ಇಂದಿರಾ ಕ್ಯಾಂಟೀನ್‌ನಲ್ಲಿ ಸಿಗಲಿದೆ ಐಸ್‌ಕ್ರೀಮ್, ಚಾಕೋಲೇಟ್..!
ಇಷ್ಟು ಸಮಯ ಇಂದಿರಾ ಕ್ಯಾಂಟೀನ್ ಇದೆ ಎಂಬ ಲೆಕ್ಕ ಬಿಟ್ಟರೆ ಬರೀ ದೂರುಗಳೇ ಕೇಳಿಬರುತ್ತಿತ್ತು. ಆದರೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಮತ್ತೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಇಂದಿರಾ ಕ್ಯಾಂಟೀನ್ಗಳಿಗೆ ಜಾಸ್ತಿ ಕಾಳಜಿ ತೋರಿಸುತ್ತಿದ್ದ ಸರ್ಕಾರ ಒಂದೊಂದಾಗಿಯೇ ಮೆನು ಕೂಡಾ ಬದಲಾವಣೆ ಮಾಡುತ್ತಿದೆ. ಮೊನ್ನೆಯಷ್ಟೇ ರಾಗಿಮುದ್ದೆ, ಚಪಾತಿ, ಸೊಪ್ಪಿನಸಾರು, ಪಾಯಸ ಇಂದಿರಾ ಕ್ಯಾಂಟೀನ್ ನ ಮೆನುವಿನಲ್ಲಿ ಸೇರಿಸಲಾಗುತ್ತದೆ ಎಂದು ಹೇಳಲಾಗಿತ್ತು. ಜೊತೆಗೆ ಮೊಟ್ಟೆ ಸೇರಿದಂತೆ ಹಲವು ಬಗೆಯ ಖಾದ್ಯಗಳು ಕೂಡಾ ಸದ್ಯದಲ್ಲೇ ಇಂದಿರಾಕ್ಯಾಂಟೀನ್ ಮೆನುವಿನಲ್ಲಿ ಸೇರ್ಪಡೆಯಾಗಲಿದೆ ಎಂದು ಹೇಳಲಾಗಿತ್ತು. ಈಗ ಇಂದಿರಾ ಕ್ಯಾಂಟೀನ್ ನಲ್ಲಿ ಐಸ್‌ಕ್ರೀಮ್ ಕೂಡಾ ಸಿಗಲಿದೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಗೆ ಪಾಯಸ, ಮುದ್ದೆ, ಚಪಾತಿ ಎಂಟ್ರಿ – ಊಟದ ಮೆನು ಜೊತೆ ದರದಲ್ಲೂ ಬದಲಾವಣೆ
ಇಂದಿರಾ ಕ್ಯಾಂಟೀನ್ ನಲ್ಲಿ ರುಚಿ ಮತ್ತು ಗುಣಮಟ್ಟದ ಬಗ್ಗೆ ಜನರಿಂದ ದೂರುಗಳು ಬಂದಿದ್ದರಿಂದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಇನ್ಮುಂದೆ ಇಂದಿರಾ ಕ್ಯಾಂಟೀನ್ಗಳಲ್ಲಿ ಊಟ ಮಾಡುವವರಿಗೆ ನಂದಿನಿ ಐಸ್ ಕ್ರೀಮ್, ಚಾಕೊಲೇಟ್, ಬಿಸ್ಕೇಟ್, ಹಾಲು, ಮೊಸರು, ತುಪ್ಪ ಕೂಡಾ ಸಿಗಲಿದೆ.. ನಂದಿನಿ ವ್ಯಾಪಾರ ವಹಿವಾಟು ಹೆಚ್ಚಿಸಲು ಇಂದಿರಾ ಕ್ಯಾಂಟೀನ್ಗಳಲ್ಲಿಯೇ ಸರ್ಕಾರ ಹಾಗೂ KMF ಸಹಯೋಗದಲ್ಲಿ ನಂದಿನಿ ಮಳಿಗೆ ತೆರಯಲು ಚಿಂತನೆ ನಡೆದಿದೆ. ಹೀಗಾಗಿ ಇನ್ಮುಂದೆ ಇಂದಿರಾ ಕ್ಯಾಂಟೀನ್ಗಳಲ್ಲಿ ನಂದಿನಿಯ ಉತ್ಪನ್ನಗಳೂ ಸಿಗಲಿವೆ.
ಬೆಂಗಳೂರಿನಲ್ಲಿದ್ದ 198 ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆಯನ್ನ 250ಕ್ಕೆ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ.