ರಾತ್ರಿ ಹೊತ್ತು ನಾಯಿಗಳು ಬೊಗಳಿದ್ರೆ ಅಪಶಕುನನಾ – ಶ್ವಾನಗಳು ಅಳುತ್ತಿದ್ದರೆ ಸಾವಿನ ಮುನ್ಸೂಚನೆ ಅನ್ನೋದೇಕೆ ಹಿರಿಯರು?
ರಾತ್ರಿ ಹೊತ್ತು ನಾಯಿಗಳು ಬೊಗಳಿದ್ರೆ ಅಥವಾ ಅಳುತ್ತಿದ್ದರೆ ಒಳ್ಳೆಯದಲ್ವಾ..? ಅಪಶಕುನನಾ..? ಯಾಕೆ ಹೀಗೆ ಕೇಳುತ್ತಿದ್ದೇವೆ ಅಂದ್ರೆ ಅದಕ್ಕೆ ಕಾರಣವೂ ಇದೆ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ನಾಯಿಗಳು ಜೋರಾಗಿ ಬೊಗಳಿದ್ರೆ ಅಥವಾ ಊಳಿಡುತ್ತಿದ್ದರೆ ಕೆಟ್ಟದ್ದಾಗುತ್ತೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ : ಹೊಸ ವರ್ಷಕ್ಕೆ ವಾಹನ ಚಾಲಕರಿಗೆ ಬಿಗ್ ಶಾಕ್ – ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತಷ್ಟು ದುಬಾರಿ!
ಪ್ರಾಣಿ, ಪಕ್ಷಿಗಳ ಕೆಲವೊಂದು ವರ್ತನೆಗಳು ಭವಿಷ್ಯವನ್ನು ಸೂಚಿಸುತ್ತವೆ ಎನ್ನುವ ನಂಬಿಕೆ ಇದೆ. ಅದ್ರಲ್ಲೂ ರಾತ್ರಿ ಹೊತ್ತು ನಾಯಿಗಳು ಜೋರಾಗಿ ಬೊಗಳಿದ್ರೆ ಅಥವಾ ಊಳಿಡುತ್ತಿದ್ರೆ ಏನೋ ಗ್ರಹಚಾರ ಕಾದಿದೆ ಅಂತಾ ಹಿರಿಯರು ಹೇಳ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಯಿಯು ರಾತ್ರಿ ವೇಳೆ ದೀರ್ಘಕಾಲದವರೆಗೆ ಮನೆಯ ಹೊರಗೆ ಬೊಗಳಿದರೆ ಅಥವಾ ಅಳುತ್ತಿದ್ದರೆ ಅದು ಅಹಿತಕರ ಘಟನೆಯನ್ನು ಸೂಚಿಸುತ್ತದೆ ಎನ್ನುವುದು ನಂಬಿಕೆ. ಹೀಗಾಗೇ ನಾಯಿಗಳು ಕರ್ಕಶವಾಗಿ ಶಬ್ದ ಮಾಡುತ್ತಿದ್ದರೆ ಅಥವಾ ಬೊಗಳುತ್ತಿದ್ರೆ ಜನ ಭಯಗೊಳ್ಳುತ್ತಾರೆ. ಶ್ವಾನಗಳನ್ನು ಬೈದುಕೊಳ್ಳುತ್ತಾ ಓಡಿಸಿ ಬರುತ್ತಾರೆ. ಇನ್ನೂ ಕೆಲವರ ಪ್ರಕಾರ ನಾಯಿಗಳು ಜೋರಾಗಿ ಬೊಗಳಿದ್ರೆ ಅಲ್ಲೇನೋ ನಕಾರಾತ್ಮಕ ಶಕ್ತಿ ಇದೆ. ಅದು ಶ್ವಾನಗಳ ಕಣ್ಣಿಗೆ ಕಾಣಿಸುತ್ತದೆ ಎನ್ನಲಾಗುತ್ತದೆ. ಅಲ್ಲದೆ ನಾಯಿಗಳು ಅತಿಯಾಗಿ ಮನೆಯ ಬಳಿ ಗೋಳಾಡುತ್ತಿದ್ದರೆ ಅಥವಾ ವಿಚಿತ್ರವಾಗಿ ಕೂಗುತ್ತಿದ್ದರೆ ಸಾವಿನ ಮುನ್ಸೂಚನೆ. ಯಾರದ್ದಾದರೂ ಸಾವಿನ ಸುದ್ದಿ ಬರುತ್ತದೆ ಎನ್ನುತ್ತಾರೆ. ಶ್ವಾನಗಳ ಈ ವರ್ತನೆ ಬಗ್ಗೆ ನಿಮಗೂ ಹಾಗೇ ಅನ್ನಿಸಿದ್ದರೆ ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.