ಐಸಿಸಿ ಪುರುಷರ ನೂತನ ಟಿ20 ಶ್ರೇಯಾಂಕ ಬಿಡುಗಡೆ – ಸೂರ್ಯಕುಮಾರ್ ಯಾದವ್‌ಗೆ ಅಗ್ರಸ್ಥಾನ, ಗಿಲ್‌ಗೆ 25ನೇ ಶ್ರೇಯಾಂಕ

ಐಸಿಸಿ ಪುರುಷರ ನೂತನ ಟಿ20 ಶ್ರೇಯಾಂಕ ಬಿಡುಗಡೆ – ಸೂರ್ಯಕುಮಾರ್ ಯಾದವ್‌ಗೆ ಅಗ್ರಸ್ಥಾನ, ಗಿಲ್‌ಗೆ 25ನೇ ಶ್ರೇಯಾಂಕ

ಟೀಮ್ ಇಂಡಿಯಾದ ಸ್ಯಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಐಸಿಸಿ ಪುರುಷರ ನೂತನ ಟಿ20 ಶ್ರೇಯಾಂಕ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಅಗ್ರ ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 102 ರನ್ ಗಳಿಸಿದ ಶುಭ್ಮನ್ ಗಿಲ್ 25 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಬಿಟ್ಟರೆ, ಅಗ್ರ 10ರೊಳಗೆ ಯಾವೊಬ್ಬ ಭಾರತೀಯ ಬ್ಯಾಟ್ಸ್‌ಮನ್‌ ಸ್ಥಾನ ಪಡೆದಿಲ್ಲ.

ಇದನ್ನೂ ಓದಿ: ಹೊಸವರ್ಷಕ್ಕೆ ರಿಷಭ್ ಪಂತ್ ಕಮ್‌ಬ್ಯಾಕ್ ಗ್ಯಾರಂಟಿ – ಐಪಿಎಲ್‌ಗೂ ಎಂಟ್ರಿ ಸಾಧ್ಯತೆ

ಇತ್ತೀಚೆಗೆ ಮುಕ್ತಾಯವಾಗಿದ್ದ ವೆಸ್ಟ್ ಇಂಡೀಸ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭಮನ್ ಗಿಲ್ ನಾಲ್ಕು ಪಂದ್ಯಗಳಲ್ಲಿ ಎರಡಂಕಿ ವೈಯಕ್ತಿಕ ಮೊತ್ತ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ, ಮೂರನೇ ಪಂದ್ಯದಲ್ಲಿ ಮಾತ್ರ 77 ರನ್‌ಗಳನ್ನು ಸಿಡಿಸಿದ್ದರು. ಅಷ್ಟೇ ಅಲ್ಲದೆ ಮತ್ತೊಬ್ಬ ಆರಂಭಿಕ ಯಶಸ್ವಿ ಜೈಸ್ವಾಲ್‌ ಜೊತೆ ಮುರಿಯದ ಮೊದಲನೇ ವಿಕೆಟ್‌ಗೆ ದಾಖಲೆಯ 165 ರನ್‌ಗಳನ್ನು ಕಲೆ ಹಾಕಿದ್ದರು. ವೆಸ್ಟ್ ಇಂಡೀಸ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಹೊರತಾಗಿಯೂ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ ಅವರು ಐಸಿಸಿ ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ 43 ಸ್ಥಾನಗಳಲ್ಲಿ ಏರಿಕೆ ಕಂಡು 25ನೇ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಆಟಗಾರ ಬ್ರ್ಯಾಂಡನ್ ಕಿಂಗ್ 13 ನೇ ಸ್ಥಾನಕ್ಕೇರಿದ್ದಾರೆ. ಇನ್ನು ಭಾರತದ ವಿರುದ್ಧ ಬೌಲಿಂಗ್‌ನಲ್ಲಿ ಮಿಂಚಿದ ವೆಸ್ಟ್ ಇಂಡೀಸ್ ಸ್ಪಿನ್ನರ್ ಅಕೆಲ್ ಹೊಸೈನ್, ಐದು ವಿಕೆಟ್‌ಗಳ ಸಹಾಯದಿಂದ ಟಿ20 ಬೌಲರ್ ಶ್ರೇಯಾಂಕದಲ್ಲಿ ಒಟ್ಟಾರೆಯಾಗಿ 11 ನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ. ಭಾರತದ ಪರ ಮಿಂಚಿದ್ದ ಕುಲ್ದೀಪ್ ಯಾದವ್ ಆಡಿದ ಐದು ಪಂದ್ಯಗಳಲ್ಲಿ ಆರು ವಿಕೆಟ್ ಉರುಳಿಸಿದ್ದರು. ಇದರ ಲಾಭ ಪಡೆದಿರುವ ಕುಲ್ದೀಪ್ 28 ನೇ ಸ್ಥಾನಕ್ಕೆ ತಲುಪಿದ್ದಾರೆ.

suddiyaana