SMIT MACHCHHAR ಮೇಲೆ ದಾಳಿ! -ಕೋ-ಪೈಲಟ್‌ನ ಶಾಕಿಂಗ್ ಬ್ಯಾಕ್‌ಗ್ರೌಂಡ್

SMIT MACHCHHAR ಮೇಲೆ ದಾಳಿ! -ಕೋ-ಪೈಲಟ್‌ನ ಶಾಕಿಂಗ್ ಬ್ಯಾಕ್‌ಗ್ರೌಂಡ್

ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ವಿಮಾನದಲ್ಲೇ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿತ ಕೋ-ಪೈಲಟ್‌ನ ಗುರುತು ಇದೀಗ ಬಹಿರಂಗವಾಗಿದೆ. ಹಮಾಮ್ ಅಲ್-ಹಮ್ಮಾಮಿ ಎಂಬ 29 ವರ್ಷದ ಓಮನ್ ಪ್ರಜೆಯನ್ನು ಈ ದಾಳಿಯ ಆರೋಪಿಯಾಗಿ ಗುರುತಿಸಲಾಗಿದೆ ಎಂದು ಅಂತಾರಾಷ್ಟ್ರೀಯ ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ, ಹಮಾಮ್ ಅಲ್-ಹಮ್ಮಾಮಿ ಈ ಹಿಂದೆ ಓಮನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಓಮನ್ ಏರ್‌ನಲ್ಲಿ ಕೆಲಸ ಮಾಡುತ್ತಿದ್ದ. 2024ರಲ್ಲಿ ಆತನ ಬಳಿ ತೀವ್ರವಾದಿ ಸ್ವಭಾವಕ್ಕೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದವು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆತನನ್ನು ಫ್ಲೈಟ್ ತರಬೇತಿಯಿಂದ ತೆಗೆದುಹಾಕಲಾಗಿತ್ತು ಎಂದು ಅಧಿಕಾರಿಗಳ ಮೂಲಗಳು ಹೇಳಿವೆ. ಆದರೆ ಈ ವಿಚಾರಗಳ ಕುರಿತು ಅಧಿಕೃತ ತನಿಖೆ ಇನ್ನೂ ನಡೆಯುತ್ತಿದೆ.

ಇದನ್ನೂ ಓದಿ: ಲವ್ಲಿನಾ ಹೊಡೆದ್ರು ಗೋಲ್ಡನ್ ಪಂಚ್! – ಭಾರತಕ್ಕೆ ಮತ್ತೊಂದು ಚಿನ್ನದ ಪದಕ!

ಇದಾದ ಬಳಿಕ ಆತ ರಾಯಲ್ ಏರ್ ಮಾರೋಕ್‌ನಲ್ಲಿ ತರಬೇತಿ ಪಡೆದಿದ್ದು, ನಂತರ ಫ್ಲೈದುಬೈನಲ್ಲಿ ಕೋ-ಪೈಲಟ್ ಆಗಿ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. ಫ್ಲೈದುಬೈನಲ್ಲಿ ಸುಮಾರು ಎಂಟು ತಿಂಗಳು ಕೆಲಸ ಮಾಡಿದ್ದ ಎಂದು ವರದಿಯಾಗಿದೆ.

ಹಮಾಮ್ ಯುಎಇಯಲ್ಲಿ ಜನಿಸಿದ್ದು, ತಂದೆ ಓಮನ್ ಮೂಲದವರಾಗಿದ್ದರೆ, ತಾಯಿ ಸಿರಿಯಾ ಮೂಲದವರು ಎಂದು ಮೂಲಗಳು ತಿಳಿಸಿವೆ. ಆತನ ಜೀವನದ ಹಲವು ವರ್ಷಗಳು ಯುಎಇಯಲ್ಲೇ ಕಳೆದಿವೆ ಎನ್ನಲಾಗಿದೆ.

ಇದೀಗ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲಿನ ದಾಳಿಯ ಉದ್ದೇಶವೇನು, ಹಮಾಮ್‌ನ ಹಿಂದಿನ ಹಿನ್ನೆಲೆ ಮತ್ತು ವಿಮಾನಯಾನ ಸಂಸ್ಥೆಗಳ ಭದ್ರತಾ ಪರಿಶೀಲನೆಯಲ್ಲಿ ಯಾವುದೇ ಲೋಪವಾಗಿದೆಯೇ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ.

Kishor KV

Leave a Reply

Your email address will not be published. Required fields are marked *