ವಾಹನ ಸವಾರರಿಗೆ ಶಾಕ್‌ ಕೊಟ್ಟ ಪೊಲೀಸರು! – ಇನ್ನುಮುಂದೆ ಈ ತಪ್ಪು ಮಾಡಿದ್ರೆ ಡಿಎಲ್ ಅಮಾನತು!

ವಾಹನ ಸವಾರರಿಗೆ ಶಾಕ್‌ ಕೊಟ್ಟ ಪೊಲೀಸರು! – ಇನ್ನುಮುಂದೆ ಈ ತಪ್ಪು ಮಾಡಿದ್ರೆ ಡಿಎಲ್ ಅಮಾನತು!

ಎಷ್ಟು ರೂಲ್ಸ್‌ ಟ್ರಾಫಿಕ್‌ ರೂಲ್ಸ್‌ ತಂದ್ರೂ ಅಷ್ಟೇ.. ರೂಲ್ಸ್‌ ಬ್ರೇಕ್‌ ಮಾಡೇ ಮಾಡ್ತೀವಿ ಅನ್ನೋ ವಾಹನ ಸವಾರರಿಗೆ ಈ ಟ್ರಾಫಿಕ್‌ ಪೊಲೀಸರು ಬಿಸಿ ಮುಟ್ಟಿಸೋದಿಕ್ಕೆ ಮುಂದಾಗಿದ್ದಾರೆ.. ಇನ್ನುಮುಂದೆ ಫುಟ್‌ಪಾತ್‌ ನಲ್ಲಿ ವಾಹನ ಚಲಾಯಿಸಿದ್ರೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಟ್ರಾಫಿಕ್‌ ಪೊಲೀಸರು.

ಇದನ್ನೂ ಓದಿ: ಅಮೃತಧಾರೆ ಬಿಟ್ಟ ಮತ್ತೊಬ್ಬ ನಟಿ? – ಮಲ್ಲಿ ಪಾತ್ರಕ್ಕೆ ರಾಧಾ ಗುಡ್‌ಬೈ?

ಇತ್ತೀಚೆಗೆ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ನಿಯಮ ಉಲ್ಲಂಘಿಸಿ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳಿಗೆ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ. ಫುಟ್‌ಪಾತ್‌ನಲ್ಲಿ ಬೈಕ್ ಅಷ್ಟೇ ಅಲ್ಲ, ಕೆಲವರು ಕಾರುಗಳನ್ನೂ ಚಲಾಯಿಸಿರುವುದು ಕಂಡುಬಂದಿದೆ. ಇದೆಲ್ಲವನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಪಾದಾಚಾರಿ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಡಿಎಲ್ ಅಮಾನತು ಮಾಡುವುದಾಗಿ ಎಚ್ಚರಿಸಿದ್ದಾರೆ.

ಇದರ ಜೊತೆಗೆ ಕೇಸ್ ದಾಖಲಿಸಿ ಸೂಕ್ತ ದಂಡ ವಿಧಿಸಲಿದ್ದಾರೆ. ಫುಟ್‌ಪಾತ್ ರೈಡಿಂಗ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರ ನಿರ್ಧಾರಿಸಿದ್ದಾರೆ. ಪಾದಚಾರಿಗಳ ಬಳಕೆಗೆ ಫುಟ್‌ಪಾತ್ ಇರೋದು. ಅಲ್ಲಿ ವಾಹನ ಚಲಾಯಿಸುವಂತಿಲ್ಲ ಎಂದು ಸೂಚಿಸಿದ್ದಾರೆ.

ಪಾದಚಾರಿಗಳು ಹೊರತುಪಡಿಸಿ ಬೇರೆ ಯಾರೇ ಬಳಸಿದರೂ ಕ್ರಮ ಆಗಲಿದೆ. ಪಾದಚಾರಿಗಳ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸರು ಕಠಿಣ ನಿಯಮ ರೂಪಿಸಿದ್ದಾರೆ.

Shwetha M

Leave a Reply

Your email address will not be published. Required fields are marked *