋತಿದೆ
  • ಒಂದು ಪಂದ್ಯವನ್ನ ಮಾತ್ರ 50-70 ರನ್ ​ಗಳ ಅಂತರದಲ್ಲಿ ಸೋತಿದೆ

ಈ ಎಲ್ಲಾ ಡೇಟಾಗಳಿಂದ ಸ್ಪಷ್ಟವಾಗೋದು ಏನಂದ್ರೆ, ವಂಡೇ ಕ್ರಿಕೆಟ್​ನಲ್ಲಿ ಚೇಸಿಂಗ್​​ ವೇಳೆ ಟೀಂಗಳು ಹಿಟ್ OR ಮಿಸ್ ಅಪ್ರೋಚ್​ನಲ್ಲೇ ಆಡ್ತಿವೆ. ಎಷ್ಟು ರನ್​​ಗಳ ಅಂತರದಲ್ಲಿ ಸೋಲ್ತೀವಿ ಅನ್ನೋದನ್ನ ಯಾರೂ ಮೈಂಡ್ ಮಾಡ್ತಿಲ್ಲ. ಜೊತೆಗೆ ಚೇಸಿಂಗ್​ ವೇಳೆ ಅಲೌಟ್ ಆಗ್ತಿರೋದೆ ಹೆಚ್ಚಾಗಿದೆ. ಸಕ್ಸಸ್​​ಫುಲ್ ಆಗಿ ರನ್​​ ಚೇಸ್​ ಮಾಡುವ ಪರ್ಸೆಂಟೇಜ್ ಕಡಿಮೆಯಾಗ್ತಿದೆ. ಇದೇ ಕಾರಣಕ್ಕೆ ನಮ್ಮ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಗ್ರೇಟ್ ಅನ್ನಿಸಿಕೊಳ್ಳೋದು.

ಇನ್ನು ಈ ಬಾರಿಯ ವರ್ಲ್ಡ್​​ಕಪ್​​ ವಿಚಾರಕ್ಕೆ ಬರೋಣ. ಟೀಂಗಳು ಚೇಸಿಂಗ್ ಮಾಡಿದಾಗಿನ ರಿಸಲ್ಟ್​ಗಳು ಹೇಗಿವೆ ಅನ್ನೋದನ್ನ ಕೂಡ ನಿಮ್ ಮುಂದೆ ಇಡ್ತೀನಿ.

ವರ್ಲ್ಡ್ ​ಕಪ್ ಚೇಸಿಂಗ್ ಕಹಾನಿ!

  • 41 ಮ್ಯಾಚ್​​ ಗಳಲ್ಲಿ 20 ಬಾರಿ ಟೀಂಗಳು ಚೇಸಿಂಗ್​​ ಮಾಡಿ ಗೆದ್ದಿವೆ
  • 300+ ಸ್ಕೋರ್ ಆದಾಗ 1 ಮ್ಯಾಚ್​​ ಮಾತ್ರ ಚೇಸಿಂಗ್ ಟೀಂ ಗೆದ್ದಿದೆ​​
  • 2 ಮ್ಯಾಚ್ ​ಗಳಲ್ಲಿ ಮಾತ್ರ 3 ಅಥವಾ ಅದಕ್ಕಿಂತ ಕಡಿಮೆ ವಿಕೆಟ್ ​​ಗಳಿಂದ ಗೆಲುವು
  • 17 ಬಾರಿ 5 & ಹೆಚ್ಚು ವಿಕೆಟ್ ​ಗಳಿಂದ ಟೀಂಗಳಿಗ ಗೆಲುವು
  • 10 ಮ್ಯಾಚ್ ​ಗಳಲ್ಲಿ 10ಕ್ಕೂ ಹೆಚ್ಚು ಓವರ್ ​ಗಳಿರುವಾಗಲೇ ಗೆಲುವು
  • ಚೇಸಿಂಗ್ ವೇಳೆ 12 ಬಾರಿ 100ಕ್ಕೂ ಹೆಚ್ಚು ರನ್ ​ಗಳಿಂದ ಸೋಲು
  • 10ಕ್ಕೂ ಹೆಚ್ಚು ಓವರ್​ ಗಳಿರುವಾಗಲೆ 8 ಬಾರಿ ಟೀಂಗಳಿಗೆ ಸೋಲು

ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ವಂಡೇ ಕ್ರಿಕೆಟ್​​ನಲ್ಲಿ ಫಸ್ಟ್ ಬ್ಯಾಟಿಂಗ್​ ಮಾಡೋ ತಂಡವೇ ಹೆಚ್ಚು ಮ್ಯಾಚ್​ಗಳನ್ನ ಗೆಲ್ಲುತ್ತಾ ಬರ್ತಿವೆ. ಚೇಸಿಂಗ್​ ವೇಳೆ ಗೆಲ್ಲೋದು ದೊಡ್ಡ ಚಾಲೆಂಜ್ ಆಗ್ತಿದೆ. ಇನ್ನು ಈ ಬಾರಿಯ ವರ್ಲ್ಡ್​​ಕಪ್​ನಲ್ಲಂತೂ ಭಾರತದ ಹೆಚ್ಚಿನ ಗ್ರೌಂಡ್​​ಗಳಲ್ಲಿ ಟಾಸ್​ ಗೆದ್ದವರು ಫಸ್ಟ್​ ಬ್ಯಾಟಿಂಗ್ ಮಾಡೋದೆ ಸೂಕ್ತವಾಗಿತ್ತು. ಅದಕ್ಕೆ ಒಂದು ಕಾರಣ ಪಿಚ್.. ಜೊತೆಗೆ ಡೇ & ನೈಟ್ ಮ್ಯಾಚ್​ನಲ್ಲಿ ಸೆಕೆಂಡ್​​ ಇನ್ನಿಂಗ್ಸ್​ ವೇಳೆ ಬಾಲ್ ಹೆಚ್ಚು ಟರ್ನ್ ಆಗೋದು. ಬೌಲರ್ಸ್​ಗಳಿಗೆ ಹೆಚ್ಚು ಅಡ್ವಾಂಟೇಜ್ ಆಗಿರೋದನ್ನ ಈ ವರ್ಲ್ಡ್​​ಕಪ್​​ನ ಹಲವು ಮ್ಯಾಚ್​​ಗಳಲ್ಲಿ ನಾವು-ನೀವೆಲ್ಲಾ ನೋಡಿದ್ವಿ. ಹೀಗಾಗಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ, ದೊಡ್ಡ ಮೊತ್ತದ ಸ್ಕೋರ್ ಮಾಡಿ, ಚೇಸಿಂಗ್ ಟೀಂ ಮೇಲೆ ಪ್ರೆಷರ್​ ಬಿಲ್ಡ್​ ಮಾಡೋದೆ ಆಲ್​ಮೋಸ್ಟ್ ಎಲ್ಲಾ ತಂಡಗಳ ಮೇನ್ ಸ್ಟ್ಯಾಟಜಿಯಾಗ್ತಿದೆ. ಈ ಎಲ್ಲಾ ಕಾರಣಕ್ಕೆ ಬಹುತೇಕ ಟೀಂಗಳು ಫಸ್ಟ್ ಬ್ಯಾಟಿಂಗ್ ಮಾಡೋಕೆ ಹೆಚ್ಚು ಪ್ರಿಫರೆನ್ಸ್ ನೀಡ್ತಾ ಇವೆ.

 

Sulekha