ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಸಾವನ್ನಪ್ಪಿದರೆ ಏನಾಗುತ್ತೆ ಗೊತ್ತಾ? – ರಹಸ್ಯ ಬಿಚ್ಚಿಟ್ಟ ವೈದ್ಯರು!

ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಸಾವನ್ನಪ್ಪಿದರೆ ಏನಾಗುತ್ತೆ ಗೊತ್ತಾ? – ರಹಸ್ಯ ಬಿಚ್ಚಿಟ್ಟ ವೈದ್ಯರು!

ಈಗಂತೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಲು ಹಲವು ರಾಷ್ಟ್ರಗಳ ನಡುವೆ ಪೈಪೋಟಿ ಜೋರಾಗುತ್ತಿದೆ. ಈಗಾಗಲೇ ಚಂದ್ರನ ಅಂಗಳಕ್ಕೆ ಇಳಿಯಲು ಭಾರತ ಮತ್ತು ರಷ್ಯಾ ದೇಶಗಳು ತಮ್ಮ ನೌಕೆಗಳನ್ನ ಉಡಾವಣೆ ಮಾಡಿವೆ. ಮಾನವಸಹಿತ ಗಗನಯಾನಕ್ಕೆ ಅಮೆರಿಕದ ನಾಸಾ ಅಣಿಯಾಗುತ್ತಿದೆ. ಈ ನಡುವೆ ಎಲ್ಲರಲ್ಲೂ ಕಾಡುವ ಒಂದು ಪ್ರಶ್ನೆ ಅದು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಸಾವು ಸಂಭವಿಸಿದರೆ ಏನಾಗುತ್ತದೆ ಎನ್ನುವುದು. ಈ ಬಗ್ಗೆ ಟ್ರಾನ್ಸ್‌ ನ್ಯಾಷನಲ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಸ್ಪೇಸ್‌ ಹೆಲ್ತ್‌ನ ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವೇಗವಾಗಿ ಕ್ಷೀಣಿಸುತ್ತಿದೆ ಮಂಗಳ ಗ್ರಹದಲ್ಲಿ ಹಗಲು ಹೊತ್ತಿನ ಅವಧಿ! – ನಾಸಾ ವಿಜ್ಞಾನಿಗಳು ಹೇಳಿದ್ದೇನು?  

ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಷನ್‌ನಲ್ಲಿ ಸಾವಿಗೀಡಾದರೆ, ಅಂತಹ ಸಿಬ್ಬಂದಿಯ ದೇಹವನ್ನು ಕೆಲವೇ ಗಂಟೆಗಳಲ್ಲಿ ಕ್ಯಾಪ್ಸುಲ್‌ನ ಮೂಲಕ ಭೂಮಿಗೆ ಕಳುಹಿಸಿಕೊಡಲಾಗುತ್ತದೆ. ಚಂದ್ರನ ಮೇಲೆ ಸಾವು ಸಂಭವಿಸಿದಲ್ಲಿ ಇತರೆ ಸಿಬ್ಬಂದಿ ಕೆಲವೇ ದಿನಗಳಲ್ಲಿ ಮೃತ ದೇಹದೊಂದಿಗೆ ಭೂಮಿಗೆ ವಾಪಾಸ್‌ ಬರಬಹುದು. ಹಾಗೇನಾದರೂ ಮಂಗಳ ಗ್ರಹಕ್ಕೆ ಯಾನ ಮಾಡುವ ವೇಳೆಯಲ್ಲಿ ಗಗನಯಾತ್ರಿ ಸಾವು ಕಂಡಲ್ಲಿ ಮೃತದೇಹವನ್ನ ಭೂಮಿಗೆ ವಾಪಾಸ್‌ ಕಳಿಸಲು ಸಾಧ್ಯವಿಲ್ಲ. ಚಂದ್ರನ ಮೇಲೆ ದೇಹವನ್ನು ಸುಡಲು ಸಾಕಷ್ಟು ಇಂಧನ ಬೇಕಾಗುತ್ತದೆ. ಇನ್ನು ಸಮಾಧಿ ಮಾಡುವುದು ಕೂಡ ಸಾಧ್ಯವಿಲ್ಲ. ಯಾಕೆಂದರೆ, ದೇಹದ ಬ್ಯಾಕ್ಟೀರಿಯಾ ಹಾಗೂ ಇತರ ಜೀವಿಗಳು ಮಂಗಳ ಗ್ರಹದ ಮೇಲ್ಮೈ ಅನ್ನು ಕಲುಷಿತ ಮಾಡಬಹುದು. ಹೀಗಾಗಿ ಮೃತದೇಹವನ್ನ ವಿಶೇಷ ಚೀಲದಲ್ಲಿ ಸಂರಕ್ಷಣೆ ಮಾಡಿ ಭೂಮಿಗೆ ವಾಪಾಸ್‌ ತರಬೇಕಾಗುತ್ತದೆ ಎಂದು ಟ್ರಾನ್ಸ್‌ ನ್ಯಾಷನಲ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಸ್ಪೇಸ್‌ ಹೆಲ್ತ್‌ನ ವೈದ್ಯರು ಮಾಹಿತಿ ನೀಡಿದ್ದಾರೆ.

suddiyaana