13 ಸಾವಿರ ರೂ. ಮೌಲ್ಯದ ಫ್ಲೈಟ್‌ ಟಿಕೆಟ್‌ ಕ್ಯಾನ್ಸಲ್​ – ಐಎಎಸ್ ಅಧಿಕಾರಿಗೆ ಮರಳಿ ಸಿಕ್ಕಿದ್ದು ಕೇವಲ 20 ರೂಪಾಯಿ!

13 ಸಾವಿರ ರೂ. ಮೌಲ್ಯದ ಫ್ಲೈಟ್‌ ಟಿಕೆಟ್‌ ಕ್ಯಾನ್ಸಲ್​ – ಐಎಎಸ್ ಅಧಿಕಾರಿಗೆ ಮರಳಿ ಸಿಕ್ಕಿದ್ದು ಕೇವಲ 20 ರೂಪಾಯಿ!

ದೂರದೂರುಗಳಿಗೆ ಪ್ರಯಾಣ ಮಾಡಲು ನಾವು ಬಸ್ಸು, ರೈಲು, ವಿಮಾನಗಳಲ್ಲಿ ಟಿಕೆಟ್‌ ಬುಕ್‌ ಮಾಡುತ್ತೇವೆ. ಕೆಲವೊಂದು ಸಮಯದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ನಮ್ಮ ಯೋಜನೆ ರದ್ದಾಗಿರುತ್ತದೆ. ಹೀಗಾಗಿ ಬುಕ್‌ ಮಾಡಿದ ಟಿಕೆಟ್‌ ಕ್ಯಾನ್ಸಲ್‌ ಮಾಡುತ್ತೇವೆ. ಹೀಗೆ ಟಿಕೆಟ್‌ ಕ್ಯಾನ್ಸಲ್‌ ಮಾಡಿದಾಗ ಟಿಕೆಟ್‌ನ ದರದಲ್ಲಿ ಸ್ವಲ್ಪ ಹಣ ಕಟ್ಟಾಗಿ ನಮ್ಮ ಖಾತೆಗೆ ಜಮೆಯಾಗುತ್ತದೆ. ಇಲ್ಲೊಬ್ಬರು ವಿಮಾನದಲ್ಲಿ ಪ್ರಯಾಣಿಸಲೆಂದು 13 ಸಾವಿರ ರೂಪಾಯಿ ಪಾವತಿಸಿ ಟಿಕೆಟ್‌ ಬುಕ್‌ ಮಾಡಿದ್ದಾರೆ. ಆದರೆ ಅನಿವಾರ್ಯ ಕಾರಣಗಳಿಂದ ವಿಮಾನ ಪ್ರಯಾಣ ರದ್ದು ಮಾಡಿದ್ದಾರೆ. ಸುಮಾರು 13 ಸಾವಿರ ರೂಪಾಯಿ ಟಿಕೆಟ್‌ಗೆ ವಿಮಾನ ಸಂಸ್ಥೆ ಕೇವಲ 20 ರೂಪಾಯಿ ಮರುಪಾವತಿ ಮಾಡಿದೆ.

ಇದನ್ನೂ ಓದಿ: ಬೋಟ್‌ನಲ್ಲಿ ಹೋಗುವಾಗ ಎಚ್ಚರ – ಸ್ವಲ್ಪ ಯಾಮಾರಿದ್ರೂ ಶಾರ್ಕ್‌ಗೆ ಆಹಾರವಾಗುತ್ತೀರ!

ದೂರದೂರುಗಳಿಗೆ ತೆರಳುವ ವೇಳೆ ಸೀಟ್‌ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಮುಂಗಡ ಟಿಕೆಟ್‌ ಬುಕ್‌ ಮಾಡುತ್ತೇವೆ. ಅನಿವಾರ್ಯ ಕಾರಣಗಳಿಂದ ನಾವು ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ರೆ ನಿಗದಿತ ಪ್ರಮಾಣದ ಹಣ ಕಟ್‌ ಆಗುತ್ತದೆ ಎಂದು ವಿಮಾನ ಸಂಸ್ಥೆಗಳು ಸೂಚಿಸಿರುತ್ತವೆ. ಆದರೆ ಬಿಹಾರ ಕೇಡರ್‌ನ ಐಎಎಸ್ ಅಧಿಕಾರಿ ರಾಹುಲ್ ಕುಮಾರ್ ಅವರು 13,820 ರೂ. ಪಾವತಿಸಿ ಟಿಕೆಟ್‌ ಬುಕ್‌ ಮಾಡಿದ್ದರು. ಬಳಿಕ ಕೆಲವು ಕಾರಣಗಳಿಂದ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದಾರೆ. 13 ಸಾವಿರ ರೂಪಾಯಿ ಮೌಲ್ಯದ ಟಿಕೆಟ್‌ಗೆ ವಿಮಾನ ಯಾನ ಸಂಸ್ಥೆ ಕೇವಲ 20 ರೂಪಾಯಿ ಮರುಪಾವತಿ ಮಾಡಿದೆ. ರಾಹುಲ್ ಕುಮಾರ್ ಅವರು ತಮಗೆ ಬಂದ ಮೆಸೆಜ್‌ ಅನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಫೋಟೋಗಳು ಭಾರಿ ವೈರಲ್‌ ಆಗಿದೆ.

ರಾಹುಲ್ ಕುಮಾರ್ ಅವರು ಪೋಸ್ಟ್‌ ಮಾಡಿರುವ ಸ್ಕ್ರೀನ್‌ಶಾಟ್‌ನಲ್ಲಿ, ಅವರು 13,820 ರೂ.ಗೆ ಟಿಕೆಟ್ ಕಾಯ್ದಿರಿಸಿದ್ದಾರೆ ಮತ್ತು ನಂತರ ಅದನ್ನು ರದ್ದುಗೊಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ 20 ರೂಪಾಯಿ ಮರುಪಾವತಿ ಪಡೆದು 13,800 ರೂಪಾಯಿ ಕಳೆದುಕೊಂಡಿದ್ದಾರೆ.

ವಿಮಾನಯಾನ ಸಂಸ್ಥೆಯು 11,800 ರೂಪಾಯಿ ರದ್ದತಿ ಶುಲ್ಕವನ್ನು ಹೊಂದಿದೆ ಎಂದು ಸ್ಕ್ರೀನ್‌ಶಾಟ್ ತೋರಿಸುತ್ತದೆ. GI ರದ್ದತಿ ಶುಲ್ಕ 1200 ರೂ ಮತ್ತು ಅನುಕೂಲಕರ ಶುಲ್ಕ 800 ರೂ. ರದ್ದತಿ ಶುಲ್ಕ ಒಟ್ಟು ರೂ 13,800 ಮತ್ತು ಪ್ರತಿಯಾಗಿ ರೂ 20 ಪಡೆದಿರುವ ಸ್ಕ್ರೀನ್‌ಶಾಟ್ ಅನ್ನು ರಾಹುಲ್ ಕುಮಾರ್ ಅವರು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ಕೆಲವು ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. “ಇದನ್ನು ಚಾರಿಟಿಗೆ ದಾನ ಮಾಡಿ ಮತ್ತು ತೆರಿಗೆ ರಿಟರ್ನ್ಸ್ ಕ್ಲೈಮ್ ಮಾಡಿ” ಎಂದು ಒಬ್ಬ ಬಳಕೆದಾರರು ರಾಹುಲ್ ಕುಮಾರ್ ಅವರು ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ. “ನೀವು ಯೆಸ್ ಬ್ಯಾಂಕ್‌ನ ಒಂದು ಷೇರು ಅಥವಾ ವೊಡಾಫೋನ್ ಐಡಿಯಾದ ಎರಡು ಷೇರುಗಳನ್ನು ಖರೀದಿಸಬಹುದು” ಎಂದು ಮತ್ತೊಬ್ಬ ಬಳಕೆದಾರರು ರಾಹುಲ್ ಕುಮಾರ್ ಅವರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

suddiyaana