ಅಶ್ವಿನಿ ಗೌಡ ಇಲ್ಲ ಅಂದಿದ್ರೆ ಬಿಗ್‌ ಬಾಸ್‌ ಮುಚ್ಚಬೇಕಿತ್ತು! – ಕರವೇ ಅಧ್ಯಕ್ಷ ಹೀಗೆ ಹೇಳಿದ್ಯಾಕೆ?

ಅಶ್ವಿನಿ ಗೌಡ ಇಲ್ಲ ಅಂದಿದ್ರೆ ಬಿಗ್‌ ಬಾಸ್‌ ಮುಚ್ಚಬೇಕಿತ್ತು! – ಕರವೇ ಅಧ್ಯಕ್ಷ ಹೀಗೆ ಹೇಳಿದ್ಯಾಕೆ?

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಫಿನಾಲೆಗೆ ಕೌಂಟ್‌ಡೌನ್‌ ಶುರುವಾಗಿದೆ. ಫಿನಾಲೆಯಲ್ಲಿ ಯಾರು ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಇವೆಲ್ಲದ್ರ ಮಧ್ಯೆ ಅಶ್ವಿನಿ ಗೌಡರನ್ನ ಈ ಸೀಸನ್‌ ವಿನ್ನರ್‌ ಮಾಡಲು ಹುನ್ನಾರ ನಡೆಯುತ್ತಿದೆ ಅನ್ನೋ ಮಾತು ಕೇಳಿಬಂದಿದೆ. ಇದೀಗ ಕರವೇ ಅಧ್ಯಕ್ಷ ನಾರಾಯಣಗೌಡ್ರು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಅಶ್ವಿನಿ ಇಲ್ಲ ಅಂದಿದ್ರೆ ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಶೋವನ್ನು ಮುಚ್ಚಬೇಕಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ: ಕೋರ್ಟ್‌ ಆದೇಶವಿದ್ರೂ ಮನೆಯೂಟ ನಿರಾಕರಣೆ! – ಪವಿತ್ರಾಗೌಡ ತಾಯಿಯಿಂದ‌ ಕೋರ್ಟ್​​ಗೆ ಅಫಿಡವಿಟ್ ಸಲ್ಲಿಕೆ

ಅಶ್ವಿನಿ ಗೌಡ ತಾನು ಕನ್ನಡ ಹೋರಾಟಗಾರ್ತಿ ಎಂದು ಹೇಳಿಕೊಂಡು ಬಿಗ್‌ಬಾಸ್‌ ಮನೆಗೆ ಆಗಮಿಸಿದ್ದರು. ಆದ್ರೆ ಇತ್ತೀಚೆಗೆ ಅಶ್ವಿನಿ ಗೌಡ ಹ್ಯಾಶ್‌ಟ್ಯಾಗ್‌ ಬರೆಯುವಾಗ ತಪ್ಪಾಗಿ ಬರೆದಿದ್ದರು. ಇದು ಟ್ರೋಲ್‌ ಆಗಿತ್ತು. ಇವೆಲ್ಲದ್ರ ಮಧ್ಯೆ ಅಶ್ವಿನಿ ಗೌಡ ಅವರ ಆಟದ ಬಗ್ಗೆ ಕರವೇ ಅಧ್ಯಕ್ಷ ನಾರಾಯಣಗೌಡ್ರು ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ. ಅಶ್ವಿನಿ ಗೌಡ ಇಲ್ಲ ಅಂದಿದ್ರೆ ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಶೋವನ್ನು ಮುಚ್ಚಬೇಕಾಗಿತ್ತು ಎಂದು ವಾಹಿನಿಯ ಮುಖ್ಯಸ್ಥರೇ ಹೇಳಿದ್ದರು ಎಂದು ನಾರಾಯಣಗೌಡ್ರು ಹೇಳಿದ್ದಾರೆ. ಈ ಮಾತನ್ನು ಅನೇಕರು ಟ್ರೋಲ್‌ ಮಾಡುತ್ತಿದ್ದಾರೆ.  .

ಇನ್ನು ಅಶ್ವಿನಿ ಕನ್ನಡ ಹೋರಾಟಗಾರ್ತಿ ಆಗಿದ್ರು ಅವರು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ್ದು. ಅವರಿಗೆ ಕನ್ನಡ ಬರೆಯೋಕೆ ಬರೋದಿಲ್ಲ ಅನ್ನೋದು ಬಿಗ್‌ ಬಾಸ್‌ ಮನೆಯಲ್ಲಿ ಇದು ಸಾಬೀತಾಗಿದೆ. ಈ ಬಗ್ಗೆ ಕೂಡ ಮಾತನಾಡಿರೋ ನಾರಾಯಣಗೌಡ್ರು, ಅಶ್ವಿನಿ ಗೌಡ ತಂದೆ ಶ್ರೀಮಂತರು, ಹೀಗಾಗಿ ಮಗಳನ್ನು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿಸಿದ್ದರು. ಅವರು ಕರವೇಗೆ ಬರುವಾಗ ನೀವು ಯಾವ ಮಾಧ್ಯಮದಲ್ಲಿ ಓದಿದ್ದೀರಿ ಎಂದು ನಾನು ಪ್ರಶ್ನೆ ಮಾಡಿರಲಿಲ್ಲ. ಇನ್ನೊಂದು ಕಡೆ ಅವರ ಉದ್ದೇಶ ಏನು ಎಂದು ಕೇಳಿದ್ದೆ. ಆಗ ಅವರು ಕನ್ನಡದ ಮೇಲೆ ಅಭಿಮಾನ ಇದೆ, ನಾನು ಕನ್ನಡತಿ ಎಂದು ಹೇಳಿದ್ದರು ಎಂದಿದ್ದಾರೆ.

ಇನ್ನು ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡಗೆ  ನಿಮ್ಮ ಡಿಮ್ಯಾಂಡ್‌ ಇದ್ದರೆ ತಿಳಿಸಿ ಎಂದು ಬಿಗ್‌ಬಾಸ್‌ ಕೇಳಿದ್ದರು. ಆಗ ಅವರು ಕರವೇ ಅಧ್ಯಕ್ಷ ನಾರಾಯಣಗೌಡ್ರು ಬರಬೇಕು ಎಂದು ಹೇಳಿದ್ದರು. ಇನ್ನು ಒಂದು ವಾರದಲ್ಲಿ ನಾರಾಯಣಗೌಡ್ರು ಮಗನ ಮದುವೆ ಇದೆ. ಇನ್ನೂ ಸಾಕಷ್ಟು ಜನರಿಗೆ ಮದುವೆ ಆಹ್ವಾನ ಪತ್ರಿಕೆ ಕೊಡಬೇಕು. ಹೀಗಾಗಿ ನಾನು ಬಿಗ್‌ಬಾಸ್‌ ಮನೆಗೆ ಹೋಗಲ್ಲ ಎಂದು ಅವರು ಹೋಗೋದಿಲ್ಲ ಎಂದು ಹೇಳಿದ್ದಾರೆ

Shwetha M