ದಾನ ಮಾಡಿದರೆ ನಗ್ನ ಚಿತ್ರ ನೋಡುವ ಚಾನ್ಸ್.. ಇದು ನೀಲಿತಾರೆಯ ಆಫರ್!
ವಾಷಿಂಗ್ಟನ್: ವಿಶೇಷ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಮಾಲೀಕರು ಭರ್ಜರಿ ಆಫರ್‌ಗಳನ್ನು ನೀಡುತ್ತಾರೆ. ಒಂದು ಕೊಂಡರೆ ಒಂದು ಉಚಿತ, 60% ಡಿಸ್ಕೌಂಟ್, 70% ಡಿಸ್ಕೌಂಟ್ ಹೀಗೆ ಒಂದೊಂದು ವಿಶೇಷ ಆಫರ್‌ಗಳನ್ನು ನೀಡುವುದನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬಳು ನೀಲಿ ತಾರೆ ಸಮಾಜಸೇವೆ ಮಾಡಲು ಮುಂದಾಗಿದ್ದಾಳೆ. ಆಕೆಯ ಸಮಾಜಸೇವೆಗೆ ಸಹಾಯ ಮಾಡಿದವರಿಗೆ ಬೇರೆ ರೀತಿಯದ್ದೇ ಆಫರ್ ನೀಡಿದ್ದಾಳೆ!
ಇದನ್ನೂ ಓದಿ: ಟ್ಯಾಟೂ ನೋಡಬೇಕಾ.. ʼಆʼ ಭಾಗ ನೋಡಬೇಕಾ.. ಬಟ್ಟೆ ಸರಿಯಾಗಿ ಹಾಕಮ್ಮಾ ʼಭೂಮಿʼ ಎಂದ ಫ್ಯಾನ್ಸ್
ಅಮೆರಿಕದ ಕ್ಯಾಲಿಫೋರ್ನಿಯಾದ ಕ್ಯಾಥೋಲಿಕ್ ಶಾಲೆಯ ಮಾಜಿ ಶಿಕ್ಷಕಿ ಆಗಿದ್ದ, ನೀಲಿ ತಾರೆ ಕರ್ಟ್ನಿ ಟಿಲಿಯಾ ಸಮಾಜ ಸೇವೆ ಮಾಡಲು ಮುಂದಾಗಿದ್ದಾಳೆ. ಆಕೆಯ ಸಮಾಜಸೇವೆಗೆ ಕೈ ಜೋಡಿಸುವವರಿಗೆ ವಿಚಿತ್ರ ಆಫರ್ ವೊಂದನ್ನು ನೀಡಿದ್ದಾಳೆ. ಆಕೆಯ ಆಫರ್ ಬಗ್ಗೆ ಕೇಳಿ ಜನರು ಶಾಕ್ ಆಗಿದ್ದಾರೆ.
ಕರ್ಟ್ನಿ ಟಿಲಿಯಾ, ಸಾಗರ ಸಸ್ತನಿ ಕೇರ್ ಸೆಂಟರ್ ಮೂಲಕ ಸಮಾಜ ಸೇವೆ ಮಾಡಲು ಮುಂದಾಗಿದ್ದಾಳೆ. ಕ್ಯಾಲಿಫೋರ್ನಿಯಾದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸಮುದ್ರ ಜೀವಿಗಳಿಗೆ ಈ ಸಂಸ್ಥೆ ನೆರವಾಗುತ್ತಿದೆ. ಈ ಸಂಸ್ಥೆಗೆ ಸಹಾಯ ಮಾಡಲು ದೇಣಿಗೆ ನೀಡುವ ಪ್ರತಿಯೊಬ್ಬರಿಗೂ ತಾನು ನಗ್ನ ಫೋಟೋವನ್ನ ಉಡುಗೊರೆಯಾಗಿ ಕಳುಹಿಸುತ್ತೇನೆ ಎಂದು 36 ವರ್ಷದ ನೀಲಿ ತಾರೆ ಘೋಷಣೆ ಮಾಡಿದ್ದಾಳೆ.
ಸಾಗರ ಸಸ್ತನಿ ಕೇರ್ ಸೆಂಟರ್ ಗೆ ದೇಣಿಗೆ ನೀಡುವವರಿಗೆ ಕನಿಷ್ಠ 50 ಡಾಲರ್ (4,104 ರೂ.) ಅಥವಾ ಅದಕ್ಕಿಂತಲೂ ಹೆಚ್ಚಿನ ದೇಣಿಗೆ ನೀಡುವವರಿಗೆ ನಗ್ನ ಉಡುಗೊರೆ ನೀಡುತ್ತೇನೆ ನನ್ನ ಅಭಿಮಾನಿಗಳ ಪುಟಕ್ಕೆ ಉಚಿತ ಲಿಂಕ್‌ಗಳನ್ನೂ ಸಹ ನೀಡುತ್ತೇನೆ. ಪ್ರತಿ ದೇಣಿಗೆಗೂ ನಾನು ನಿಮಗೆ ನಗ್ನ ಉಡುಗೊರೆ ಕಳಿಸ್ತೀನಿ. ನೀವು ದೇಣಿಗೆ ನೀಡಿ, ಅದರ ಸ್ಕ್ರೀನ್ ಶಾಟ್‌ನೊಂದಿಗೆ ನನಗೆ ಡಿಎಂ ಕಳುಹಿಸಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾಳೆ.
ಈ ಹಿಂದೆ ಲಂಡನ್ನಿನ `ಓನ್ಲಿ ಫ್ಯಾನ್ಸ್’ ಸೈಟ್‌ನ ಕೇಂದ್ರಬಿಂದುವಾಗಿದ್ದ ಟಿಲಿಯಾ ತಿಂಗಳಿಗೆ 1 ಲಕ್ಷ ಡಾಲರ್ (82,10,535 ರೂ.) ಸಂಪಾದಿಸುತ್ತಿದ್ದರು. ಇದೀಗ ಸಮಾಜ ಸೇವೆಗೂ ಮುಂದಾಗಿರುವ ಟಿಲಿಯಾ ಸ್ವಯಂ ಘೋಷಿತ ಪ್ರಾಣಿ ಪ್ರಿಯರಿಗೆ ಸಹಾಯ ಮಾಡುತ್ತಿದ್ದಾರೆ. ಜೊತೆಗೆ ಸಮುದ್ರ ಜೀವಿಗಳ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸಿಕೊಡುವುದಕ್ಕಾಗಿ ಹಣ ಸಂಗ್ರಹಿಸುತ್ತಿದ್ದಾರೆ.