ಐಸಿಸಿ ಅಂಡರ್-19 ವಿಶ್ವಕಪ್ 2024 ರ ಫೈನಲ್ – ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತದ ಯುವಪಡೆ

ಐಸಿಸಿ ಅಂಡರ್-19 ವಿಶ್ವಕಪ್ 2024 ರ ಫೈನಲ್ – ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತದ ಯುವಪಡೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜ ಹೀಗೆ ಸದ್ಯ ಟೀಂ ಇಂಡಿಯಾದಲ್ಲಿರುವ ಯಾವುದೇ ಕ್ರಿಕೆಟರ್ಸ್​​ಗಳನ್ನ ತಗೊಳ್ಳಿ. ಎಲ್ಲರೂ ಅಂಡರ್​​-19 ವರ್ಲ್ಡ್​​​ಕಪ್​ ಆಡಿ ಬಂದವರೇ. ಈ ಪೈಕಿ ಕೆಲವರು ಟ್ರೋಫಿ ಎತ್ತಿ ಹಿಡಿದವರೇ.. ಅಂಡರ್​​-19 ಕ್ರಿಕೆಟ್ ಅಂತಾ ಬಂದಾಗ ಟೀಂ ಇಂಡಿಯಾಗೆ ಸಮಾನವಾದ ಇನ್ನೊಂದು ತಂಡ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಯಾವುದು ಕೂಡ ಇಲ್ಲ. ಅಂಡರ್​​-19 ವಿಶ್ವಕಪ್​ನಲ್ಲಿ 9ನೇ ಬಾರಿಗೆ ಭಾರತೀಯ ತಂಡ ಫೈನಲ್​​ಗೆ ಎಂಟ್ರಿಯಾಗಿದೆ. ಸತತ 5ನೇ ಬಾರಿಗೆ ನಮ್ಮವರು ಫೈನಲ್​ ಆಡ್ತಾ ಇದ್ದಾರೆ. ಇದುವರೆಗೆ ಭಾರತ ಒಟ್ಟು ಐದು ಬಾರಿ ಅಂಡರ್​​-19 ವರ್ಲ್ಡ್​​ಕಪ್ ಗೆದ್ದಿದೆ. ಸೀನಿಯರ್ಸ್​ಗಳ ಕ್ರಿಕೆಟ್​​ ವಿಚಾರಕ್ಕೆ ಬಂದ್ರೆ ಹೇಗೆ ವರ್ಲ್ಡ್​​ಕಪ್​ನಲ್ಲಿ ಆಸ್ಟ್ರೇಲಿಯಾ ಡಾಮಿನೇಟ್ ಮಾಡಿದ್ಯೋ, ಅದೇ ರೀತಿ ಅಂಡರ್​​-19ನಲ್ಲಿ ಟೀಂ ಇಂಡಿಯಾದ್ದೇ ದರ್ಬಾರು. ಭಾರತೀಯ ಕ್ರಿಕೆಟ್​ನ ಭವಿಷ್ಯದ ಸೂಪರ್ ಸ್ಟಾರ್​ಗಳು ಹೊರಹೊಮ್ಮುತ್ತಿರುವುದು ಕೂಡಾ ಇಲ್ಲಿಯೇ.

ಇದನ್ನೂ ಓದಿ:  ಆಂಗ್ಲರನ್ನು ಮಣಿಸಿ ಸೋಲಿಗೆ ಸೇಡು ತೀರಿಸಿಕೊಂಡ ಭಾರತ – ಗೆದ್ದರೂ ರೊಚ್ಚಿಗೆದ್ದಿದ್ದೇಕೆ ರೋಹಿತ್ ಶರ್ಮಾ?

ದಕ್ಷಿಣ ಆಫ್ರಿಕಾದಲ್ಲಿ ನಡೀತಿರೋ ಅಂಡರ್​​-19 ವರ್ಲ್ಡ್​​ಕಪ್​​ನ್ನ 6ನೇ ಬಾರಿಗೆ ಗೆಲ್ಲುವತ್ತ ಟೀಂ ಇಂಡಿಯಾ ದಾಪುಗಾಲಿಟ್ಟಿದೆ. ಸೆಮಿಫೈನಲ್​ನಲ್ಲಿ ಸೌತ್​​ ಆಫ್ರಿಕಾವನ್ನ ಅವರದ್ದೇ ನೆಲದಲ್ಲಿ ಮಣಿಸಿ ಭಾರತ ಫೈನಲ್​ ತಲುಪಿದೆ.

ಫಸ್ಟ್ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 50 ಓವರ್​ಗಳಲ್ಲಿ 244 ರನ್​​ ಗಳಿಸಿತ್ತು. ಟೀಂ ಇಂಡಿಯಾ 48.5 ಓವರ್​ಗಳಲ್ಲಿ 8 ವಿಕೆಟ್​​ಗಳನ್ನ ಕಳೆದುಕೊಂಡು ಟಾರ್ಗೆಟ್ ರೀಚ್ ಆಗಿದೆ. ಮ್ಯಾಚ್​​ನ ಒಂದು ಹಂತದಲ್ಲಿ ಭಾರತ ಸೋಲೋ ಭೀತಿಯಲ್ಲಿತ್ತು. ಆದ್ರೆ ಟೀಂ ಇಂಡಿಯಾದ ಯಂಗ್​​ ಗನ್​​​ಗಳಾದ ಸಚಿನ್ ಧಾಸ್ ಮತ್ತು ಕ್ಯಾಪ್ಟನ್ ಉದಯ್ ಸಹರಾನ್​​ರಿಂದಾಗಿ ಭಾರತ ಗೆಲುವಿನ ದಡ ಸೇರಿತ್ತು. ಈ ಪೈಕಿ ಸಚಿನ್ ದಾಸ್ 95 ಬಾಲ್​ಗಳಲ್ಲಿ 96 ರನ್​ ಹೊಡೆದ್ರು. ಕ್ಯಾಪ್ಟನ್ ಉದಯ್ ಸಹರಾನ್ 124 ಬಾಲ್​ಗಳಲ್ಲಿ 81 ರನ್ ಗಳಿಸಿದ್ರು. ನೇಪಾಳ ವಿರುದ್ಧದ ಮ್ಯಾಚ್​​ನಲ್ಲೂ ಇವರಿಬ್ಬರೇ ಸೆಂಚೂರಿ ಹೊಡೆದು ತಂಡವನ್ನ ಗೆಲ್ಲಿಸಿದ್ರು. ಐದನೇ ವಿಕೆಟ್​ಗೆ 171 ರನ್​ಗಳ ಪಾಟ್ನರ್​​​ಶಿಪ್​​​ ಬಂದಿತ್ತು. ಅಂತೂ ಟೀಂ ಇಂಡಿಯಾ ಈಗಾಗ್ಲೇ ಫೈನಲ್​ಗೆ ಎಂಟ್ರಿಯಾಗಿದೆ. ಈ ಬಾರಿಯ ಅಂಡರ್​-19 ವರ್ಲ್ಡ್​ಕಪ್​ ಫೈನಲ್ ಸೂಪರ್​ ಡೂಪರ್​ ಆಗಿರೋದಂತೂ ಗ್ಯಾರಂಟಿ.

 

ಟೀಂ ಇಂಡಿಯಾದ ಫ್ಯೂಚರ್​ ಸ್ಟಾರ್ ಸಚಿನ್ ಧಾಸ್​ ಬಗ್ಗೆ ಒಂದಷ್ಟು ಹೇಳಲೇಬೇಕು. ಮಹಾರಾಷ್ಟ್ರದ ಪುಣೆ ಮೂಲದ ಈ ಯಂಗ್​ ಬ್ಯಾಟ್ಸ್​​ಮನ್ ಅಂಡರ್​​-19 ವರ್ಲ್ಡ್​​ಕಪ್​​ನಲ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅವರ ತಂದೆಯೇ ಅಂದರೂ ತಪ್ಪಾಗಲಾರದು. ಅವರ ತಂದೆ ಶೇಖ್ ಅಜರ್ ಕೋಚ್ ಕೂಡಾ ಹೌದು. ಸಚಿನ್ ಧಾಸ್ ಈಗ ಒಬ್ಬ ಬೆಸ್ಟ್ ಫಿನಿಷರ್ ಆಗಿ ಟೀಂ ಇಂಡಿಯಾದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಮ್ಯಾಚ್​​ಗಳನ್ನ ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ.

ಈ ಯಂಗ್ ಅಪ್​​ಕಮಿಂಗ್ ಸ್ಟಾರ್ ಆ್ಯಕ್ಚುವಲಿ ವಿರಾಟ್ ಕೊಹ್ಲಿಯ ದೊಡ್ಡ ಫ್ಯಾನ್. ತಂದೆ ಸಚಿನ್ ಫ್ಯಾನ್ ಆದ್ರೆ, ಮಗ ಕೊಹ್ಲಿ ಫ್ಯಾನ್. ಬಟ್ ನಮ್ಮ ದೇಶದಲ್ಲಿ NEXT ಜನರೇಷನ್​​ ಕ್ರಿಕೆಟರ್ಸ್​ಗಳು ಹೇಗೆ ರೂಪುಗೊಳ್ತಾ ಇದ್ದಾರೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. ಯಾಕ ಅಂತಾ ಹೇಳ್ತೀನಿ, ಅಸಲಿಗೆ ಕ್ರಿಕೆಟ್​​ನಲ್ಲಿ ವಿರಾಟ್ ಕೊಹ್ಲಿಯ ರೋಲ್ ಮಾಡೆಲ್ ಆಗಿರೋದು ಸಚಿನ್ ತೆಂಡೂಲ್ಕರ್. ಕೇವಲ ಕೊಹ್ಲಿ ಅಂತೇನಲ್ಲ, ರೋಹಿತ್ ಶರ್ಮಾ, ಶುಬ್ಮನ್ ಗಿಲ್ ಸೇರಿದಂತೆ ಸದ್ಯ ಟೀಂ ಇಂಡಿಯಾದಲ್ಲಿ ಸಾಕಷ್ಟು ಬ್ಯಾಟ್ಸ್​​ಮನ್​​ಗಳು ಸಚಿನ್​ರಿಂದಲೇ ಇನ್​ಸ್ಪೈರ್​ ಆಗಿರೋರು. ಬಟ್ ಈಗ ಅಂಡರ್​​-19 ಟೀಮ್​ನಲ್ಲಿ ಆಡ್ತಿರೋರು, NEXT ಸೀನಿಯರ್​ ಟೀಮ್​ಗೆ ಎಂಟ್ರಿ ಕೊಡೋರಿಗೆ ವಿರಾಟ್ ಕೊಹ್ಲಿ, ರೋಹಿತ್​​ ಶರ್ಮಾರೆ ರೋಲ್​ ಮಾಡಲೆಗಳಾಗಿದ್ದಾರೆ. ಇಲ್ಲೊಂದು ತಂದೆ-ಮಕ್ಕಳ ಜನರೇಷನ್ ಕನೆಕ್ಷನ್ ಕೂಡ ಇದೆ. ಆ ಕನೆಕ್ಷನ್​ನಿಂದಾಗಿಯೇ ಭಾರತದಲ್ಲಿ ಜ್ಯೂನಿಯರ್ ಕ್ರಿಕೆಟ್ ಹೈ ಸ್ಟ್ರ್ಯಾಂಡರ್ಡ್​ ಆಗಿದೆ. ಕ್ವಾಲಿಟಿ ಯಂಗ್ ಕ್ರಿಕೆಟರ್ಸ್​ಗಳು ಟೀಂ ಇಂಡಿಯಾಗೆ ಸಿಗ್ತಾ ಇದ್ದಾರೆ. ನೋಡಿ, ಈಗಿನ ಜನರೇಷನ್​ ಕ್ರಿಕೆಟರ್ಸ್​​ಗಳ ಪೋಷಕರು ಸಚಿನ್ ತೆಂಡೂಲ್ಕರ್​ ಫ್ಯಾನ್ಸ್​ ಆಗಿರ್ತಾರೆ. ತಮ್ಮ ಮಗ ಸಚಿನ್​ರಂತಾಗಬೇಕು ಅಂತಾ ಬಯಸಿ ಕ್ರಿಕೆಟ್​​​ಗೆ ಪುಶ್ ಮಾಡ್ತಾರೆ. ಹಾಗೆ ತಂದೆಯಿಂದಾಗಿ ಗ್ರೌಂಡ್​​​ಗೆ ಇಳಿಯೋ ಮಕ್ಕಳಿಗೆ ಸದ್ಯ ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ ಫೇವರೇಟ್ ಪ್ಲೇಯರ್ ಆಗಿರ್ತಾರೆ. ತಂದೆಯಿಂದಾಗಿ ಸಚಿನ್​​ರನ್ನ ಫಾಲೋ ಮಾಡ್ತಾರೆ, ಹಾಗೆಯೇ ತಮ್ಮ ರೋಲ್​​ ಮಾಡೆಲ್​ ವಿರಾಟ್ ಕೊಹ್ಲಿಯಂತಾಗೋಕೆ ಎಫರ್ಟ್ ಹಾಕ್ತಾರೆ. ಇಲ್ಲಿ ಸಚಿನ್ ಧಾಸ್ ವಿಚಾರದಲ್ಲಿ ಆಗಿರೋದು ಇದೇ ನೋಡಿ. ಧಾಸ್ ತಂದೆ ತೆಂಡೂಲ್ಕರ್ ಫ್ಯಾನ್​.. ಹೀಗಾಗಿ ಮಗ ಕ್ರಿಕೆಟರ್​ ಆಗಬೇಕು ಕನಸು ಕಂಡ್ರು. ಹಾಗೆ ಫ್ರಾಕ್ಟೀಸ್ ಶುರು ಮಾಡಿದ ಸಚಿನ್ ಧಾಸ್ ಈಗ ವಿರಾಟ್ ಕೊಹ್ಲಿಯನ್ನ ಫಾಲೋ ಮಾಡ್ತಿದ್ದಾರೆ. ಕ್ರಿಕೆಟ್​ಗೆ ಸಂಬಂಧಿಸಿ ಭಾರತದಲ್ಲಿರೋ ಈ ತಂದೆ-ಮಕ್ಕಳ ಕನೆಕ್ಷನ್ ಇದ್ಯಲ್ಲಾ, ಇದ್ರಿಂದಾಗಿಯೇ ನಮ್ಮ ಅಂಡರ್​-19 ಟೀಮ್ ಇಷ್ಟೊಂದು ಸ್ಟ್ರಾಂಗ್ ಆಗಿರೋದು. ಆಲ್​ಮೋಸ್ಟ್ ಎಲ್ಲಾ ಕ್ರಿಕೆಟರ್ಸ್​ಗಳು ಕೂಡ ತಮ್ಮ ತಂದೆಯಿಂದಾಗಿಯೇ ಇವತ್ತು ಭಾರತದ ಪರ ಆಡ್ತಾ ಇರೋದು. ಕ್ರಿಕೆಟರ್ಸ್​ಗಳ ಸಕ್ಸಸ್ ಹಿಂದೆ ಅವರ ಪೋಷಕರ ಎಸ್ಪೆಷಲಿ ತಂದೆಯಂದಿರು ಮಾಡಿರೋ ಸ್ಯಾಕ್ರಿಫೈನ್ ತುಂಬಾನೆ ಇದೆ. ರಿಂಕು ಸಿಂಗ್​ರನ್ನ ತಗೊಳ್ಳಿ. ಅವರ ತಂದೆ ಸಿಲಿಂಡರ್, ಲೋಡಿಂಗ್-ಅನ್ಲೋಡಿಂಗ್ ಮಾಡಿ ಮಗನ ಬೆನ್ನಿಗೆ ನಿಂತ್ರು. ಇಂಥಾ ಹಲವಾರು ಸ್ಟೋರಿಗಳು ನಮ್ಮ ಕ್ರಿಕೆಟರ್ಸ್​ಗಳ ಹಿಂದೆ. ಈ ತಂದೆ-ಮಕ್ಕಳ ಕ್ರಿಕೆಟ್ ಕೆನೆಕ್ಷನ್ ತುಂಬಾನೆ ಇಂಟ್ರೆಸ್ಟಿಂಗ್ ಫ್ಯಾಕ್ಟ್.

ಟೀಂ ಇಂಡಿಯಾ ಪರ ಸಚಿನ್ ಧಾಸ್ ಈಗ 6ನೇ ಆರ್ಡರ್​​ನಲ್ಲಿ ಬ್ಯಾಟಿಂಗ್ ಮಾಡ್ತಿದ್ದಾರೆ. ಟಾಪ್​ ಆರ್ಡರ್​ ಕೊಲ್ಯಾಪ್ಸ್​ ಆದಾಗಲೆಲ್ಲಾ ತಂಡಕ್ಕೆ ನೆರವಾಗ್ತಾ ಇರೋದೆ ಸಚಿನ್. ಸೌತ್​ ಆಫ್ರಿಕಾ ವಿರುದ್ಧ ಸೆಮಿಫೈನಲ್​​ನಲ್ಲಿ ಸಚಿನ್​ ಧಾಸ್ ಕ್ರೀಸ್​ಗೆ ಇಳಿದಾಗ ಕೇವಲ 31 ರನ್​ಗಳಿಗೆ ಭಾರತ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಬಟ್ ಸಚಿನ್ ಧಾಸ್ 96 ರನ್​ ಗೊಡೆಯೋ ಮೂಲಕ ಅಕ್ಷರಶ: ತಮ್ಮ ಬ್ಯಾಟಿಂಗ್ ಮಾಸ್ಟರ್​ ಕ್ಲಾಸ್​​ ಡಿಸ್​​ಪ್ಲೇ ಮಾಡಿದ್ರು. ಪೇಸ್​​ ಬೌಲರ್ಸ್​ಗಳಿಗೆ ಪುಲ್​ ಶಾಟ್ಸ್, ಸ್ಪಿನ್ನರ್ಸ್​ಗಳಿಗೆ ಸ್ಲಾಗ್ ಸ್ವೀಪಿಂಗ್, ಈ ವೇಳೆ ಬಾಡಿ ಸಚಿನ್ ಧಾಸ್ ಬಾಡಿ ಬ್ಯಾಲೆನ್ಸ್ ಅಂತೂ ಸಿಂಪ್ಲಿ ಸೂಪರ್ಬ್ ಆಗಿತ್ತು. ಬೆಳಗ್ಗಿನ ಅವಧಿಯಲ್ಲಿ ನಾಲ್ಕು ಗಂಟೆ, ಸಂಜೆ ಹೊತ್ತಲ್ಲಿ ಮೂರು ಗಂಟೆ..ದಿನಕ್ಕೆ ಒಟ್ಟು 7 ಗಂಟೆ ಬ್ಯಾಟಿಂಗ್​ ಪ್ರಾಕ್ಟೀಸ್​ ಮಾಡ್ತಿರೋದ್ರಿಂದಾಗಿಯೇ ಸಚಿನ್ ಧಾಸ್ ತಮ್ಮ ಶಾಟ್ಸ್​ಗಳಲ್ಲಿ ಪರ್ಫೆಕ್ಷನಿಸ್ಟ್ ಎನ್ನಿಸಿಕೊಂಡಿದ್ದಾರೆ.

ಅಂಡರ್​-19 ವರ್ಲ್ಡ್​ಕಪ್​ ಸಚಿನ್ ಧಾಸ್​​ಗೆ ದೊಡ್ಡ ಟರ್ನಿಂಗ್​ ಪಾಯಿಂಟ್ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಬಟ್ ಇದೇ ಹಾರ್ಡ್​ವರ್ಕ್, ಪರ್ಫಾಮೆನ್ಸ್​ ಮೇಂಟೇನ್ ಮಾಡಲೇಬೇಕು. ಕ್ರಿಕೆಟ್ ಅನ್ನೋದು ನಿಂತ ನೀರಂತೂ ಅಲ್ಲ. ಹೀಗಾಗಿ ಈಜೋದು ಕೂಡ ಅಷ್ಟೊಂದು ಸುಲಭ ಇಲ್ಲ. ಆದ್ರೆ ಸಚಿನ್ ಧಾಸ್​ರ ಈವರೆಗಿನ ಜರ್ನಿ ನೋಡಿದ್ರೆ, ಭಾರತದ ಸೀನಿಯರ್​​ ಟೀಂಗೆ ಎಂಟ್ರಿ ಕೊಡೋದಂತೂ ಗ್ಯಾರಂಟಿ. ಅದ್ರಲ್ಲೂ ವರ್ಲ್ಡ್​​ಕಪ್​ ಫೈನಲ್​​ನಲ್ಲೂ ಕ್ಲಿಕ್ ಆದ್ರೆ ತಮ್ಮ ರೋಲ್​ ಮಾಡೆಲ್ ವಿರಾಟ್​ ಕೊಹ್ಲಿ ಜೊತೆಗೆ ಆಡೋ ದಿನ ಇನ್ನಷ್ಟು ಬೇಗನೆ ಬರಬಹುದು. ಹಾಗಂತಾ ಅಂಡರ್​-19 ವರ್ಲ್ಡ್​ಕಪ್​ನಲ್ಲಿ ಕ್ಲಿಕ್ ಆದ ಮಾತ್ರಕ್ಕೆ, ಟ್ರೋಫಿ ಗೆದ್ದ ಮಾತ್ರಕ್ಕೆ ಟೀಂ ಇಂಡಿಯಾದಲ್ಲಿ ಪರ್ಮನೆಂಟ್ ಸ್ಥಾನ ಪಡೆದುಕೊಳ್ಳಬೇಕು ಅಂತೇನಿಲ್ಲ. ಭವಿಷ್ಯದಲ್ಲಿ ಸೂಪರ್​ ಸ್ಟಾರ್​ಗಳಾಗಬೇಕು ಅಂತಾನೂ ಇಲ್ಲ. ಯಾಕಂದ್ರೆ, 2012ರಲ್ಲಿ ಅಂಡರ್​​-19 ವಿಶ್ವಕಪ್​ ವಿನ್ನಿಂಗ್ ಕ್ಯಾಪ್ಟನ್ ಉನ್ಮುಕ್ತ್ ಚಾಂದ್ ಬಳಿಕ ಎಲ್ಲಿ ಹೋದ್ರೂ ಅಂತಾನೆ ಇಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರ ಅಡ್ರಸ್ಸೇ ಇಲ್ಲ. ಹಾಗೆಯೇ 2018ರ ಚಾಂಪಿಯನ್ ಪೃಥ್ವಿ ಶಾ ಕೂಡ ಅಷ್ಟೇ, ಇಂಡಿಯನ್ ಟೀಮ್​​​ನಲ್ಲಿ ಜಾಗ ಪಡೆಯೋಕೆ ಒದ್ದಾಡ್ತಿದ್ದಾರೆ. ಕೇವಲ ಐಪಿಎಲ್​​​​ಗಷ್ಟೇ ಸೀಮಿತವಾಗಿದ್ದಾರೆ. ಸೋ ಈ ಯಂಗ್​ಸ್ಟರ್ಸ್​​ಗಳು ಮೈಮರೆತ್ರೆ ಅಂಡರ್​-19 ಬಳಿಕ ಕ್ರಿಕೆಟ್​​ನಿಂದಲೇ ಕಾಣೆಯಾಗಿಬಿಡ್ತಾರೆ. ಹೀಗಾಗಿ ಅಂಡರ್-19 ಸೇರಿದಂತೆ ಯುವ ಕ್ರಿಕೆಟಿಗರಿಗೆ ಇಲ್ಲೊಂದಷ್ಟು ಲೆಸನ್ ಕೂಡ ಇದೆ. ಓಕೆ..ಈ ಬಾರಿ ಫೈನಲ್​ನಲ್ಲಿ ಭಾರತ ಮತ್ತೊಮ್ಮೆ ಚಾಂಪಿಯನ್ ಆಗಲಿ ಅಂತಾ ವಿಶ್ ಮಾಡೋಣ. ಫೆಬ್ರವರಿ-11ರಂದು ಮಧ್ಯಾಹ್ನ 1.30ಕ್ಕೆ ವರ್ಲ್ಡ್​​ಕಪ್ ಫೈನಲ್​ ಮ್ಯಾಚ್ ನಡೆಯಲಿದೆ.

Sulekha