ಟೀಂ ಸೆಲೆಕ್ಷನ್ನೇ ಭಾರತಕ್ಕೆ ಮೈನಸ್ – ಸಿರಾಜ್ ಡ್ರಾಪ್.. ಪ್ಲೇಯಿಂಗ್ 11 ಹೇಗೆ?

ಟೀಂ ಸೆಲೆಕ್ಷನ್ನೇ ಭಾರತಕ್ಕೆ ಮೈನಸ್ – ಸಿರಾಜ್ ಡ್ರಾಪ್.. ಪ್ಲೇಯಿಂಗ್ 11 ಹೇಗೆ?

2025ರ ಚಾಂಪಿಯನ್ಸ್ ಟ್ರೋಫಿ ಫೈಟ್​ಗೆ ಇನ್ನೊಂದು ತಿಂಗಳೂ ಕೂಡ ಇಲ್ಲ. ಫೆಬ್ರಬರಿ 19ರಿಂದ ಶುರುವಾಗಲಿರುವ ಜಿದ್ದಾಜಿದ್ದಿಗೆ ಈಗಾಗ್ಲೇ ಟೀಮ್​ಗಳನ್ನೆಲ್ಲಾ ಅನೌನ್ಸ್ ಮಾಡಲಾಗಿದೆ. ಭಾರತ ಕೂಡ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಹಾಗೇ ಶುಭ್​ಮನ್ ಗಿಲ್ ವೈಸ್ ಕ್ಯಾಪ್ಟನ್ಸಿಯಲ್ಲಿ ರೆಡಿಯಾಗಿದೆ. ಭಾರತ ಕಳೆದ ವರ್ಷ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಈ ವರ್ಷವೂ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಹಾಟ್ ಫೇವರೆಟ್ ಟೀಂ ಎನಿಸಿಕೊಂಡಿದೆ.

ಇದನ್ನೂ ಓದಿ : 44,152 ನಿಮಿಷ ಬ್ಯಾಟಿಂಗ್.. 210 ಕ್ಯಾಚ್‌ – ಮುರಿಯಲಾಗದ ರಾಹುಲ್ ದ್ರಾವಿಡ್ ದಾಖಲೆಗಳು

ತವರಿನಲ್ಲೇ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತಿತ್ತು. ಅದಾದ ಬಳಿಕ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಗೆ ಹೋಗಿದ್ದ ಭಾರತ ತಂಡ ಅಲ್ಲೂ ಕೂಡ ಸೋತು ವಾಪಸ್ ಆಗಿತ್ತು. ಸದ್ಯ ಚಾಂಪಿಯನ್ಸ್ ಟ್ರೋಫಿಗೂ ಕೂಡ ಆಸಿಸ್ ಟೆಸ್ಟ್​ ಸರಣಿಗೆ ಸೆಲೆಕ್ಟ್ ಆಗಿದ್ದವ್ರೇ ಇದ್ದಾರೆ. ಸೋ ಇದೇ ಈಗ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫಾರ್ಮ್​ನಲ್ಲಿ ಇಲ್ಲ. ಈಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ ಕಂಟಿನ್ಯೂ ಆದ್ರೆ ಏನ್ ಮಾಡ್ತೀರಾ.. ಪದೇಪದೆ ಅವ್ರಿಗೆ ಚಾನ್ಸ್ ಕೊಡ್ತಿರೋದೇಕೆ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

ಜಸ್ಪ್ರೀತ್ ಬುಮ್ರಾ ಬಗ್ಗೆ ಆಗ್ಲಿ ಅಥವಾ ಅವ್ರ ಆಟದ ಬಗ್ಗೆಯಾಗ್ಲಿ ಯಾರಿಗೂ ಕಿಂಚಿತ್ತೂ ಡೌಟ್ ಇಲ್ಲ. ಯಾಕಂದ್ರೆ ಇಡೀ ಟೀಂ ಕೈಕೊಟ್ಟಾಗ್ಲೂ ಏಕಾಂಗಿಯಾಗಿ ನಿಂತು ಟೀಂ ಗೆಲ್ಲಿಸಿಕೊಟ್ಟಿದ್ದಾರೆ. ಬಟ್ ಆಸಿಸ್ ಸರಣಿಯಲ್ಲಿ ಬುಮ್ರಾ ಇಂಜುರಿಗೆ ತುತ್ತಾಗಿದ್ದಾರೆ. ಐದು ಪಂದ್ಯಗಳಿಂದ 150ಕ್ಕೂ ಹೆಚ್ಚು ಓವರ್​ಗಳನ್ನ ಬೌಲಿಂಗ್ ಮಾಡಿದ್ದು ಬೆನ್ನುನೋವಿಗೆ ತುತ್ತಾಗಿದ್ದಾರೆ. ಸಿಡ್ನಿಯಲ್ಲಿ ನಡೆದ ಕೊನೇ ಪಂದ್ಯದಲ್ಲೂ ಅರ್ಧಕ್ಕೆ ಹೊರ ನಡೆದಿದ್ರು. ಸೋ ಇನ್ನೂ ಕೂಡ ರಿಕವರ್ ಆಗಿಲ್ಲ. ಬೆನ್ನುನೋವಿನ ತೀವ್ರತೆ ಹೆಚ್ಚಾಗಿರೋದ್ರಿಂದ ರೆಸ್ಟ್ ಮಾಡುವಂತೆ ವೈದ್ಯರೂ ಸಲಹೆ ನೀಡಿದ್ದಾರೆ. ಹೀಗಾಗಿ ಬುಮ್ರಾ ಚಾಂಪಿಯನ್ಸ್ ಟ್ರೋಫಿ ವೇಳೆಗೆ ರಿಕವರ್ ಆಗ್ಲಿಲ್ಲ ಅಂದ್ರೆ ವಾಟ್ ನೆಕ್​ಟ್​ ಎನ್ನುವಂಥ ಪ್ರಶ್ನೆಯೂ ಉದ್ಭವವಾಗಿದೆ.

ಡಿಎಸ್​ಪಿ ಮೊಹಮ್ಮದ್ ಸಿರಾಜ್ ಸದ್ಯ ಟೀಂ ಇಂಡಿಯಾದಲ್ಲಿ ಎಲ್ಲಾ ಫಾರ್ಮೆಟ್​ನಲ್ಲೂ ಬಿಸಿಸಿಐನ ಚಾಯ್ಸ್ ಆಗಿದ್ರು. ಸೋ ಚಾಂಪಿಯನ್ಸ್ ಟ್ರೋಫಿಗೂ ಸೆಲೆಕ್ಟ್ ಆಗ್ತಾರೆ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಬಟ್ ಆಯ್ಕೆ ಸಮಿತಿ ಸಿರಾಜ್​ರನ್ನ ಡ್ರಾಪ್ ಮಾಡಿದೆ. ಸಿರಾಜ್ ಸ್ಥಾನಕ್ಕೆ ಅರ್ಷದೀಪ್​ ಸಿಂಗ್ ಅವ್ರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬಟ್ ಕೆಲ ಅಭಿಮಾನಿಗಳು ಅರ್ಷದೀಪ್​ಗಿಂತ ಸಿರಾಜ್ ಬೆಸ್ಟ್ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅರ್ಷದೀಪ್​ಗೆ ಹೋಲಿಸಿದ್ರೆ ಸಿರಾಜ್​ಗೆ ಹೆಚ್ಚಿನ ಅನುಭವವಿದೆ ಮತ್ತು ವಿಕೆಟ್​ ಪಡೆಯುವ ಸಾಮರ್ಥ್ಯ ಇದೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಇದಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ಲಾರಿಟಿ ಕೊಟ್ಟಿದ್ದಾರೆ. ಪಂದ್ಯದಲ್ಲಿ ಹೊಸ ಮತ್ತು ಹಳೆಯ ಚೆಂಡಿನೊಂದಿಗೆ ಇಂಪ್ಯಾಕ್ಟ್ ಮಾಡುವಂತ ಪ್ಲೇಯರ್​ಗಳನ್ನ ಸೆಲೆಕ್ಟ್ ಮಾಡಿದ್ದೇವೆ. ಸಿರಾಜ್ ಉತ್ತಮ ಬೌಲರ್​ ಹೌದು. ಬಟ್ ಸಿರಾಜ್ ಹೊಸ ಚೆಂಡು ಇದ್ದಾಗ ಮಾತ್ರ ಅದ್ಭುತವಾಗಿ ಬೌಲಿಂಗ್ ಮಾಡ್ತಾರೆ. ಬಾಲ್ ಶೈನ್​ ಕಳೆದುಕೊಂಡು ಹಳೆಯದಾದರೇ ಸಿರಾಜ್ ಪರ್ಫಾಮೆನ್ಸ್ ಅಷ್ಟಕ್ಕಷ್ಟೇ. ಬಟ್ ಅರ್ಷದೀಪ್ ಓಪನಿಂಗ್ ಓವರ್‌ಗಳಲ್ಲಿ ಸ್ವಿಂಗ್ ಮತ್ತು ಡೆತ್ ಓವರ್‌ಗಳಲ್ಲಿ ಅಪಾಯಕಾರಿ ಬೌಲಿಂಗ್‌ ಮಾಡ್ತಾರೆ. ವಿಕೆಟ್ ಕೀಳ್ತಾರೆ. ಇದೇ ಕಾರಣಕ್ಕೆ ಅವ್ರನ್ನ ಡ್ರಾಪ್ ಮಾಡಿದ್ದೇವೆ ಎಂದಿದ್ದಾರೆ.

ಌಕ್ಚುಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮೊಹಮ್ಮದ್ ಸಿರಾಜ್ ಬೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. 2022ರ ಜನವರಿ 1ರಿಂದ ಈವರೆಗೆ ನಂಬರ್ 1 ಪ್ಲೇಸ್​ನಲ್ಲಿದ್ದಾರೆ. ಕಳೆದ 2 ವರ್ಷಗಳಿಂದ ಜಸ್ಪ್ರೀತ್ ಬುಮ್ರಾ 22 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 18.85ರ ಸರಾಸರಿಯಲ್ಲಿ 41 ವಿಕೆಟ್ ಕಿತ್ತಿದ್ದಾರೆ.  ಇನ್ನು ಶಾರ್ದೂಲ್ ಟಾಕೂರ್ 32 ಪಂದ್ಯಗಳಿಂದ 43 ವಿಕೆಟ್ ಬೇಟೆಯಾಡಿದ್ದಾರೆ. ಇನ್ನು ಮೊಹಮ್ಮದ್ ಶಮಿ ಕಳೆದ 2 ವರ್ಷಗಳಲ್ಲಿ 47 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಈ ಲಿಸ್ಟ್​ನಲ್ಲಿರೋ ಏಕೈಕ ಸ್ಪಿನ್ನರ್ ಕುಲದೀಪ್ ಯಾದವ್ 65 ವಿಕೆಟ್ ಪಡೆದು ಸೆಕೆಂಡ್ ಪ್ಲೇಸ್​ನಲ್ಲಿದ್ದಾರೆ. ಬಟ್ ಮೊಹಮ್ಮದ್ ಸಿರಾಜ್ 71 ವಿಕೆಟ್​ಗಳನ್ನ ಪಡೆದಯ ಫಸ್ಟ್ ಪ್ಲೇಸ್​ನಲ್ಲಿದ್ದಾರೆ. ಹೀಗಿದ್ರೂ ಕೂಡ ಸಿರಾಜ್​ಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾನ್ಸ್ ನೀಡಿಲ್ಲ. ಬಹುಶಃ ಆಸಿಸ್ ಸರಣಿಯಲ್ಲಿ ಸ್ವಲ್ಪ ದುಬಾರಿಯಾದ್ರು ಅನ್ನೋ ಕಾರಣಕ್ಕೆ ಕೈ ಬಿಟ್ಟಿರೋ ಚಾನ್ಸಸ್ ಕೂಡ ಇದೆ. ಸೋ ಇವಿಷ್ಟು ಟೀಂ ಇಂಡಿಯಾಗೆ ಮೈನಸ್ ಥರ ಕಾಣ್ತಿದೆ. ಬಟ್ ಪ್ಲಸ್ ಪಾಯಿಂಟ್ಸ್ ಕೂಡ ಇದೆ.

Shantha Kumari

Leave a Reply

Your email address will not be published. Required fields are marked *