ಮನೆಯಲ್ಲಿರುವ ಈ ವಸ್ತುಗಳನ್ನು ಹಚ್ಚಿದರೆ ಕುತ್ತಿಗೆಯಲ್ಲಿನ ಕಪ್ಪು ಕಲೆ ಮಾಯ!  

ಮನೆಯಲ್ಲಿರುವ ಈ ವಸ್ತುಗಳನ್ನು ಹಚ್ಚಿದರೆ ಕುತ್ತಿಗೆಯಲ್ಲಿನ ಕಪ್ಪು ಕಲೆ ಮಾಯ!  

ನಮ್ಮ ಮುಖದ ಅಂದಕ್ಕಾಗಿ ಪ್ರತಿನಿತ್ಯ ಒಂದಲ್ಲೊಂದು ಪಯತ್ನಗಳನ್ನು ಮಾಡುತ್ತಿರುತ್ತೇವೆ. ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ದುಬಾರಿ ಕಾಸ್ಮೆಟಿಕ್ಸ್​ಗಳ ಮೊರೆ ಹೋಗುತ್ತೇವೆ. ಆದರೆ ನಾವು ನಮ್ಮ ಕುತ್ತಿಗೆಯಲ್ಲಿನ ಕಪ್ಪಾದ ಕಲೆಗಳ ಕುರಿತು ಯೋಚಿಸುವುದಿಲ್ಲ. ಇಂತಹ ಕಲೆಗಳಿಂದಾಗಿ ನಮ್ಮ ಸೌಂದರ್ಯ ಹಾಳಾಗುತ್ತದೆ. ಇದಕ್ಕಾಗಿ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿದರೆ ಕೆಲವೇ ದಿನಗಳಲ್ಲಿ ಕಪ್ಪು ಕಲೆಗಳಿಂದ ಮುಕ್ತಿಹೊಂದಬಹುದು.

ಇದನ್ನೂ ಓದಿ:https://suddiyaana.com/the-saree-is-one-classic-indian-outfit-that-epitomizes-elegance/  

ಹಾಲು, ಅರಶಿನ ಮತ್ತು ಕಡ್ಲೆಹಿಟ್ಟು

ಸಾಮಾನ್ಯವಾಗಿ ಹಾಲು, ಅರಶಿನ, ಕಡ್ಲೆ ಹಿಟ್ಟನ್ನು ವಿವಿಧ ಖಾದ್ಯಗಳಲ್ಲಿ ಬಳಸುತ್ತೇವೆ. ನಾವು ಖಾದ್ಯಗಳಿಗೆ ಬಳಸುವ ಕೆಲವು ವಸ್ತುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ. ತಲಾ ಒಂದು ಚಮಚ ಹಾಲು ಮತ್ತು ಕಡಲೆ ಬೇಳೆ ಹಿಟ್ಟನ್ನು ತೆಗೆದುಕೊಂಡು ಅದರಲ್ಲಿ ಒಂದು ಚಿಟಿಕೆ ಅರಿಶಿನವನ್ನು ಮಿಶ್ರಣ ಮಾಡಿಡಬೇಕು. ಈ ಮಿಶ್ರಣವನ್ನು ಕುತ್ತಿಗೆಗೆ ಅನ್ವಯಿಸಿ 20 ನಿಮಿಷಗಳ ಕಾಲ ಒಣಗಲು ಬಿಡಬೇಕು. ನಂತರ ಸ್ಕ್ರಬ್ ಮಾಡಿ ತೊಳೆಯಿರಿ. ನೀವು ಇಡೀ ವಾರ ಈ ವಿಧಾನವನ್ನು ಪುನರಾವರ್ತಿಸಿದರೆ ಸಾಕು. ಕೆಲವೇ ದಿನಗಳಲ್ಲಿ ಈ ಕಪ್ಪು ಕಲೆಗಳು ಮಾಯವಾಗುತ್ತದೆ.

ರೋಸ್ ವಾಟರ್ ಜೊತೆ ಹಸಿ ಪಪ್ಪಾಯಿ ಮತ್ತು ಮೊಸರು

ಹಸಿ ಪಪ್ಪಾಯಿಯನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ರೋಸ್ ವಾಟರ್ ಮತ್ತು ಮೊಸರು ಮಿಶ್ರಣ ಮಾಡಿ  ಕುತ್ತಿಗೆಗೆ ಹಚ್ಚಿ 20 ನಿಮಿಷಗಳ ಕಾಲ ಬಿಡಬೇಕು. ಬಳಿಕ ಉಜ್ಜಿ ತೊಳೆಯುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತದೆ.

ಅಕ್ಕಿ, ಆಲೂಗಡ್ಡೆ ಮತ್ತು ರೋಸ್ ವಾಟರ್

ಒಂದು ಬಟ್ಟಲಿನಲ್ಲಿ ಎರಡು ಚಮಚ ಅಕ್ಕಿ ಹಿಟ್ಟು ಮತ್ತು ಆಲೂಗಡ್ಡೆ ರಸವನ್ನು ಮಿಶ್ರಣ ಮಾಡಿ, ನಂತರ ಅದರಲ್ಲಿ ರೋಸ್ ವಾಟರ್ ಮಿಶ್ರಣ ಮಾಡಿ ಮತ್ತು ಪೇಸ್ಟ್ ತಯಾರಿಸಬೇಕು. ಸುಮಾರು 20 ನಿಮಿಷಗಳ ಕಾಲ ಕುತ್ತಿಗೆಯ ಮೇಲೆ ಇರಿಸಿ ಮತ್ತು ಒಣಗಿದ ನಂತರ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಒಂದು ವಾರಗಳ ಕಾಲ ಈ ಪೇಸ್ಟ್ ಅನ್ನು ಹಚ್ಚುವುದರಿಂದ ಕುತ್ತಿಗೆಯಲ್ಲಿನ ಕಲೆಗಳು ಹೋಗುತ್ತವೆ.

ನಿಂಬೆ ಮತ್ತು ಜೇನುತುಪ್ಪ

ಒಂದು ಬಟ್ಟಲಿನಲ್ಲಿ  ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ, ನಂತರ ನಿಧಾನವಾಗಿ ಈ ಪೇಸ್ಟ್ ಅನ್ನು ಕುತ್ತಿಗೆಗೆ ಹಚ್ಚಿಬೇಕು. ಇದರ ಸಹಾಯದಿಂದ ಕುತ್ತಿಗೆಯಲ್ಲಿನ ಕಪ್ಪನ್ನು ಹೋಗಲಾಡಿಸಬಹುದು.

ಕಡ್ಲೆಹಿಟ್ಟು ಮತ್ತು ನಿಂಬೆ

ಒಂದು ಬೌಲ್‌ನಲ್ಲಿ ಒಂದು ಚಮಚ ಕಡಲೆ ಹಿಟ್ಟು ಮತ್ತು ನಿಂಬೆ ರಸ ಮಿಶ್ರಣ ಮಾಡಿ, ಕುತ್ತಿಗೆಯ ಮೇಲೆ ಚೆನ್ನಾಗಿ ಹಚ್ಚಬೇಕು. 10 ರಿಂದ 15 ನಿಮಿಷಗಳ ಕಾಲ ಹಾಗೇ ಬಿಡಬೇಕು. ನಂತರ ಸ್ಕ್ರಬ್ ಮಾಡಿ, ತೊಳೆದರೆ ಕುತ್ತಿಗೆಯಲ್ಲಿರುವ ಕಪ್ಪು ಕಲೆಗಳು ಸಂಪೂರ್ಣವಾಗಿ ಮಾಯವಾಗುತ್ತದೆ.

suddiyaana