ಭಾರತದಲ್ಲಿ ಆಡಿ.. ಇಲ್ದಿದ್ರೆ ಬಿಡಿ – ಬಾಂಗ್ಲಾಗೆ ICC ಖಡಕ್ ವಾರ್ನಿಂಗ್
T-20 WCಗೆ ಗುಡ್ ಬೈ ಹೇಳ್ತಾರಾ?

ಭಾರತದಲ್ಲಿ ಆಡಿ.. ಇಲ್ದಿದ್ರೆ ಬಿಡಿ – ಬಾಂಗ್ಲಾಗೆ ICC ಖಡಕ್ ವಾರ್ನಿಂಗ್T-20 WCಗೆ ಗುಡ್ ಬೈ ಹೇಳ್ತಾರಾ?

ಭಾರತ ಮತ್ತು ಬಾಂಗ್ಲಾ ನಡುವಿನ ಕ್ರಿಕೆಟ್ ವಾರ್ ಈಗ ಮತ್ತೊಂದು ಹಂತ ತಲುಪಿದೆ. ಟಿ-20 ವಿಶ್ವಕಪ್​ಗಾಗಿ ನಾವು ಭಾರತಕ್ಕೆ ಕಾಲಿಡಲ್ಲ. ನಮ್ಮ ಮ್ಯಾಚ್​ಗಳನ್ನೂ ಲಂಕಾಗೆ ಶಿಫ್ಟ್ ಮಾಡಿ ಅಂತಾ ಪಟ್ಟು ಹಿಡಿದಿದ್ದ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಐಸಿಸಿ ಸರಿಯಾಗೇ ಬಿಸಿ ಮುಟ್ಟಿಸಿದೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಅಟ್ಟಹಾಸ ಮುಂದುವರಿದಿದೆ. ಈಗಲೂ ಕೂಡ ಹಿಂದೂಗಳನ್ನೇ ಗುರಿಯಾಗಿಸಿ ಹತ್ಯೆಗಳು ನಡೀತಿವೆ. ಇದನ್ನ ಖಂಡಿಸಿ ಭಾರತದಲ್ಲಿ ಆಕ್ರೋಶ ಭುಗಿಲೆದ್ದಿದೆ. ಐಪಿಎಲ್​ನಲ್ಲಿ ಬಾಂಗ್ಲಾ ಆಟಗಾರರನ್ನ ಆಡಿಸ್ಬೇಡಿ ಬ್ಯಾನ್ ಮಾಡಿ ಎಂಬ ಒತ್ತಡ ಹೆಚ್ಚಾಗ್ತಿದ್ದಂತೆ ಕೆಕೆಆರ್ ತಂಡದಿಂದ ಮುಸ್ತಫಿಜುರ್ ರೆಹಮಾನ್​ರನ್ನ ಕೈಬಿಟ್ಟಿತ್ತು. ಯಾವಾಗ ಐಪಿಎಲ್​ನಿಂದ ರೆಹಮಾನ್​​ಗೆ ಗೇಟ್​ಪಾಸ್ ಸಿಕ್ತೋ ಅಲ್ಲಿಗೆ ಬಾಂಗ್ಲಾಗೆ ಶೇಪ್​ಔಟ್ ಆಗಿತ್ತು. ಹೀಗಾಗಿ ನಾವು ಭಾರತಕ್ಕೆ ಬಂದು ಟಿ-20 ವಿಶ್ವಕಪ್ ಆಡಲ್ಲ.. ಲಂಕಾಗೆ ಶಿಫ್ಟ್ ಮಾಡಿ ಅಂತಾ ಐಸಿಸಿಗೆ ಲೆಟರ್ ಬರೆದಿತ್ತು. ಆದ್ರೆ ಇದಕ್ಕೆ ಸೊಪ್ಪು ಹಾಕದ ಐಸಿಸಿ ಖಡಕ್ ವಾರ್ನಿಂಗ್ ಕೊಟ್ಟಿದೆ.

ಇದನ್ನೂ ಓದಿ : ಗೀಳಿಡದ ಗಿಲ್ Vs ಪ್ರಚಂಡ ಪಡಿಕ್ಕಲ್ – ವಿಜಯ್ ಹಜಾರೆಯಲ್ಲೂ PRINCE ಫೇಲ್

ಭಾರತದಲ್ಲೇ ಪಂದ್ಯಗಳನ್ನ ಆಡಿ.. ಇಲ್ಲದಿದ್ರೆ ಹೊರಡಿ!

2026 ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಅಂತಾ ಬಾಂಗ್ಲಾದೇಶ ಮನವಿ ಮಾಡಿತ್ತು. ಆದ್ರೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇದನ್ನ ತಿರಸ್ಕಾರ ಮಾಡಿದೆ ಎನ್ನಲಾಗಿದೆ. ಮಂಗಳವಾರ ನಡೆದ ವರ್ಚುವಲ್ ಸಭೆಯಲ್ಲಿ, ಭದ್ರತಾ ಕಾಳಜಿಯಿಂದಾಗಿ ಭಾರತದ ಹೊರಗೆ 2026 ರ ಟಿ 20 ವಿಶ್ವಕಪ್ ಪಂದ್ಯಗಳನ್ನು ಆಡುವ ವಿನಂತಿಯನ್ನು ತಿರಸ್ಕರಿಸುತ್ತಿರುವುದಾಗಿ ಐಸಿಸಿ ಬಿಸಿಬಿಗೆ ತಿಳಿಸಿದೆ.  ಭಾರತದಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಆಡಿ ಇಲ್ಲದಿದ್ದರೇ ಟೂರ್ನಿಯಿಂದಲೇ ಹೊರಹೋಗಿ ಎನ್ನುವ ಖಡಕ್ ಎಚ್ಚರಿಕೆಯನ್ನು ಬಾಂಗ್ಲಾದೇಶಕ್ಕೆ ಐಸಿಸಿ ರವಾನಿಸಿದೆ. ಹೀಗಾಗಿ ಟೂರ್ನಿ ಆಡಲು ಬಾಂಗ್ಲಾದೇಶ ಭಾರತಕ್ಕೆ ಪ್ರಯಾಣಿಸಬೇಕಾಗುತ್ತದೆ ಅಥವಾ ಅಂಕಗಳನ್ನು ಕಳೆದುಕೊಳ್ಳೋ ಭೀತಿಯಲ್ಲಿದೆ.

ಕೊಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಲಿವೆ ಬಾಂಗ್ಲಾ ಪಂದ್ಯಗಳು!

ಪ್ರಸ್ತುತ ಶೆಡ್ಯೂಲ್ ಪ್ರಕಾರ ಬಾಂಗ್ಲಾದೇಶ ತಂಡ ಸಿ ಗುಂಪಿನಲ್ಲಿದ್ದು ನಾಲ್ಕು ಪಂದ್ಯಗಳನ್ನು ಭಾರತದಲ್ಲಿ ಆಡಬೇಕಿದೆ. ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 7, ಇಟಲಿ ವಿರುದ್ಧ ಫೆಬ್ರವರಿ 9 ಮತ್ತು ಇಟಲಿ ವಿರುದ್ಧ ಫೆಬ್ರವರಿ 14 ಈ ಮೂರು ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ.  ಫೆಬ್ರವರಿ 17 ರಂದು ನೇಪಾಳ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಗುಂಪು ಪಂದ್ಯಕ್ಕಾಗಿ ಮುಂಬೈನಲ್ಲಿ ಮೈದಾನ ಫಿಕ್ಸ್ ಆಗಿದೆ. ಆದ್ರೀಗ ಬಾಂಗ್ಲಾ ಭಾರತಕ್ಕೆ ವಿಶ್ವಕಪ್ ಆಡಲು ಬರಲ್ಲ ಅಂತಿದ್ದಾರೆ.

ಬಾಂಗ್ಲಾ ಮುಂದಿರುವ ಆಯ್ಕೆಗಳು!

ಟೂರ್ನಿಗೆ ಒಂದು ತಿಂಗಳು ಬಾಕಿ ಇರುವಾಗ ಗೊಂದಲ

ಭಾರತದಲ್ಲಿ ಯಾಕೆ ಆಡಲ್ಲವೆಂದು ಐಸಿಸಿ ಮನವೊಲಿಸಬೇಕು

ಐಸಿಸಿ ಒಪ್ಪದೇ ಇದ್ದರೆ ಭಾರತದಲ್ಲಿ ಪಂದ್ಯಗಳನ್ನು ಆಡುವುದು

ಭಾರತಕ್ಕೆ ಕಾಲಿಡಲ್ಲವೆಂದು ಟೂರ್ನಿಯಿಂದಲೇ ಹೊರಗುಳಿಯುವುದು

ವಿಶ್ವಕಪ್ ನಿಂದ ಹೊರಬಿದ್ರೆ ಆದಾಯದ ಪಾಲು ಕಳೆದುಕೊಳ್ಳಬೇಕು

ಬಿಸಿಸಿಐ ಜೊತೆ ಬಿರುಕು ಮೂಡಿದ್ರೆ ಸರಣಿಗಳನ್ನೂ ಕಳೆದುಕೊಳ್ಳೋ ಆತಂಕ

Shantha Kumari