ಕ್ರಿಕೆಟ್ ಶಿಶುಗಳಲ್ಲ.. ಶಕ್ತಿಶಾಲಿಗಳು – ಯಾಮಾರಿದ್ರೆ ಮೈದಾನದಲ್ಲೇ ಗುನ್ನಾ
IND, PAK, ENG ಜಸ್ಟ್ ಪಾಸ್

ಹತ್ತನೇ ಆವೃತ್ತಿಯ ಟಿ-20 ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ 20 ತಂಡಗಳು ಭಾಗವಹಿಸಿವೆ. ಬಟ್ ಗ್ರೂಪ್ ಹಂತದ ಪಂದ್ಯಗಳ ಬಗ್ಗೆ ಅಭಿಮಾನಿಗಳಿಗೆ ಅಷ್ಟೇನು ಕ್ರೇಜ್ ಇರ್ಲಿಲ್ಲ. ಯಾಕಂದ್ರೆ ಅಲ್ಲಿ ಬಲ ಮತ್ತು ದುರ್ಬಲರ ನಡುವಿನ ಮ್ಯಾಚ್ಗಳು. ಬಲಿಷ್ಠ ತಂಡಗಳು ಒನ್ ಸೈಡೆಡ್ ಆಗಿ ಗೆದ್ಕೊಳ್ತಾರೆ ಅನ್ಕೊಳ್ತಿದ್ರು. ಆದ್ರೆ ಪಂದ್ಯಗಳು ಸ್ಟಾರ್ಟ್ ಆದ್ಮೇಲೆ ಕ್ರಿಕೆಟ್ ಜನಕರು, ಜಗತ್ತಿನ ನಂಬರ್ 1 ಟೀಮ್ಗಳೇ ಶೇಕ್ ಆಗಿವೆ. ಕ್ರಿಕೆಟ್ ಶಿಶುಗಳು ಅನ್ಕೊಂಡವ್ರೇ ಸೋಲಿನ ಭಯ ಹುಟ್ಟಿಸಿದ್ದಾರೆ.
ಇದನ್ನೂ ಓದಿ : ಬಾಯ್‌ಫ್ರೆಂಡ್‌ಗೆ ಅಮ್ಮ, ದೊಡ್ಡಮ್ಮನ ಖಾಸಗಿ ಫೋಟೋ ಕಳುಹಿಸಿದ್ಲು ಪಾಪಿ ಮಗಳು!
ಫೆಬ್ರವರಿ 7ರಿಂದ ಟಿ-20 ವಿಶ್ವಕಪ್ ಸ್ಟಾರ್ಟ್ ಆಗಿದ್ದು ಟೋಟಲ್ 20 ತಂಡಗಳು ಫೈಟ್ ನಡೆಸ್ತಿವೆ. 5 ತಂಡಗಳನ್ನ 4 ಗುಂಪುಗಳನ್ನಾಗಿ ಡಿವೈಡ್ ಮಾಡಿದ್ದು ಒಂದೊಂದು ಪಂದ್ಯಗಳೂ ಹಲ್ಚಲ್ ಎಬ್ಬಿಸಿವೆ. ಅದ್ರಲ್ಲೂ ಯಾರೆಲ್ಲಾ ವೀಕ್ ಟೀಂ, ಜಸ್ಟ್ ನಂಬರ್ಗೋಸ್ಕರ ಮ್ಯಾಚ್ ಆಡ್ತಾರೆ ಅನ್ಕೊಂಡಿದ್ವೋ ಅದೇ ತಂಡಗಳು ಈ ಸೀಸನ್ನಲ್ಲಿ ನಾವೇನು ಡಮ್ಮಿ ಅಲ್ಲ ಡೇಂಜರಸ್ ಅನ್ನೋ ಥರನೇ ಪರ್ಫಾಮ್ ಮಾಡಿದ್ದಾರೆ. ಭಾರತ, ಇಂಗ್ಲೆಂಡ್, ಪಾಕಿಸ್ತಾನದಂತ ತಂಡಗಳೂ ಬೆವರುವಂತೆ ಮಾಡಿದ್ದಾರೆ.
ಬಲಿಷ್ಠ ಭಾರತವನ್ನೇ ಶೇಕ್ ಮಾಡಿದ ಅಮೆರಿಕ!
ಭಾರತ. ಟಿ-20ಐ ಫಾರ್ಮೆಟ್ನಲ್ಲಿ ಜಗತ್ತಿನಲ್ಲೇ ನಂಬರ್ 1 ಟೀಂ. ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿಯಂಥ ನಂಬರ್ 1 ರ್ಯಾಂಕಿಂಗ್ ಪ್ಲೇಯರ್ಸ್. 2024ರ ಟಿ-20 ವಿಶ್ವಕಪ್ನಿಂದ ಒಂದೂ ಸರಣಿ ಸೋಲದೆ ವಿಶ್ವಕಪ್ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಭಾರತಕ್ಕೆ ಮೊದಲ ಪಂದ್ಯದಲ್ಲೇ ಶಾಕ್ ಕೊಟ್ಟಿದ್ದು ಕ್ರಿಕೆಶ್ ಶಿಶು ಅಂತಾ ಕರೆಸಿಕೊಳ್ಳೋ ಅಮೆರಿಕ. ಯೆಸ್. ಶನಿವಾರ ನಡೆದಿದ್ದ ಈ ಪಂದ್ಯದಲ್ಲಿ ಅಮೆರಿಕ ತಂಡ ಭಾರತವನ್ನ ಅಕ್ಷರಶಃ ನಡುಗಿಸಿದೆ. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಭಾರತದ ಪರ ಅಭಿಷೇಕ್ ಶರ್ಮಾರನ್ನ ಗೋಲ್ಡನ್ ಡಕ್ ಔಟ್ ಮಾಡಿದ್ದ ಯುಸ್ ಬೌಲರ್ಸ್ ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆಯನ್ನ ಬಂದಷ್ಟೇ ವೇಗವಾಗಿ ವಿಕೆಟ್ ತೆಗೆದಿದ್ರು. 77 ರನ್ಗೆ 6 ವಿಕೆಟ್.. 100 ರನ್ಗಳ ಒಳಗೇ ಆಲೌಟ್ ಆಗ್ತಾರೆ ಎನ್ನುವಂತೆ ಭಯ ಹುಟ್ಟಿಸಿದ್ರು. ಬಟ್ ಆವತ್ತು ಸೂರ್ಯಕುಮಾರ್ ಯಾದವ್ ಸಿಂಗಲ್ ಶೇರ್ನಂತೆ ನಿಂತು 84 ರನ್ಗಳ ಇನ್ನಿಂಗ್ಸ್ ಆಡಿದ್ರು. ಹಾಗೇ ನಮ್ಮ ಬೌಲರ್ಗಳು ಪಂದ್ಯವನ್ನ ಕಂಟ್ರೋಲ್ಗೆ ತಗೊಂಡ್ರು. ಇಲ್ಲದೇ ಇದ್ರೆ ಕ್ರಿಕೆಟ್ ಚರಿತ್ರೆಯಲ್ಲಿ ಅಮೆರಿಯ ಐತಿಹಾಸಿಕ ದಾಖಲೆ ಬರೆಯುತ್ತಿತ್ತು.
ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡವನ್ನೇ ನಡುಗಿಸಿದ ನೇಪಾಳ!
ಇಂಗ್ಲೆಂಡ್.. ಕ್ರಿಕೆಟ್ನ ಹುಟ್ಟು ಹಾಕಿದ ರಾಷ್ಟ್ರ. ಕ್ರಿಕೆಟ್ ಜನಕರು ಅಂತಾನೇ ಕರೆಸಿಕೊಳ್ಳೋ ಇಂಗ್ಲೆಂಡ್ ಜಗತ್ತಿನ ಒನ್ ಆಫ್ ದಿ ಟಫೆಸ್ಟ್ ಟೀಂ. ಆದ್ರೆ ಇಂಥಾ ತಂಡಕ್ಕೆ ನಡುಕ ಹುಟ್ಟಿಸಿದ್ದು ನೇಪಾಳ. ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ ಏಳು ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತು. 185 ರನ್ಗಳ ಟಾರ್ಗೆಟ್ ಬೆನ್ನತ್ತಿದ ನೇಪಾಳ ಕೊನೇ ಓವರ್ವರೆಗೂ ಇಂಗ್ಲಿಷರನ್ನ ಶೇಕ್ ಮಾಡಿತ್ತು. ಕೊನೇ ಓವರ್ನಲ್ಲಿ 10 ರನ್ ಬೇಕಿದ್ದಾಗ ನೇಪಾಳ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣ್ತಿತ್ತು. ಆದ್ರೆ ಅಂತಿಮವಾಗಿ ಇಂಗ್ಲೆಂಡ್ ಬೌಲರ್ ಸ್ಯಾಮ್ ಕರ್ರನ್ 6 ರನ್ ಮಾತ್ರ ನೀಡಿದ್ರು. ಹೀಗಿದ್ರೂ ಕೊನೇ ಮೂಮೆಂಟ್ವರೆಗೂ ಫೈಟ್ ಮಾಡಿದ ನೇಪಾಳ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 ರನ್‌ಗಳನ್ನು ಗಳಿಸಿ, ನಾಲ್ಕು ರನ್‌ಗಳಿಂದ ಸೋತಿತು. ನೇಪಾಳ ಪಂದ್ಯ ಸೋತ್ರೂ ಅವ್ರ ಫೈಟ್ ಮಾತ್ರ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದೆ. ಕಳೆದ ಬಾರಿ ವಿಶ್ವಕಪ್ನಲ್ಲಿ ನೇಪಾಳ ಒಂದೇ ಒಂದು ಪಂದ್ಯ ಗೆಲ್ಲದೇ ಇದ್ರೂ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ ಒಂದು ರನ್‌ನಿಂದ ಸೋತು ಅಚ್ಚರಿ ಮೂಡಿಸಿತ್ತು.
ಪಾಕಿಸ್ತಾನಕ್ಕೆ ಸೋಲಿನ ಚೋಕ್ ಕೊಟ್ಟ ನೆದರ್ ಲ್ಯಾಂಡ್!
ಇನ್ನು ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೂ ಸೇಮ್ ಸಿಚುಯೇಷನ್. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ 19.5 ಓವರ್‌ಗಳಲ್ಲಿ 147 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 19.3 ಓವರ್‌ಗಳಲ್ಲಿ ಗೆದ್ದಿತು. ಈ ಗುರಿ ಬೆನ್ನಟ್ಟಿದ್ದ ಪಾಕ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡ್ಸಿದ್ರು. ಇನ್ನೇನು ನೆದರ್ಲ್ಯಾಂಡ್ ಗೆದ್ದೇ ಬಿಡುತ್ತೆ ಅನ್ನೋ ಸಿಚುಯೇಷನ್ ಇತ್ತು. ಬಟ್ ಕೊನೇ 2 ಓವರ್‌ಗಳಲ್ಲಿ ಪಾಕ್ ಬೌಲರ್ ಫಹೀಮ್ ಆಶ್ರಫ್ 11 ಬಾಲ್ಗಳಲ್ಲಿ 29 ರನ್ ಸಿಡಿಸಿ ಪಾಕಿಸ್ತಾನದ ಮರ್ಯಾದೆ ಉಳಿಸಿದ್ರು. ಕೊನೆಯ 3 ಎಸೆತಗಳು ಬಾಕಿ ಇದ್ದಾಗ ಪಾಕಿಸ್ತಾನ ಪಂದ್ಯ ಗೆದ್ದುಕೊಳ್ತು. ಹೀಗೆ ವೀಕ್ ಟೀಂ ಎನಿಸಿಕೊಂಡಿದ್ದ ಅಮೆರಿಕ, ನೇಪಾಳ, ನೆದರ್ ಲ್ಯಾಂಡ್ ತಂಡಗಳೂ ಈ ಸಲ ಟಫ್ ಫೈಟ್ ಕೊಟ್ಟಿವೆ. ಬಲಿಷ್ಠ ತಂಡಗಳು ಗೆದ್ರೂ ಕೂಡ ಅದು ಜಸ್ಟ್ ಪಾಸ್ ಅಷ್ಟೇ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಯಾರನ್ನೂ ಡಮ್ಮಿ ಅನ್ಕೊಳ್ದೇ ಓವರ್ ಕಾನ್ಫಿಡೆನ್ಸ್ ಬಿಟ್ಟು ಆಡಿದ್ರಷ್ಟೇ ಗೆಲ್ಲೋಕೆ ಸಾಧ್ಯ. ಇಲ್ದಿದ್ರೆ ಮೈದಾನದಲ್ಲೇ ಗುನ್ನಾ ಬೀಳೋದು ಪಕ್ಕಾ.

ನೋಡಿರಿ

