​​​ʼಸಮಸ್ಯೆ ಬಗೆಹರಿಸಿದ್ರೆ ನನ್ನೊಂದಿಗೆ ಡೇಟಿಂಗ್‌ ಮಾಡಬಹುದುʼ! – ಯುವತಿ ಸಮಸ್ಯೆ ನೋಡಿ ಯುವಕರು ತಬ್ಬಿಬ್ಬು!

​​​ʼಸಮಸ್ಯೆ ಬಗೆಹರಿಸಿದ್ರೆ ನನ್ನೊಂದಿಗೆ ಡೇಟಿಂಗ್‌ ಮಾಡಬಹುದುʼ! – ಯುವತಿ ಸಮಸ್ಯೆ ನೋಡಿ ಯುವಕರು ತಬ್ಬಿಬ್ಬು!

ಇದು ಡಿಜಿಟಲ್‌ ಯುಗ. ಪ್ರತಿಯೊಂದು ಕೆಲಸಗಳು ನಾವು ಕುಳಿತಲ್ಲಿಂದಲೇ ಮಾಡಬಹುದು. ಆಫೀಸ್‌ಗೆ ಹೋಗಲು ಬೋರ್‌ ಆದ್ರೆ ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು. ಇನ್ನು ಮದುವೆಯಾಗಲು ಬಯಸುತ್ತಿರುವವರಿಗೂ ಕೂಡ ಸಾಕಷ್ಟು ಡೇಟಿಂಗ್‌ ಆ್ಯಪ್ ಲಭ್ಯವಿವೆ. ಈ ಆ್ಯಪ್ ಮೂಲಕ ಅನೇಕರು ಮದುವೆ ನಿಶ್ಚಯ ಮಾಡಿಕೊಳ್ಳುತ್ತಾರೆ. ಇನ್ನು ಡೇಟಿಂಗ್​ ಆ್ಯಪ್​​​ನಲ್ಲಿ ಪರಿಚಯವಾದವರು ಮತ್ತೊಬ್ಬರು ಹೆಸರು, ಕೆಲಸ, ವಿಳಾಸ ಅನ್ನೋದರ ಕುರಿತು ಮಾತನಾಡಿಕೊಳ್ಳುತ್ತಾರೆ. ಆದ್ರೆ ಈ ಮಹಿಳೆ, ಸಮಸ್ಯೆಯನ್ನು ಭೇದಿಸಲು ಯಾರಾದರೂ ಸಹಾಯ ಮಾಡಿದರೆ ಡೇಟಿಂಗ್‌ ಮಾಡುವುದಾಗಿ ಹೇಳಿದ್ದಾಳೆ.

ಇದನ್ನೂ ಓದಿ: ಕಣ್ಣು ಮಿಟುಕಿಸುವಷ್ಟರಲ್ಲಿ ಗಣಪತಿಗೆ ಇಟ್ಟಿದ್ದ 11 ಕೆಜಿ ತೂಕದ ಲಡ್ಡು ಮಾಯ! – ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಂಡಿದ್ದು ಅಚ್ಚರಿ!

ಏನಿದು ಘಟನೆ?

ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ಯುವತಿಯೊಬ್ಬಳು ತಮ್ಮ ಕೆಲಸದಲ್ಲಿ ಅನುಭವಿಸುತ್ತಿರುವ ಕೋಡಿಂಗ್​ ಸಮಸ್ಯೆ ಬಗ್ಗೆ ಟಿಂಡರ್​​ ಎಂಬ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಸಹಾಯ ಪಡೆಯಲು ಯೋಚಿಸಿದ್ದಾರೆ. ಹೀಗಾಗಿ ಆಕೆ ಡೇಟಿಂಗ್‌ ಆ್ಯಪ್‌ ನಲ್ಲಿ ತನ್ನ ಪ್ರೊಫೈಲ್‌ ಅನ್ನು ಕ್ರಿಯೆಟ್‌ ಮಾಡಿ, ತನ್ನ ಸಮಸ್ಯೆಯನ್ನು ತೋಡಿಕೊಂಡಿದ್ದಾಳೆ. ಮಹಿಳೆಯ ಟಿಂಡರ್ ಪ್ರೊಫೈಲ್ ಅನ್ನು ರೆಡ್ಡಿಟ್ಟ್​​​​​ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಈ ವಿಷಯ ಎಲ್ಲೆಡೆ ವೈರಲ್​ ಆಗುತ್ತಿದೆ.

ಯುವತಿಯ ಸಮಸ್ಯೆ ಏನು?

27 ವರ್ಷ ವಯಸ್ಸಿನ ವಂದನಾ ಎಂಬ ಹುಡುಗಿ, ನಾನು ನನ್ನ ಕೆಲಸದಲ್ಲಿ ಕೋಡಿಂಗ್​​​ ಮಾಡಲು ಆಗುತ್ತಿಲ್ಲ. ನಾನು ಟೆಕ್​​​ ಸಮಸ್ಯೆಯನ್ನ ಎದುರಿಸುತ್ತಿದ್ದೇನೆ. ಪೈಥಾನ್ ಎಂಬ ಪ್ರೋಗ್ರಾಮಿಂಗ್​​ಗೆ ಸಂಬಂಧಿಸಿದ ಟೆಕ್‌ ಸಮಸ್ಯೆಯನ್ನು ಕಳೆದ ಮೂರು ದಿನಗಳಿಂದ ಅನುಭವಿಸುತ್ತಿದ್ದೇನೆ. ನಾನು ಕೆಲಸ ಮಾಡುತ್ತಿರುವ ಕೋಡ್ ವಿಂಡೋಸ್ ಮತ್ತು ಲಿನಕ್ಸ್ ಕಂಪ್ಯೂಟರ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಆದರೆ ಅದು ಮ್ಯಾಕ್‌ಗೆ ಬಂದಾಗ ತೊಂದರೆ ಉಂಟು ಮಾಡುತ್ತಿದೆ. ಈ ಕೋಡಿಂಗ್‌ ಸಮಸ್ಯೆಯನ್ನು ಯಾರಾದರೂ ಪರಿಹರಿಸಿ ಎಂದು ಸಮಸ್ಯೆ ಹೇಳಿಕೊಂಡಿದ್ದಾಳೆ.

ಸಮಸ್ಯೆ ಬಗೆಹರಿಸಿದವರೊಂದಿಗೆ ಡೇಟಿಂಗ್!‌

ಕೋಡಿಂಗ್ ಸಮಸ್ಯೆಯನ್ನು ಬಗೆಹರಿಸಿ ತನಗೆ ಯಾರು ಸಹಾಯ ಮಾಡುತ್ತಾರೋ ಅವಯೊಂದಿಗೆ ನಾನು ಡೇಟ್​​​ ಮಾಡುತ್ತೇನೆ. ಈ ಸಮಸ್ಯೆಯೊಂದಿಗೆ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ಡೇಟ್​​​​ ಮಾಡುವಂತಿಲ್ಲ ಎಂದು ತನ್ನ ಪ್ರೊಪೈಲ್​ನಲ್ಲಿ ಬರೆದುಕೊಂಡಿದ್ದಾಳೆ. ಸದ್ಯ ಯುವತಿಯ ವಿಚಿತ್ರ ಪ್ರೊಪೈಲ್​ ಎಲ್ಲೆಡೆ ಭಾರಿ ವೈರಲ್‌ ಆಗಿದೆ.

Shwetha M