PAKಗೆ ಕಾಲಿಡಲ್ಲ ಟೀಂ ಇಂಡಿಯಾ – ಚಾಂಪಿಯನ್ಸ್ ಟ್ರೋಫಿ ಆಡಲ್ವಾ IND?
RO-KO ಸೇನೆಗೆ ಭದ್ರತೆ ಭಯನಾ?
ಟಿ-20 ವಿಶ್ವಕಪ್ ಗೆದ್ದಿರೋ ಭಾರತದ ನೆಕ್ಸ್ಟ್ ಟಾರ್ಗೆಟ್ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್. ಅದ್ರಲ್ಲೂ ಚಾಂಪಿಯನ್ಸ್ ಟ್ರೋಫಿ ಬಿಗ್ ಬ್ಯಾಟಲ್ನಲ್ಲಿ ಮತ್ತೊಮ್ಮೆ ಐಸಿಸಿಯ ಕಪ್ ಗೆಲ್ಲೋದೇ ಟೀಂ ಇಂಡಿಯಾದ ಡ್ರೀಮ್. ಯಾಕಂದ್ರೆ ಈ ಟೂರ್ನಿ ನಡೆಯೋದು ಪಾಕಿಸ್ತಾನದಲ್ಲಿ. ಇದಕ್ಕಾಗಿ ಈಗಾಗ್ಲೇ ಬಿಸಿಸಿಐ ಭರ್ಜರಿ ಪ್ಲ್ಯಾನ್ ಕೂಡ ಸಿದ್ಧ ಮಾಡಿಕೊಳ್ತಿದೆ. ಬಟ್ ಈಗ ಇರೋ ಬಿಗ್ ಅಪ್ಡೇಟ್ ಅಂದ್ರೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಕಾಲಿಡಲ್ಲ ಅನ್ನೋದು. ಅರೆ ಟೂರ್ನಿ ನಡೀತಾ ಇರೋದೇ ಪಾಕಿಸ್ತಾನದಲ್ಲಿ. ಹಾಗಾದ್ರೆ ಭಾರತ ಪಾಕ್ಗೆ ಹೋಗಲ್ಲ ಅಂದ್ರೆ ಟೂರ್ನಿಯಿಂದ ಹಿಂದೆ ಸರಿಯುತ್ತಾ ಅಂತಾ ನಿಮಗೆ ಅನ್ನಿಸ್ಬೋದು. ನೋ ವೇ. ಹಿಂದೆ ಸರಿಯೋ ಮಾತೇ ಇಲ್ಲ. ಬಟ್ ಪಾಪಿಗಳ ನೆಲಕ್ಕೆ ಕಾಲಿಡಲ್ಲ ಅಷ್ಟೇ. ಅಷ್ಟಕ್ಕೂ ಇಂಡಿಯಾ ಪಾಕ್ಗೆ ಕಾಲಿಡಲ್ಲ ಅನ್ನೋಕೆ ಕಾರಣ ಏನು? ಭಾರತೀಯರನ್ನ ಕಾಡ್ತಿರೋ ಆ ಕರಾಳ ನೆನಪು ಯಾವುದು? ಬಿಸಿಸಿಐ ಪ್ಲ್ಯಾನ್ ಏನು? ಈ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: BCCI ಹಣ ಬೇಡ ಎಂದ ದ್ರಾವಿಡ್ – ಕನ್ನಡಿಗನ ನಿರ್ಧಾರಕ್ಕೆ ಜಗತ್ತೇ ಬೆರಗು
ಕೆರಿಬಿಯನ್ ನಾಡಿನಲ್ಲಿ ಟಿ-20 ವಿಶ್ವಕಪ್ ಗೆದ್ದ ಭಾರತ ಈಗ ಇಡೀ ಜಗತ್ತನ್ನೇ ಜಯಿಸಿದ ಖುಷಿಯಲ್ಲಿದೆ. ರೋ-ಕೋ ಖ್ಯಾತಿಯ ಜೋಡೆತ್ತುಗಳು ಭಾರತವನ್ನ ದಶಕದ ಬಳಿಕ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಒಟ್ಟೊಟ್ಟಿಗೆ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಗುಡ್ಬೈ ಹೇಳಿರೋ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ಕಿಂಗ್ ವಿರಾಟ್ ಕೊಹ್ಲಿ ಸದ್ಯ ಫ್ಯಾಮಿಲಿ ಜೊತೆ ಟೈಂ ಸ್ಪೆಂಡ್ ಮಾಡ್ತಿದ್ದಾರೆ. ಈ ಲೆಜೆಂಡರಿ ಜೋಡಿಯ ಮುಂದಿನ ಗುರಿಯೇ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕೋದು. ಈಗಾಗ್ಲೇ ತಮ್ಮ ಕ್ರಿಕೆಟ್ ಕರಿಯನ್ನ ಕೊನೇ ಹಂತದಲ್ಲಿರೋ ಇಬ್ಬರು ದಿಗ್ಗಜ ಆಟಗಾರರು ತಾವು ಕ್ರೀಡಾಂಗಣದಲ್ಲಿ ಇರೋ ಅಷ್ಟೂ ದಿನ ಭಾರತವನ್ನ ವಿಶ್ವಗುರು ಮಾಡೋ ದೊಡ್ಡ ಯೋಜನೆಯಲ್ಲಿದ್ದಾರೆ. ಈಗಾಗ್ಲೇ ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವ್ರೇ ಘೋಷಣೆ ಮಾಡಿದ್ದಾರೆ.
ಇಡೀ ವಿಶ್ವವೇ ಎದುರು ನೋಡುತ್ತಿರೋ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ 2025ರ ಫೆಬ್ರವರಿ 19 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಈ ದಿನಾಂಕ ನಿಗದಿಯ ಬೆನ್ನಲ್ಲೇ ಟೀಮ್ ಇಂಡಿಯಾದ ಪಂದ್ಯಗಳ ಕರಡು ವೇಳಾಪಟ್ಟಿ ಕೂಡ ಹೊರಬಿದ್ದಿದೆ. ಭಾರತ ತಂಡ ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್ ಜತೆ ಎ ಗುಂಪಿನಲ್ಲಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಫ್ಘಾನಿಸ್ತಾನ ಬಿ ಗುಂಪಿನಲ್ಲಿವೆ. ವೇಳಾಪಟ್ಟಿಯಂತೆ ಭಾರತ ತಂಡವು ಫೆಬ್ರವರಿ 20 ರಿಂದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಚಾಂಪಿಯನ್ಸ್ ಟ್ರೋಫಿ ಸಮರದಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್ಗಳಲ್ಲಿನ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿದ್ದು, ಅದರಂತೆ ಮೊದಲ ಸುತ್ತಿನಲ್ಲೇ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನ ಫೆಬ್ರವರಿ 20ರಂದು ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಎರಡನೇ ಮ್ಯಾಚ್ನಲ್ಲಿ ಫೆಬ್ರವರಿ 23ರಂದು ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಮಾರ್ಚ್ 1ರಂದು ಸೆಣಸಲಿದೆ.
ಚಾಂಪಿಯನ್ಸ್ ಟ್ರೋಫಿಯು ಪಾಕಿಸ್ತಾನದಲ್ಲಿ ನಡೆಯೋದ್ರಿಂದ ಟೂರ್ನಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮೂರು ಸ್ಟೇಡಿಯಂಗಳನ್ನು ಫೈನಲ್ ಮಾಡಿದೆ. ಅದ್ರಂತೆ ಅದರಂತೆ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯಲಿದೆ. ಇಲ್ಲಿ ಟೀಮ್ ಇಂಡಿಯಾ ಪಂದ್ಯಗಳಿಗೆ ಲಾಹೋರ್ನ ಗಡ್ಡಾಫಿ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಭಾರತ ತಂಡವು ತನ್ನೆಲ್ಲಾ ಪಂದ್ಯಗಳನ್ನು ಲಾಹೋರ್ನಲ್ಲಿ ಆಡಲಿದೆ ಎಂದು ವರದಿಯಾಗಿದೆ. ಅಷ್ಟಕ್ಕೂ ಭಾರತದ ಪಂದ್ಯಗಳಿಗೆ ಲಾಹೋರ್ನೇ ಯಾಕೆ ಆಯ್ಕೆ ಮಾಡಿದೆ ಅನ್ನೋದಕ್ಕೆ ಲಾಜಿಕ್ ಕೂಡ ಇದೆ. ಲಾಹೋರ್ ನಗರವು ಭಾರತದ ಗಡಿಗೆ ಸಮೀಪದಲ್ಲಿದೆ. ಇದರಿಂದ ಭಾರತೀಯ ಅಭಿಮಾನಿಗಳ ಪ್ರಯಾಣಕ್ಕೂ ಅನುಕೂಲವಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ಫ್ಯಾನ್ಸ್ಗೆ ಅನುಕೂಲ ಆಗ್ಲಿ ಅಂತಾ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಂದೇ ಸ್ಟೇಡಿಯಂನಲ್ಲಿ ಭಾರತ ಪಂದ್ಯಗಳನ್ನ ಆಯೋಜನೆ ಮಾಡಲು ನಿರ್ಧಾರ ಮಾಡಿದೆ.
ಚಾಂಪಿಯನ್ಸ್ ಟ್ರೋಫಿ ನಡೀತಾ ಇರೋದು ಪಾಕಿಸ್ತಾನದಲ್ಲೇ. ಬಟ್ ಈಗ ಭಾರತೀಯರನ್ನ ಕಾಡ್ತಿರೋ ಪ್ರಶ್ನೆ ಅಂದ್ರೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗ್ಬೇಕಾ? ಭಾರತೀಯ ಆಟಗಾರರು ಪಾಪಿಗಳ ನೆಲದಲ್ಲಿ ಆಡಬೇಕಾ ಅನ್ನೋದು..? ಚಾನ್ಸೇ ಇಲ್ಲ. ಭಾರತದ ವಿರುದ್ಧ ಸದಾ ಸಂಚು ಮಾಡುವಂತಹ ಪಾಕಿಗಳ ನಾಡಿಗೆ ಯಾವುದೇ ಕಾರಣಕ್ಕೂ ಭಾರತೀಯ ಆಟಗಾರರು ಕಾಲಿಡೋ ಪ್ರಶ್ನೆಯೇ ಇಲ್ಲ. ಜಗತ್ತಿನಲ್ಲಿ ಅಷ್ಟೊಂದು ದೇಶಗಳಿದ್ರೂ ಭಾರತೀಯರು ಯಾಕೆ ಪಾಕಿಸ್ತಾನವನ್ನ ಅಷ್ಟರ ಮಟ್ಟಿಗೆ ದ್ವೇಷಿಸ್ತಾರೆ ಅಂದರೆ ಅದಕ್ಕೆ ಸಾಲು ಸಾಲು ಕಾರಣಗಳಿವೆ. ಭಾರತಕ್ಕೆ ಮುಕುಟವಿದ್ದಂತೆ ಇರೋ ಕಾಶ್ಮೀರ ವಿಚಾರವಾಗಿ ಪದೇಪದೆ ಕ್ಯಾತೆ ತೆಗೀತಿದ್ದಾರೆ. ಕಂಡು ಕೇಳರಿಯದ ಹೀನಕೃತ್ಯಗಳನ್ನ ನಡೆಸಿದ್ದಾರೆ. ಈಗಲೂ ನಡೆಸ್ತಿದ್ದಾರೆ. ರಾಜಕೀಯ, ಸಾಮಾಜಿಕ ವಿಚಾರವಾಗಿಯೂ ಎರಡು ರಾಷ್ಟ್ರಗಳ ನಡುವೆ ಸಾಕಷ್ಟು ವೈಮನಸ್ಸುಗಳಿವೆ. ಆದ್ರೆ ಅದೆಲ್ಲಕ್ಕಿಂತ ಮುಖ್ಯವಾಗಿ ಟೀಂ ಇಂಡಿಯಾ ಪಾಕ್ಗೆ ಕಾಲಿಡದಿರಲು ಬಹುದೊಡ್ಡ ಕಾರಣವೇ ಇದೆ. ಇಡೀ ಭಾರತವೇ ಬೆಚ್ಚಿ ಬಿದ್ದಿದ್ದ ಮುಂಬೈ ಸರಣಿ ಸ್ಫೋಟದ ಹಿಂದೆ ಇದ್ದದ್ದೇ ಈ ಪಾಪಿಗಳ ಕೈವಾಡ. ಇದೇ ಕಾರಣಕ್ಕೆ ಬಿಸಿಸಿಐ ಅಂದಿನಿಂದಲೂ ಕೂಡ ಭಾರತದ ಯಾವುದೇ ಪಂದ್ಯವನ್ನ ಪಾಕಿಸ್ತಾನದಲ್ಲಿ ಆಡಲು ಅನುಮತಿ ನೀಡಿಲ್ಲ. ಇನ್ನೊಂದು ಮುಖ್ಯ ವಿಚಾರ ಅಂದ್ರೆ ಪಾಕಿಸ್ತಾನದಲ್ಲಿ ನಮ್ಮ ಭಾರತೀಯ ಆಟಗಾರರ ಜೀವಕ್ಕೆ ಭದ್ರತೆ ಇರುತ್ತೆ ಅಂತಾನೂ ಹೇಳೋಕೆ ಆಗಲ್ಲ. ಯಾಕಂದ್ರೆ ಅಲ್ಲಿನ ಭಯೋತ್ಪಾದಕ ಕೃತ್ಯಗಳನ್ನ ತಡೆಯೋಕೆ ಅಲ್ಲಿನ ಸರ್ಕಾರಕ್ಕೇ ಸಾಧ್ಯವಾಗಿಲ್ಲ. ಅಂಥಾದ್ರಲ್ಲಿ ಭಾರತೀಯರಿಗೆ ಹೇಗೆ ತಾನೆ ರಕ್ಷಣೆ ಕೊಡ್ತಾರೆ. ಸೋ 2025ರ ಚಾಂಪಿಯನ್ಸ್ ಟೂರ್ನಿಯಲ್ಲೂ ಕೂಡ ಇದೇ ಭದ್ರತೆ ಕಾರಣದಿಂದಲೇ ಬಿಸಿಸಿಐ ಪರ್ಮಿಷನ್ ನೀಡಿಲ್ಲ.
2008 ರ ನವೆಂಬರ್ನಲ್ಲಿ ಮುಂಬೈನಲ್ಲಿ ಸರಣಿ ಸ್ಫೋಟಗಳು ನಡೆದು 174 ಮಂದಿ ಜೀವ ಬಿಟ್ಟಿದ್ರು. ಈ ಕೃತ್ಯದ ಹಿಂದೆ ಇದ್ದಕ್ಕೇ ಪಾಕಿಸ್ತಾನದ ಸಂಘಟನೆ. ಇದೇ ಕಾರಣಕ್ಕೆ ಅಂದಿನಿಂದ ಭಾರತ ಪಾಕಿಸ್ತಾನದಲ್ಲಿ ಯಾವುದೇ ಪಂದ್ಯಗಳಲ್ಲಿ ಭಾಗಿಯಾಗಲ್ಲ ಎಂದು ನಿರ್ಧಾರ ತೆಗೆದುಕೊಂಡಿತ್ತು. ಸೋ ಅದ್ರಂತೆ 2025ರ ಟೂರ್ನಿಗೂ ಕೂಡ ಕಾಲಿಡಲ್ಲ ಎಂದಿದೆ. ಪಾಕಿಸ್ತಾನಕ್ಕೆ ತೆರಳದೆಯೇ ಭಾರತ ಟೂನಿಯಲ್ಲಿ ಪಂದ್ಯಗಳನ್ನ ಆಡಲಿದೆ. ಅದೇಗೆ ಅಂದ್ರೆ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಲು ಐಸಿಸಿಗೆ ಮನವಿ ಮಾಡಬಹುದು. ಯುಎಇ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಕೋರಬಹುದು. ಈ ಮೂಲಕ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಆಡುವ ಸಾಧ್ಯತೆಯಿದೆ.
ಹೇಗಾದರೂ ಮಾಡಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳಬೇಕೆಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ಲ್ಯಾನ್ ಫೇಲ್ ಆಗಿದೆ. ಬಿಸಿಸಿಐ ನಿರ್ಧಾರದಿಂದ ಪಿಸಿಬಿಗೆ ಭಾರಿ ಹಿನ್ನಡೆಯಾಗಲಿದೆ. ಇತ್ತೀಚೆಗಷ್ಟೇ ಪಿಸಿಬಿ ಅಧ್ಯಕ್ಷ ಮೊಸಿನ್ ನಖ್ವಿ, ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಬಂದರೆ, ಈ ಎರಡೂ ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳತ್ತ ಗಮನ ಹರಿಸಬಹುದು ಎಂದಿದ್ದರು. ಆದ್ರೆ ಇದಕ್ಕೆ ಬಿಸಿಸಿಐ ಸುತಾರಂ ಒಪ್ಪಿಗೆ ನೀಡಿಲ್ಲ. 2012-2013ರ ಸಾಲಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕೊನೆಯ ಬಾರಿ ದ್ವಿಪಕ್ಷೀಯ ಸರಣಿ ನಡೆದಿತ್ತು. ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಅಂದಿನಿಂದ, ಉಭಯ ದೇಶಗಳ ನಡುವಿನ ರಾಜಕೀಯ ಸಮಸ್ಯೆಗಳಿಂದ ಐಸಿಸಿ ಹಾಗೂ ಎಸಿಸಿ ಟೂರ್ನಿಗಳಲ್ಲಿ ಹೊರತುಪಡಿಸಿ ದ್ವಿಪಕ್ಷೀಯ ಸರಣಿಗಳಲ್ಲಿ ಈ ಎರಡೂ ರಾಷ್ಟ್ರಗಳು ಮುಖಾಮುಖಿ ಆಡುತ್ತಿಲ್ಲ. ಕಳೆದ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿಯು ಕೂಡ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಭಾರತ ಸರ್ಕಾರ, ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದಾಗ ಪಾಕಿಸ್ತಾನ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಪಾಕಿಸ್ತಾನ ಪ್ರವಾಸ ಮಾಡಲು ತಮ್ಮ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು.
ಭಾರತ ಮತ್ತು ಪಾಕಿಸ್ತಾನ ನಡುವೆ ಮ್ಯಾಚ್ ಇದೆ ಅಂದ್ರೆ ಅದ್ರ ಲೆವೆಲ್ಲೇ ಬೇರೆ. ಐಸಿಸಿ ವಿಶ್ವಕಪ್ಗಳ ಯಾವುದೇ ಫೈನಲ್ ಪಂದ್ಯಗಳಲ್ಲೂ ಸಹ ಆ ಮಟ್ಟಿಗೆ ಬಿಸಿ ಇರೋದಿಲ್ಲ. ಬದ್ಧವೈರಿಗಳ ಕದನ ನೋಡೋಕಂತ್ಲೇ ಇಡೀ ಕ್ರಿಕೆಟ್ ಜಗತ್ತೇ ಕಾದಿರುತ್ತೆ. ಉಭಯ ದೇಶಗಳ ಪಾಲಿಗೂ ಇದು ಪ್ರತಿಷ್ಠೆಯ ಹೋರಾಟ. ಫೈನಲ್ವರೆಗೂ ಹೋಗ್ತೀವೋ ಇಲ್ವೋ ಅನ್ನೋದಕ್ಕಿಂತ ಒಬ್ಬರನ್ನೊಬ್ಬರು ಸೋಲಿಸಬೇಕು ಎಂಬ ಹಠದೊಂದಿಗೆ ಕಣಕ್ಕಿಳೀತಾರೆ. ಪಾಕಿಸ್ತಾನ ನಾವೇ ಗೆಲ್ಲೋದು ಅಂತಾ ಮೊದ್ಲೇ ಬಿಲ್ಡಪ್ ಕೊಚ್ಚಿಕೊಂಡು ಮೈದಾನಕ್ಕೆ ಬರ್ತಾರೆ. ಬಟ್ ಭಾರತ ಮಾತ್ರ ಗೆದ್ದು ತನ್ನ ತಾಕತ್ತನ್ನ ವಿನ್ನಿಂಗ್ ಮೂಲಕ ತೋರಿಸುತ್ತೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಟೂರ್ನಿಯಲ್ಲೂ ಇದೇ ಆಗಿತ್ತು. ಭಾರತ ಮತ್ತು ಪಾಕ್ ನಡುವಿನ ಕದನವೂ ರಣರೋಚಕವಾಗಿತ್ತು. ಪಾಕಿಗಳು ಇನ್ನೇನು ಗೆದ್ದೇ ಬಿಟ್ವಿ ಅಂತಾ ಸಂಭ್ರಮಿಸೋಕೆ ಶುರು ಮಾಡಿದ್ರು. ಆಟಗಾರರು ಇನ್ನೇನು ವಿಶ್ವಕಪ್ ಗೆದ್ದಷ್ಟೇ ಖುಷಿಯಲ್ಲಿದ್ರು. ಇನ್ನೊಂದ್ಕಡೆ ಪಾಕ್ ಅಭಿಮಾನಿಗಳು ಕೂಡ ಕುಣಿದು ಕುಪ್ಪಳಿಸೋಕೆ ಶುರು ಮಾಡಿದ್ದರು. ಬಟ್ ಇಂಥಾ ಟೈಮಲ್ಲೇ ಟೀಂ ಇಂಡಿಯಾ ಟೈಗರ್ಸ್ ಮುಟ್ಟಿ ನೋಡಿಕೊಳ್ಳುವಂಥ ಶಾಕ್ ಕೊಟ್ಟಿದ್ರು. ಕ್ಲೈಮ್ಯಾಕ್ಸ್ನಲ್ಲಿ ಗೆದ್ದು ತೋರಿಸಿದ್ರು. ಭಾರತದ ಮುಂದೆ ಸೋಲೊಪ್ಪಿಕೊಳ್ಳೋದು ಪಾಕ್ ಪ್ಲೇಯರ್ಸ್ಗೆ ಹೊಸದೇನೂ ಅಲ್ಲ ಬಿಡಿ. ಭಾರತವನ್ನ ಸೋಲಿಸ್ತೇವೆ ಅಂತಾ ಬಿಲ್ಡಪ್ ಕೊಟ್ಕೊಂಡು ಬರೋ ಆಟಗಾರರು ಕೊನೆಗೆ ತಲೆ ತಗ್ಗಿಸಿಕೊಂಡೇ ಹೋಗ್ತಾರೆ. ಪಂದ್ಯ ಮುಗಿದು ವಾರ ಕಳೆದ್ರೂ ವಾಪಸ್ ತವರಿಗೂ ಹೋಗಲ್ಲ. ಯಾಕಂದ್ರೆ ಹೋದ್ರೆ ಎಲ್ಲಿ ತಮ್ಮ ಜನ ಕಲ್ಲೊಡೆಯುತ್ತಾರೋ ಅನ್ನೋ ಭಯ ಅವ್ರಿಗೆ.
ಸದ್ಯ ಟಿ-20 ವಿಶ್ವಕಪ್ ಬಳಿಕ ಭಾರತದ ಮೇನ್ ಟಾರ್ಗೆಟ್ ಮುಂದಿನ ವರ್ಷದ ಎರಡು ಐಸಿಸಿ ಟೂರ್ನಿಗಳ ಮೇಲೆ ಇದೆ. ಭಾರತವು 2021 ಮತ್ತು 2023 ರಲ್ಲಿ ನಡೆದ ICC WTC ಫೈನಲ್‌ನಲ್ಲಿ ರನ್ನರ್ ಅಪ್ ಆಗಿತ್ತು. ಸೋ ಮುಂದಿನ ವರ್ಷ ಚಾಂಪಿಯನ್ ಆಗ್ಬೇಬೇಕು ಅಂತಾ ಪಣ ತೊಟ್ಟಿದೆ. ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಫೈಟ್ ನಡೆಯಲಿದೆ. ಜೂನ್ ತಿಂಗಳಲ್ಲಿ ಲಾರ್ಡ್ಸ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ಟ್ ಟೂರ್ನಿ ನಡೆಯಲಿದೆ. ಈ ಎರಡೂ ಟೂರ್ನಿಗಳು ಬಿಸಿಸಿಐ ಹಾಗೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪಾಲಿಗೂ ತುಂಬಾನೇ ಮಹತ್ವದ ಪಂದ್ಯಗಳಾಗಿವೆ.