ಹಿಂದೂ ದೇವಾಲಯಗಳ ಮೇಲೆ ದುಷ್ಕರ್ಮಿಗಳು ದಾಳಿ – ಬಾಂಗ್ಲಾದಲ್ಲಿ ನಿಲ್ಲದ ದುಷ್ಟರ ಅಟ್ಟಹಾಸ
8 ವಿಗ್ರಹಗಳನ್ನು ಧ್ವಂಸಗೊಳಿಸಿದ ಪಾಪಿಗಳು

ಹಿಂದೂ ದೇವಾಲಯಗಳ ಮೇಲೆ ದುಷ್ಕರ್ಮಿಗಳು ದಾಳಿ –  ಬಾಂಗ್ಲಾದಲ್ಲಿ ನಿಲ್ಲದ ದುಷ್ಟರ ಅಟ್ಟಹಾಸ8 ವಿಗ್ರಹಗಳನ್ನು ಧ್ವಂಸಗೊಳಿಸಿದ ಪಾಪಿಗಳು

ಬಾಂಗ್ಲಾದೇಶದಲ್ಲಿ ಮೂರು ಹಿಂದೂ ದೇವಾಲಯಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳಲ್ಲಿ ದುಷ್ಕರ್ಮಿಗಳು ಬಾಂಗ್ಲಾದೇಶದ ಮೈಮೆನ್‌ಸಿಂಗ್ ಮತ್ತು ದಿನಾಜ್‌ಪುರ ಜಿಲ್ಲೆಗಳಲ್ಲಿ ಮೂರು ಹಿಂದೂ ದೇವಾಲಯಗಳಲ್ಲಿ ಎಂಟು ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ದರ್ಶನ್ಗೆ ಬಂತಾ ಗುಡ್ ಟೈಂ?- ಫಾರ್ಮ್ ಹೌಸ್ನಲ್ಲಿ ದಾಸ ಜಾಲಿ..

 

ಶೇಖ್ ಹಸೀನಾ ದೇಶ ತೊರೆದ ನಂತರ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮುಂದುವರೆದಿವೆ. ಬಾಂಗ್ಲಾದೇಶದಲ್ಲಿ ದಂಗೆ ನಡೆದಾಗಿನಿಂದ ಅಲ್ಲಿ ಪರಿಸ್ಥಿತಿ ಶಾಂತಿಯುತವಾಗಿಲ್ಲ.  ಬಾಂಗ್ಲಾದೇಶದಲ್ಲಿ ಮೂರು ಹಿಂದೂ ದೇವಾಲಯಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳಲ್ಲಿ ದುಷ್ಕರ್ಮಿಗಳು ಬಾಂಗ್ಲಾದೇಶದ ಮೈಮೆನ್‌ಸಿಂಗ್ ಮತ್ತು ದಿನಾಜ್‌ಪುರ ಜಿಲ್ಲೆಗಳಲ್ಲಿ ಮೂರು ಹಿಂದೂ ದೇವಾಲಯಗಳಲ್ಲಿ ಎಂಟು ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

 

ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಹಾಗೂ ಹಿಂದೂ ದೇವಾಲಯಗಳ ಮೇಲೆ ದಾಳಿ ಹೆಚ್ಚಿದೆ.   ಗುರುವಾರ ಮೈಮೆನ್ಸಿಂಗ್ನ ಹಲುಘಾಟ್ ಹಾಗೂ ಶುಕ್ರವಾರದಂದು ಶಕುವಾಯ್ನ ಯೂನಿಯನ್ನಲ್ಲಿರುವ ಬೋಂಡರ್ ಪಾರಾ ದೇವಾಲಯದಲ್ಲಿ ಎರಡು ವಿಗ್ರಹಗಳಿಗೆ ಹಾನಿಯಾಗಿದೆ. ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮೈಮೆನ್‌ಸಿಂಗ್‌ನಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೋಲಸಕಂಡ ಗ್ರಾಮದ ಅಲಾಲ್ ಉದ್ದೀನ್ (27) ಎಂಬಾತನನ್ನು ಪೋಲಸಕಂಡ ಕಾಳಿ ದೇವಸ್ಥಾನದಲ್ಲಿ ವಿಗ್ರಹವನ್ನು ಒಡೆದ ಆರೋಪದ ಮೇಲೆ ಗುರುವಾರ ಬಂಧಿಸಲಾಗಿದೆ. ಮಂಗಳವಾರ ದಿನಜ್‌ಪುರದ ಬಿರ್‌ಗಂಜ್ ಜಿಲ್ಲೆಯ ಜರ್ಬರಿ ಶಶನ್ ಕಾಳಿ ದೇವಸ್ಥಾನದಲ್ಲಿ ಐದು ವಿಗ್ರಹಗಳನ್ನು ಅಪವಿತ್ರಗೊಳಿಸಲಾಗಿದೆ. ಹೆಚ್ಚುತ್ತಿರುವ ಹಿಂಸಾಚಾರವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ.

Kishor KV

Leave a Reply

Your email address will not be published. Required fields are marked *