ಜೀವನದಲ್ಲಿ ಸಂತೋಷ-ಐಶ್ವರ್ಯ ಬೇಕಾ? – ಶನಿ ದೇವನ ಪ್ರೀತಿಪಾತ್ರವಾದ ಈ ಪ್ರಾಣಿಯ ಸೇವೆ ಮಾಡಿ

ಜೀವನದಲ್ಲಿ ಸಂತೋಷ-ಐಶ್ವರ್ಯ ಬೇಕಾ? –  ಶನಿ ದೇವನ ಪ್ರೀತಿಪಾತ್ರವಾದ ಈ ಪ್ರಾಣಿಯ ಸೇವೆ ಮಾಡಿ

ಒಳ್ಳೆಯ ಕೆಲಸ ಮಾಡುವ, ನ್ಯಾಯವನ್ನು ಪ್ರೀತಿಸುವ ಮತ್ತು ಬಡವರ ಸೇವೆ ಮಾಡುವ ಜನರ ಮೇಲೆ ಶನಿದೇವನ ಅನುಗ್ರಹ ಯಾವಾಗಲೂ ಇರುತ್ತದೆ. ಒಂದು ವೇಳೆ ಶನಿ ಕೃಪೆ ವ್ಯಕ್ತಿಯ ಮೇಲೆ ಬಿತ್ತು ಎಂದಾದರೆ, ಆತ ಬಡವನಾಗಿದ್ದರೂ ರಾಜನಂತಾಗಲು ಕ್ಷಣ ಬೇಕಿಲ್ಲ. ಹಾಗೇ ಶ್ರೀಮಂತನು ಬಡವನಾಗುತ್ತಾನೆ. ನೀವು ಶನಿದೇವನ ಅಶೀರ್ವಾದ ಪಡೆಯಬೇಕಾದ್ರೆ ಈ ಕೆಲಸಗಳನ್ನ ಮಾಡಿ.

ಭೈರವ ಅಂದ್ರೆ ನಾಯಿ ಸೇವೆ ಮಾಡುವ ಜನರ ಮೇಲೆ ಶನಿ ದೇವನು ಎಂದೆಂದೂ ತನ್ನ ಆಶೀರ್ವಾದವನ್ನು ಇರಿಸುತ್ತಾನೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಜನರು ಮನೆಯಲ್ಲಿ ನಾಯಿಯನ್ನು  ಸಾಕುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನಿಗೆ ಭೈರವನ ಜೊತೆ ವಿಶೇಷ ಸಂಬಂಧವಿದೆ.

ಯಾರು ಪ್ರತಿದಿನ ಕಪ್ಪು ನಾಯಿಗೆ ಆಹಾರ ನೀಡುತ್ತಾರೆಯೋ.. ಯಾರು ಎಂದೂ ಸಹ ನಾಯಿಗೆ ಹಿಂಸೆ ಮಾಡುವುದಿಲ್ಲವೋ.. ಅವರಿಗೆ ಶನಿದೇವನ ಬೆಂಬಲವಿರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಜನರು ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಹಗಲಿರುಳು ಪ್ರಗತಿ ಸಾಧಿಸುತ್ತಲೇ ಇರುತ್ತಾರೆ. ಇನ್ನು ಮನೆಯಲ್ಲಿ ಕಪ್ಪು ನಾಯಿಯನ್ನು ಸಾಕುವುದರಿಂದ ನಕಾರಾತ್ಮಕ ಶಕ್ತಿಯ ಪ್ರವೇಶ ಕಡಿಮೆಯಾಗುತ್ತದೆ. ಕಪ್ಪು ನಾಯಿಯು ಕುಟುಂಬದ ಎಲ್ಲ ಸದಸ್ಯರನ್ನು ದುಷ್ಟ ಕಣ್ಣುಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಕಪ್ಪು ನಾಯಿ ಶನಿ ಮತ್ತು ಕೇತು ಎರಡೂ ಗ್ರಹಗಳಿಂದ ಪ್ರಭಾವಿತವಾಗಿರುತ್ತದೆ.

(ಇದು  ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿ )

Kishor KV