ಸೋತ ಮನಗಳಿಗೆ ಅಪ್ಪುಗೆಯ ಸಮಾಧಾನ – ಕೊಹ್ಲಿಯನ್ನು ತಬ್ಬಿ ಧೈರ್ಯ ತುಂಬಿದ ಅನುಷ್ಕಾ

ಸೋತ ಮನಗಳಿಗೆ ಅಪ್ಪುಗೆಯ ಸಮಾಧಾನ – ಕೊಹ್ಲಿಯನ್ನು ತಬ್ಬಿ ಧೈರ್ಯ ತುಂಬಿದ ಅನುಷ್ಕಾ

ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಆಘಾತ ಟೀಂ ಇಂಡಿಯಾ ಆಟಗಾರರನ್ನು ಇನ್ನೂ ಕಾಡುತ್ತಿದೆ. ಆ ನೊಂದ ಮನಸ್ಸುಗಳಿಗೆ ಅಪ್ಪುಗೆಯ ಧೈರ್ಯ ನೀಡಲಾಗ್ತಿದೆ. ಯಾರೆಲ್ಲಾ ಸಾಂತ್ವನ ಹೇಳಿದ್ದಾರೆ ಅನ್ನೋ ಬಗ್ಗೆ ಹೇಳ್ತೇನೆ. ನಾನು ಶಾಂತಾ. ನೀವು ಸುದ್ದಿಯಾನದ ಸಬ್ ಸ್ಕ್ರೈಬರ್ ಆಗೋದಿಕ್ಕೆ ಮರೀಬೇಡಿ.

ಐಸಿಸಿ ವಿಶ್ವಕಪ್ ನಲ್ಲಿ ಅಜೇಯವಾಗಿ ಫೈನಲ್ ತಲುಪಿದ್ದ ಟೀಂ ಇಂಡಿಯಾ ಆಟಗಾರರಿಗೆ ಆಸ್ಟ್ರೇಲಿಯಾ ವಿರುದ್ಧದ ಸೋಲು ನಿಜಕ್ಕೂ ನುಂಗಲಾರದ ತುತ್ತು. ಚಾಂಪಿಯನ್ ಆಗುವ ಮೂಲಕ ಶತಕೋಟಿ ಭಾರತೀಯರಿಗೆ ತಮ್ಮ ಗೆಲುವನ್ನ ಅರ್ಪಿಸಬೇಕು ಅಂತಿದ್ದ ಆಟಗಾರರಿಗೆ ಸೋಲನ್ನ ಅರಗಿಸಿಕೊಳ್ಳಲಾಗುತ್ತಿಲ್ಲ. ಇದೇ ಕಾರಣಕ್ಕೆ ಟೀಂ ಇಂಡಿಯಾ ಪ್ಲೇಯರ್ಸ್ ಗೆ ಹಲವರು ಅಪ್ಪುಗೆಯ ಮೂಲಕ ಧೈರ್ಯ ತುಂಬಿದ್ದಾರೆ. ಪಂದ್ಯ ಮುಗಿದ ಬಳಿಕ ಭಾರತದ ಎಲ್ಲಾ ಆಟಗಾರರು ನೋವಿನಲ್ಲಿದ್ದರು. ಇದರ ನಡುವೆ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ವಿರಾಟ್ ಕೊಹ್ಲಿ ಬಳಿ ಸಹಿ ಮಾಡಿದ ಭಾರತದ ಜೆರ್ಸಿ ಕೇಳಿದ್ದಾರೆ. ಬಳಿಕ ಕೊಹ್ಲಿಯನ್ನ ಅಪ್ಪಿಕೊಂಡು ಸಮಾಧಾನದ ಮಾತುಗಳನ್ನ ಹೇಳಿ ಜೆರ್ಸಿ ಪಡೆದಿದ್ದಾರೆ. ಕೊಹ್ಲಿ ಮತ್ತು ಮ್ಯಾಕ್ಸ್ ವೆಲ್ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡೋದ್ರಿಂದ ಇಬ್ಬರ ನಡುವೆ ಒಳ್ಳೆಯ ಸ್ನೇಹವೂ ಇದೆ.

ಇದನ್ನೂ ಓದಿ : ಜಗತ್ತಿನ ದುರದೃಷ್ಟಕರ ಆಟಗಾರ ಹಿಟ್‌ಮ್ಯಾನ್ – ರೋ-HIT ಬಗ್ಗೆ ಹೀಗೆಂದಿದ್ಯಾಕೆ ಹೆಡ್?

ಇನ್ನು ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರತಿ ಪಂದ್ಯಕ್ಕೂ ಹಾಜರಾಗುತ್ತಿದ್ದ ಅನುಷ್ಕಾ ಶರ್ಮಾ, ಕೊಹ್ಲಿ ಅವರ ಸಾಲು ಸಾಲು ದಾಖಲೆಗಳನ್ನ ಕಣ್ತುಂಬಿಕೊಂಡಿದ್ದರು. ಸ್ಟೇಡಿಯಂನಲ್ಲೇ ಕುಣಿದು ಕುಪ್ಪಳಿಸುತ್ತಾ ಮುದ್ದಿನ ಪತಿಯನ್ನ ಹುರಿದುಂಬಿಸುತ್ತಿದ್ದರು. ಆದ್ರೆ ವಿಶ್ವಕಪ್ ಫೈನಲ್ ನಲ್ಲಿ ಸೋಲಿನಿಂದ ನಿರಾಸೆಯಾಗಿ ಬರುತ್ತಿದ್ದ ಕೊಹ್ಲಿ ನೋವು ಅನುಷ್ಕಾರಿಗೆ ಅರ್ಥವಾಗಿತ್ತು. ಹೀಗಾಗೇ ಪ್ರೀತಿಯ ಅಪ್ಪುಗೆ ನೀಡಿ ಪತಿಗೆ ಸಮಾಧಾನ ಮಾಡಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿದೆ.

ಮ್ಯಾಚ್ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್​ಗೆ ತೆರಳಿದ್ದ ಪ್ರಧಾನಿ ಮೋದಿಯವರು ಕೂಡ ಟೀಂ ಇಂಡಿಯಾ ಆಟರಾರರ ಜೊತೆ ಮಾತನಾಡಿ ಹುಮ್ಮಸ್ಸು ತುಂಬಿದ್ರು. ಜೋಡೆತ್ತುಗಳಂತೆ ಟೀಂ ಇಂಡಿಯಾವನ್ನ ಫೈನಲ್​ಗೆ ಕೊಂಡೊಯ್ದಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಕೈ ಹಿಡಿದು ನಿಮ್ಮ ಜೊತೆ ಇಡೀ ಭಾರತವೇ ಇದೆ ಅಂತಾ ಅವರ ಪರಿಶ್ರಮವನ್ನ ಕೊಂಡಾಡಿದ್ರು.   ಟೂರ್ನಿಯಲ್ಲಿ ಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೇ ಸರಣಿಯುದ್ಧಕ್ಕೂ ಬೌಲಿಂಗ್ ಮೂಲಕವೇ ಜಾದೂ ಮಾಡಿದ್ದ ಮ್ಯಾಜಿಕಲ್ ಬೌಲರ್ ಮಹಮ್ಮದ್ ಶಮಿಯನ್ನ ಅಪ್ಪಿಕೊಂಡು ಸಂತೈಸಿದ್ರು.

ಅಷ್ಟೇ ಅಲ್ಲದೆ ಬಾಲಿವುಡ್ ಸ್ಟಾರ್ಸ್ ಸೇರಿದಂತೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಕೂಡ ಟೀಂ ಇಂಡಿಯಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ನೀವು ಫೈನಲ್ ಪಂದ್ಯ ಸೋತಿರಬಹುದು. ಆದರೆ ಕೋಟ್ಯಂತರ ಭಾರತೀಯರ ಮನಸ್ಸು ಗೆದ್ದಿದ್ದೀರಿ. ನಿಮ್ಮ ಜೊತೆ ನಾವಿದ್ದೇವೆ ಎಂದು ಹುರುಪು ತುಂಬಿದ್ದಾರೆ. ಆಟ ಅಂದಾಗ ಸೋಲು ಗೆಲುವು ಇದ್ದಿದ್ದೇ. ಗೆದ್ದಾಗ ಸಂಭ್ರಮಿಸೋ ನಾವು ಸೋತಾಗಲೂ ಕ್ರೀಡಾಮನೋಭಾವ ತೋರಬೇಕು.

Shantha Kumari