ಐಸಿಸಿ ಏಕದಿನ Ranking ಪಟ್ಟಿ ರಿಲೀಸ್ -ನಂಬರ್ 1 ರೇಸ್‌ನಿಂದ ಗಿಲ್ ಜಸ್ಟ್ ಮಿಸ್

ಐಸಿಸಿ ಏಕದಿನ Ranking ಪಟ್ಟಿ ರಿಲೀಸ್ -ನಂಬರ್ 1 ರೇಸ್‌ನಿಂದ ಗಿಲ್ ಜಸ್ಟ್ ಮಿಸ್

ವರ್ಲ್ಡ್​​ಕಪ್ ಟೂರ್ನಿ ಮಧ್ಯೆ ಐಸಿಸಿಯ ಲೇಟೆಸ್ಟ್ ಱಂಕಿಂಗ್ ಪಟ್ಟಿ ರಿಲೀಸ್ ಆಗಿದೆ. ಟೀಂ ಇಂಡಿಯಾದ ಸ್ಟಾರ್ ಆಟಗಾರ ಶುಭ್‌ಮನ್ ಗಿಲ್ ಈಗ ವರ್ಲ್ಡ್​ ನಂಬರ್​-1 ಆಗುವತ್ತ ದಾಪುಗಾಲಿಡುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದ ಇತ್ತೀಚಿನ ಬ್ಯಾಟರ್​ಗಳ ಶ್ರೇಯಾಂಕದಲ್ಲಿ ಗಿಲ್ 823 ರೇಟಿಂಗ್ ಅಂಕಗಳನ್ನು ಸಂಪಾದಿಸಿದ್ದು, ಸದ್ಯ ವಿಶ್ವದ ನಂ.1 ಬ್ಯಾಟ್ಸ್​ಮನ್ ಆಗಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ ಅವರಿಗಿಂತ ಕೇವಲ ಆರು ಅಂಕಗಳನ್ನು ಕಡಿಮೆ ಹೊಂದಿದ್ದಾರೆ.

ಇದನ್ನೂ ಓದಿ: ಸತತ ಗೆಲುವು ಕಂಡಿರುವ ಟೀಂ ಇಂಡಿಯಾ ಸೀಕ್ರೆಟ್ ಏನು? – ಭಾರತ ತಂಡದ ಪ್ಲಸ್ ಮತ್ತು ಮೈನಸ್ ಯಾವುದು ಗೊತ್ತಾ?

ವರ್ಲ್ಡ್​​ಕಪ್ ಟೂರ್ನಿಯಲ್ಲಿ ಮಿಂಚುತ್ತಿರುವ ಟೀಮ್ ಇಂಡಿಯಾ, ಈಗ ಐಸಿಸಿ ಱಂಕಿಂಗ್​ ಲಿಸ್ಟ್​ನಲ್ಲೂ ಪ್ರಾಬಲ್ಯ ಮೆರೆಯುತ್ತಿರುವಂತೆ ಕಾಣ್ತಿದೆ. ಸದ್ಯ ಐಸಿಸಿ ಪ್ರಕಾರ ವರ್ಲ್ಡ್​ ಕ್ರಿಕೆಟ್​ನಲ್ಲಿ ನಂಬರ್-1 ಬ್ಯಾಟ್ಸ್​ಮನ್ ಅಂದ್ರೆ ಅದು ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ. ಸದ್ಯ ಬಾಬರ್​ ಆಜಂ ಐಸಿಸಿ ಬ್ಯಾಟಿಂಗ್​ ರೇಟಿಂಗ್​ನಲ್ಲಿ 829 ಪಾಯಿಂಟ್ಸ್​​ ಹೊಂದಿದ್ದಾರೆ. 2ನೇ ಸ್ಥಾನದಲ್ಲಿರುವ ಶುಬ್ಮನ್ ಗಿಲ್ 823 ಪಾಯಿಂಟ್ಸ್​ ಗಳಿಸಿದ್ದಾರೆ. ಬಾಬರ್ ಮತ್ತು ಶುಬ್ಮನ್ ಗಿಲ್ ಮಧ್ಯೆ ಇರೋದು ಕೇವಲ 6 ಪಾಯಿಂಟ್ಸ್​ಗಳ ಡಿಫರೆನ್ಸ್. ಒಂದು ವೇಳೆ ಶುಬ್ಮನ್ ಗಿಲ್​ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮ್ಯಾಚ್​​ಗಳನ್ನ ಆಡಿರ್ತಿದ್ರೆ ಇಷ್ಟೊತ್ತಿಗಾಗಲೇ ಬಾಬರ್​ ಆಜಂರನ್ನ ಹಿಂದಿಕ್ಕಿ ನಂಬರ್-1 ಬ್ಯಾಟ್ಸ್​ಮನ್​ ಆಗಿರ್ತಿದ್ರು, ಆದ್ರೆ ಡೆಂಗ್ಯೂನಿಂದಾಗಿ ವರ್ಲ್ಡ್​​ಕಪ್​ ಟೂರ್ನಿಯ ಮೊದಲ ಎರಡು ಮ್ಯಾಚ್​ಗಳನ್ನ ಆಡದೇ ಇದ್ದಿದ್ರಿಂದ ಗಿಲ್​ ಹೊಸ ಅಚೀವ್​ಮೆಂಟ್ ಜಸ್ಟ್ ಮಿಸ್ ಆಗಿದೆ.

ಪಾಕ್ ಕ್ಯಾಪ್ಟನ್ ನಂಬರ್ 1 ಬ್ಯಾಟ್ಸ್​ಮನ್​ ಆಗಿರೋ ಬಗ್ಗೆ ಈ ಹಿಂದಿನಿಂದಲೇ ಸಾಕಷ್ಟು ಚರ್ಚೆಯಾಗ್ತಾನೆ ಇದೆ. ಈ ವರ್ಲ್ಡ್​​ಕಪ್​​ನಲ್ಲಂತೂ ಬಾಬರ್​ ಆಜಂ ಹೇಳಿಕೊಳ್ಳುವಂತಾ ಬ್ಯಾಟಿಂಗ್ ಏನು ಮಾಡಿಲ್ಲ. ಟೂರ್ನಿಯಲ್ಲಿ ಟಾಪ್ ಸ್ಕೋರರ್​​ ಪೊಸೀಶನ್​​ನಲ್ಲಿ ಕೂಡ ಬಾಬರ್​ ಆಜಂ ಇಲ್ಲ. ಹೀಗಾಗಿ ಶೀಘ್ರವೇ ಪಾಕ್​​ ಕ್ಯಾಪ್ಟನ್​ ಐಸಿಸಿ ನಂಬರ್​-1 ಬ್ಯಾಟ್ಸ್​ಮನ್ ಪಟ್ಟವನ್ನ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇದೆ. ಇಷ್ಟೊತ್ತಿಗಾಗಲೇ ಬಾಬರ್​ ಆಜಂ ನಂಬರ್​-1 ಸ್ಥಾನದಿಂದ ಕೆಳಕ್ಕೆ ಬೀಳಬೇಕಿತ್ತು. ಆದ್ರೆ, ಟೀಂ ಇಂಡಿಯಾ ಓಪನರ್​​ ಶುಬ್ಮನ್ ಗಿಲ್​ ವಿಶ್ವಕಪ್​ನ ಮೊದಲ ಎರಡು ಪಂದ್ಯಗಳನ್ನ ಆಡದೇ ಇದ್ದಿದ್ರಿಂದ ಬಾಬಾರ್ ಆಜಂ ನಂಬರ್-1 ಪೊಸೀಷನ್​​ ಸದ್ಯಕ್ಕೆ ಸೇಫ್ ಆಗಿದೆ. ಹಾಗಂತಾ ಹೆಚ್ಚು ದಿನವೇನು ಬಾಬರ್ ಆಜಂ ನಂಬರ್-1 ಪೊಸೀಶನ್​ನಲ್ಲಿ ಇರೋದಿಲ್ಲ.

ಆದ್ರೆ ಐಸಿಸಿ ಬ್ಯಾಟಿಂಗ್​ ಱಂಕಿಂಗ್​ನಲ್ಲಿ ನಂಬರ್-1 ಪೊಸೀಶನ್​ಗೆ ಈಗ ಇಬ್ಬರ ನಡುವೆ ಕಾಂಪಿಟೀಶನ್ ಇದೆ.  ಶುಬ್ಮನ್ ಗಿಲ್ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮಧ್ಯೆ ನಂಬರ್​​-1 ಬ್ಯಾಟ್ಸ್​​ಮನ್​ ಪ್ಲೇಸ್​​ಗೆ ಪೈಪೋಟಿ ಏರ್ಪಟ್ಟಿದೆ. ಕ್ವಿಂಟನ್ ಡಿ ಕಾಕ್ ಐಸಿಸಿ ಬ್ಯಾಟಿಂಗ್ ಱಂಕಿಂಗ್​ನಲ್ಲಿ 3ನೇ ಪ್ಲೇಸ್​ನಲ್ಲಿದ್ದಾರೆ. ಸಾಲದ್ದಕ್ಕೆ ಫುಲ್​ ಫಾರ್ಮ್​​ನಲ್ಲಿದ್ದಾರೆ. ಈಗಾಗ್ಲೇ 3 ಸೆಂಚೂರಿ ಕೂಡ ಬಾರಿಸಿದ್ದಾರೆ. ಹೀಗಾಗಿ ಶುಬ್ಮನ್ ಗಿಲ್ ಮತ್ತು ಕ್ವಿಂಟನ್ ಡಿ ಕಾಕ್ ಪೈಕಿ ಯಾರು ಬೇಕಾದ್ರೂ ನಂಬರ್​-1 ಪೊಸೀಶನ್​​ಗೆ ಬರಬಹುದು.

ಇನ್ನು ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ವರ್ಲ್ಡ್​​ಕಪ್​ನಲ್ಲಿ ಚೆನ್ನಾಗಿಯೇ ಆಡ್ತಿದ್ದಾರೆ. ಅದ್ರಲ್ಲೂ ಐಸಿಸಿ ಬ್ಯಾಟಿಂಗ್ ಱಂಕಿಂಗ್​ನಲ್ಲಿ 8ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಈಹ 5ನೇ ಪ್ಲೇಸ್​​ಗೆ ಜಂಪ್ ಆಗಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 5ನೇ ಪೊಸೀಷನ್​ನಲ್ಲಿದ್ದಾರೆ. ಇನ್ನು ಕ್ಯಾಪ್ಟನ್ ರೋಹಿತ್​ ಶರ್ಮಾ ಈ ಬಾರಿಯ ವರ್ಲ್ಡ್​ಕಪ್​ನಲ್ಲಿ ಭಾರತದ ಪರ ಸೆಕೆಂಡ್ ಹೈಯೆಸ್ಟ್ ರನ್​ ಗಳಿಸಿದ್ದು, ಐಸಿಸಿ ಱಂಕಿಂಗ್​ನಲ್ಲಿ 8ನೇ ಸ್ಥಾನಕ್ಕೆ ಏರಿದ್ದಾರೆ.

ಇವಿಷ್ಟು ಬ್ಯಾಟ್ಸ್​​ಮನ್​ಗಳ ಱಂಕಿಂಗ್​ ಕಥೆಯಾಯ್ತು.. ಇನ್ನು ಬೌಲರ್ಸ್​ಗಳ ವಿಚಾರಕ್ಕೆ ಬರೋದಾದ್ರೆ, ಆಸ್ಟ್ರೇಲಿಯಾದ ಪೇಸ್​ ಬೌಲರ್ ಜೋಶ್ ಹೇಜಲ್​​ವುಡ್ ಐಸಿಸಿ ವಂಡೇ ಱಂಕಿಂಗ್​​ನಲ್ಲಿ ನಂಬರ್​-1 ಬೌಲರ್ ಆಗಿದ್ದಾರೆ. ವರ್ಲ್ಡ್​ಕಪ್​ ಆರಂಭಕ್ಕೂ ಮೊದಲು ಟೀಂ ಇಂಡಿಯಾದ ಮೊಹಮ್ಮದ್ ಸಿರಾಜ್ ಫಸ್ಟ್ ಱಂಕಿಂಗ್​ನಲ್ಲಿದ್ರು. ಆದ್ರೀಗ ಸಿರಾಜ್​ ನಂಬರ್-2 ಬೌಲರ್ ಆಗಿದ್ದಾರೆ. ಹೀಗಾಗಿ ಮುಂದಿನ ಮ್ಯಾಚ್​​ಗಳಲ್ಲಿ ಸಿರಾಜ್ ಮತ್ತಷ್ಟು ವಿಕೆಟ್​ಗಳನ್ನ ಪಡೆದ್ರೆ, ಒಂದೇ ಮ್ಯಾಚ್​ನಲ್ಲಿ 5 ವಿಕೆಟ್​​ಗಳನ್ನ ಗಳಿಸಿದ್ರೆ ಮೊಹಮ್ಮದ್ ಸಿರಾಜ್ ಮತ್ತೆ ನಂಬರ್​-1 ಪೊಸೀಶನ್​​ಗೆ ಏರುವ ಸಾಧ್ಯತೆ ಇದೆ.

ಇನ್ನು ಆಲ್​ರೌಂಡರ್ಸ್​ ಲಿಸ್ಟ್​ನಲ್ಲಿ ಬಾಂಗ್ಲಾದೇಶದ ಶಕೀಬಲ್ ಹಸನ್ ನಂಬರ್​-1 ಸ್ಥಾನದಲ್ಲೇ ಕಂಟಿನ್ಯೂ ಆಗಿದ್ದಾರೆ. ಶಕೀಬಲ್​ಗೆ ಇದು ಕೊನೆಯ ವರ್ಲ್ಡ್​ಕಪ್​ ಆಗಿದ್ದು, ಈ ಟೂರ್ನಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿಯಾದ್ರೂ ಆಶ್ಚರ್ಯ ಇಲ್ಲ. ಹೀಗಾಗಿ ವರ್ಲ್ಡ್​ ನಂಬರ್-1 ಆಲ್​ರೌಂಡರ್​ ಆಗಿ ತಮ್ಮ ಕೆರಿಯರ್​​ ಟಾಪ್​ ಪೊಸೀಶನ್​ನಲ್ಲಿರೋವಾಗಲೇ ಶಕೀಬಲ್​ ಹಸನ್​ ನಿವೃತ್ತಿ ಘೋಷಿಸುವ ಸಾಧ್ಯತೆ ಕೂಡ ಇದೆ.

ಇನ್ನು ಐಸಿಸಿ ವಂಡೇ ಟೀಂ ಱಂಕಿಂಗ್​ ಲಿಸ್ಟ್​ನಲ್ಲಿ ಭಾರತ ನಂಬರ್​-1 ಪೊಸೀಷನ್​​ನಲ್ಲೇ ಮುಂದುವರಿದಿದೆ. ವರ್ಲ್ಡ್​​​ಕಪ್ ಪಾಯಿಂಟ್ಸ್​​ ಟೇಬಲ್​ ಮತ್ತು ಐಸಿಸಿ ಱಂಕಿಂಗ್​​ನಲ್ಲಿ ಟೀಂ ಇಂಡಿಯಾ ಟಾಪ್​ ಪೊಸೀಷನ್​ನಲ್ಲಿದೆ. ಟೀಂ ಇಂಡಿಯಾ ಒಟ್ಟು 5,542 ಪಾಯಿಂಟ್ಸ್​ ಪಡೆದುಕೊಂಡಿದ್ದು, 2ನೇ ಸ್ಥಾನದಲ್ಲಿರುವ ಪಾಕಿಸ್ತಾನ 3,435 ಪಾಯಿಂಟ್ಸ್ ಪಡೆದಿದೆ. ವರ್ಲ್ಡ್​​ಕಪ್​ ಮುಗಿಯೋ ವೇಳೆಗೆ ಪಾಕಿಸ್ತಾನ ಱಂಕಿಂಗ್​​ನಲ್ಲಿ ಇನ್ನಷ್ಟು ಕೆಳಗೆ ಇಳಿಯೋದು ಗ್ಯಾರಂಟಿ. ಹೀಗಾಗಿ ಸದ್ಯಕ್ಕಂತೂ ನಂಬರ್​-1 ಪೊಸೀಷನ್​​ನಿಂದ ಟೀಂ ಇಂಡಿಯಾವನ್ನ ಅಲುಗಾಡಿಸೋಕೆ ಯಾರಿಂದಲೂ ಸಾಧ್ಯವಿಲ್ಲ.

Sulekha