ಬವುಮಾಗೆ ಕುಬ್ಜ ಎಂದು ಅವಮಾನ – ಬ್ಯಾನ್ ಆಗ್ತಾರಾ ಬುಮ್ರಾ?
DRS.. ಪಂತ್ & ಜಸ್ಪ್ರೀತ್.. ಏನಾಯ್ತು?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಪ್ರದರ್ಶನ ಅದ್ಭುತವಾಗಿತ್ತು. ಅದ್ರಲ್ಲಿ ಎರಡು ಮಾತಿಲ್ಲ. ಅದ್ರಲ್ಲೂ ಜಸ್ಪ್ರೀತ್ ಬುಮ್ರಾ ಅವ್ರ ಬೌಲಿಂಗ್ ಅಟ್ಯಾಕ್ ಅಂತೂ ಸೂಪರ್ಬ್. ಮೊದಲ ದಿನದಾಟದ ಬಳಿಕ ಬುಮ್ರಾ ಪುಲ್ ಟ್ರೆಂಡಿಂಗ್ನಲ್ಲಿದ್ದಾರೆ. ಹಾಗಂತ ಫೈಫರ್ ವಿಕೆಟ್ಗಳಿಂದಾಗಿ ಅಲ್ಲ. ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬಗ್ಗೆ ಮಾತ್ನಾಡಿದ್ದಾರೆ ಎನ್ನಲಾದ ಆ ಆಡಿಯೋದಿಂದಾಗಿ.
ಇದನ್ನೂ ಓದಿ : ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಿದ ಕೆ.ಎಲ್ ರಾಹುಲ್
ಮೊದಲ ದಿನದಾಟದಲ್ಲಿ ಸೌತ್ ಆಫ್ರಿಕಾ ತಂಡವನ್ನ ಆಲ್ಔಟ್ ಮಾಡುವಲ್ಲಿ ಪ್ರಮುಖ ಅಸ್ತ್ರವೇ ಜಸ್ಪ್ರೀತ್ ಬುಮ್ರಾ. 14 ಓವರ್ಗಳನ್ನ ಬೌಲ್ ಮಾಡಿ ಕೇವಲ 27 ರನ್ಸ್ ನೀಡಿ 5 ವಿಕೆಟ್ಗಳನ್ನ ಬೇಟೆಯಾಡಿದ್ರು. ಹಾಗೇ 159 ರನ್ಗಳಿಗೆ ಸೌತ್ ಆಫ್ರಿಕಾ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಳ್ಳುವಂತೆ ಮಾಡಿದ್ರು. ಸೋ ಅವ್ರ ಪರ್ಫಾಮೆನ್ಸ್ ನೆಕ್ಸ್ಟ್ ಲೆವೆಲ್ನಲ್ಲಿದೆ. ಆದ್ರೆ ಮೊದಲ ಸೆಷನ್ನಲ್ಲೇ ಟೆಂಬಾ ಬವುಮಾ ಬ್ಯಾಟಿಂಗ್ ವೇಳೆ ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ನಡೆಸಿರೋ ಮಾತುಕತೆ ಚರ್ಚೆಗೆ ಗ್ರಾಸವಾಗಿದೆ.
ಬವುಮಾರನ್ನ ಕುಬ್ಜ ಎಂದು ಕರೆದಿದ್ಯಾರು?
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌತ್ ಆಫ್ರಿಕಾ ಪರ ಟೆಂಬಾ ಬವುಮಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರ್ತಾರೆ. ಇಷ್ಟ್ರಲ್ಲಾಗ್ಲೇ ಇಬ್ಬರು ಓಪನರ್ಗಳ ವಿಕೆಟ್ ತೆಗೆದಿದ್ದ ಜಸ್ಪ್ರೀತ್ ಬುಮ್ರಾ ಫುಲ್ ಅಗ್ರೆಸ್ಸಿವ್ ಇಂಟೆಂಟ್ನಲ್ಲೇ ಬೌಲಿಂಗ್ ಮಾಡಿದ್ರು. 13ನೇ ಓವರ್ನಲ್ಲಿ ಬುಮ್ರಾ ಬೌಲಿಂಗ್ನಲ್ಲಿ ಟೆಂಬಾ ಬವುಮಾ ಎಲ್ಬಿ ಡಬ್ಲ್ಯೂ ಆಗಿದೆ ಅಂತಾ ಬುಮ್ರಾ ಅಂಪೈರ್ ಬಳಿ ವಿಕೆಟ್ಗೆ ಅಪೀಲ್ ಮಾಡ್ತಾರೆ. ಆದ್ರೆ ಅಂಪೈರ್ ಇದನ್ನ ಔಟ್ ಕೊಡಲ್ಲ. ಸೋ ಡಿಆರ್‌ಎಸ್ ತಗೊಳ್ಬೇಕಾ ಬೇಡ್ವಾ ಅನ್ನೋ ಬಗ್ಗೆ ವಿಕೆಟ್ ಕೀಪರ್ ರಿಷಭ್ ಪಂತ್ ಬಳಿ ಬರ್ತಾರೆ. ಈ ವಿಚಾರವಾಗಿ ಇಬ್ಬರ ನಡುವೆ ಚರ್ಚೆ ಆಗ್ತಿರುತ್ತೆ. ಅಂದ್ರೆ ಬವುಮಾ ಔಟ್ ಆಗಿರ್ಬೋದಾ ಡಿಆರ್‌ಎಸ್ ತೆಗೆದುಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಮಾತಾಡ್ತಿರ್ತಾರೆ. ಈ ಟೈಮಲ್ಲಿ ಪಂತ್ ಅಥವಾ ಬುಮ್ರಾ ಇಬ್ಬರಲ್ಲಿ ಒಬ್ರು ಬವುಮಾ ಅವರನ್ನು “ಬೌನಾ” ಅಂದ್ರೆ ಕುಬ್ಜ ಎಂದು ಕರೆದಿದ್ದಾರೆ ಎನ್ನಲಾಗಿದೆ. ಸ್ಟಂಪ್ ಮೈಕ್ನಲ್ಲಿ ಆಡಿಯೋ ರೆಕಾರ್ಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾಗೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಸೌತ್ ಆಫ್ರಿಕಾ ತಂಡದ ನಾಯಕನನ್ನ ಭಾರತೀಯ ಆಟಗಾರರು ಹೀಯಾಳಿಸಿದ್ದಾರೆ ಅಂತಾ ಆಕ್ರೋಶ ವ್ಯಕ್ತವಾಗ್ತಿದೆ.
ಡಿಮೆರಿಟ್ ಪಾಯಿಂಟ್ ಜೊತೆ ಬ್ಯಾನ್ ಗೆ ಒತ್ತಾಯ!
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ಗಳು ಹರಿದಾಡ್ತಿದ್ದು ಬುಮ್ರಾ ವಿರುದ್ಧ ಸಿಟ್ಟಾಗಿದ್ದಾರೆ. ಆಟದಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು. ಯಾರನ್ನೂ ವರ್ಣಬೇಧ ಮಾಡುವಂತಿಲ್ಲ. ಬಾಡಿ ಶೇಮಿಂಗ್ ಮಾಡುವಂತಿಲ್ಲ. ಹೈಟ್ ಬಗ್ಗೆ ಮಾತಾಡೋದಾಗ್ಲಿ ಅಥವಾ ವೈಯಕ್ತಿಕ ನಿಂದನೆಗಳನ್ನ ಮಾಡೋದು ಕ್ರೀಡಾ ಮನೋಭಾವ ತೋರೋದಿಲ್ಲ. ಹೀಗಿದ್ರೂ ಬವುಮಾರನ್ನ ಕುಬ್ದ ಅಂತಾ ಕರೆದು ಹೀಯಾಳಿಸಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಅವ್ರನ್ನ ಎರಡು ಪಂದ್ಯಗಳಿಂದ ಬ್ಯಾನ್ ಮಾಡಿ ಹಾಗೇ ಡಿ ಮೆರಿಟ್ ಪಾಯಿಂಟ್ಸ್ ಕೊಡಿ ಅಂತಾ ಒತ್ತಾಯಿಸಿದ್ದಾರೆ. ಒಟ್ನಲ್ಲಿ ಆಟದ ಟೈಮಲ್ಲಿ ಪಂತ್ ಮತ್ತು ಬುಮ್ರಾ ನಡುವೆ ನಡೆದ ಚರ್ಚೆ ಈಗ ವಿವಾದಕ್ಕೆ ಕಾರಣವಾಗಿದೆ. ಸದ್ಯದ ಅಪ್ಡೇಟ್ಸ್ ಪ್ರಕಾರ ಬುಮ್ರಾರೇ ಹೇಳಿರಬಹುದು ಅನ್ನೋ ಮಾತುಗಳಿವೆ. ಹಾಗೇನಾದ್ರೂ ಇದು ದೊಡ್ಡ ಮಟ್ಟದಲ್ಲಿ ಕಾಂಟ್ರವರ್ಸಿಯಾಗಿ ಐಸಿಸಿ ಮಟ್ಟದವರೆಗೂ ಹೋದ್ರೆ ಬಹುಶಃ ಬುಮ್ರಾಗೆ ದಂಡ ವಿಧಿಸೋ ಚಾನ್ಸಸ್ ಇರುತ್ತೆ.

ನೋಡಿರಿ

