ಸ್ವರ್ಗಕ್ಕೆ ಕಮ್ಮಿಯಿಲ್ಲ ಈ ವಿಶ್ವದ ಅತಿದೊಡ್ಡ ಕ್ರೂಸ್ ಹಡಗು – ಈ ದೈತ್ಯ ಹಡಗಿನಲ್ಲಿ 5 ಸಾವಿರ ಪ್ರಯಾಣಿಕರ ಐಷಾರಾಮಿ ವಿಹಾರ..!
ಐಕಾನ್ ಆಫ್ ದಿ ಸೀಸ್. ವಿಶ್ವದ ಅತಿದೊಡ್ಡ ಕ್ರೂಸ್ ಹಡಗು. ಸ್ವರ್ಗಕ್ಕೆ ಕಮ್ಮಿಯಿಲ್ಲ ಅನ್ನೋ ಸೌಲಭ್ಯಗಳು. ಸುಸಜ್ಜಿತ ಹಾಗು ಆಧುನಿಕ ಸೌಕರ್ಯಗಳನ್ನು ಒಳಗೊಂಡ ಈ ಕ್ರೂಸ್ ಇದೇ ಜೂನ್ 22 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಈ ಐಕಾನ್ ಆಫ್ ದಿ ಸೀಸ್ ಹಡಗು, ಫಿನ್ಲ್ಯಾಂಡ್‌ನ ಟರ್ಕುದಲ್ಲಿ ತನ್ನ ಮೊದಲ ಸಮುದ್ರ ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಅಧಿಕೃತವಾಗಿ ಮೊದಲ ಬಾರಿಗೆ ಪ್ರಯಾಣಿಸುತ್ತಿದೆ.
ಇದನ್ನೂ ಓದಿ: ಜಗತ್ತಿನ ಅತಿ ಉದ್ದ ಹಡಗು ‘ಗಂಗಾ ವಿಲಾಸ್’ ಲೋಕಾರ್ಪಣೆ – 27 ನದಿಗಳಲ್ಲಿ ಪ್ರವಾಸಿಗರ ನೌಕಾ ಯಾನ
ಈ ದೈತ್ಯ ಹಡಗು ಸುಮಾರು 365 ಮೀ ಉದ್ದ ಹಾಗು 250,800 ಟನ್ ತೂಕವನ್ನು ಹೊಂದಿದೆ. ಹಡಗಿನ ಪ್ರಾಥಮಿಕ ಪರೀಕ್ಷೆಗಳನ್ನು ಸುಮಾರು 450 ಕ್ಕೂ ಹೆಚ್ಚು ತಜ್ಞರು 4 ದಿನಗಳ ಕಾಲ ಸತತವಾಗಿ ಪರೀಕ್ಷಿಸಿದ್ದಾರೆ. ಈ ಐಷಾರಾಮಿ ದೈತ್ಯ ಹಡಗು, ತನ್ನ ಪ್ರಯಾಣಿಕರಿಗೆ ಅನೇಕ ಆಧುನಿಕ ಸೌಕರ್ಯಗಳನ್ನು ಒದಗಿಸುತ್ತದೆ. ಇದರಲ್ಲಿ ಅತಿದೊಡ್ಡ ವಾಟರ್ ಪಾರ್ಕ್ ಇದೆ. 40 ಕ್ಕೂ ಹೆಚ್ಚು ಮನರಂಜನೆಗಳು ಇಲ್ಲಿವೆ. ಥೀಮ್ ಪಾರ್ಕ್ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಹಡಗಿನ ಇತರ ಆಕರ್ಷಣೆಗಳಲ್ಲಿ ಸ್ವಿಮ್-ಅಪ್ ಬಾರ್, ಕುಟುಂಬಗಳಿಗೆ ಆಕ್ವಾ ಪಾರ್ಕ್, ಲೈವ್ ಸಂಗೀತ, ಆರ್ಕೇಡ್‌ಗಳು ಮತ್ತು ಲೈವ್ ಶೋಗಳು ಸೇರಿವೆ. ಇನ್ನು ಪ್ರಯಾಣಿಕರ ಅಭಿರುಚಿಗೆ ತಕ್ಕಂತೆ ಸ್ವಾದಿಷ್ಟ ಆಹಾರ, ವಿವಿಧ ಭಕ್ಷ್ಯಗಳು ಕೂಡಾ ಇದರಲ್ಲಿದೆ. ಈ ಹಡಗು ಸುಮಾರು 5,610 ಪ್ರಯಾಣಿಕರು ಮತ್ತು 2,350 ಸಿಬ್ಬಂದಿಗೆ ಅವಕಾಶ ಕಲ್ಪಿಸುತ್ತದೆ. ಸಮುದ್ರತೀರದ ಈ ಪ್ರಯಾಣವು 7 ರಾತ್ರಿಗಳನ್ನು ಕಳೆಯಬಹುದು.