‘ನಿಮಗಾಗಿ ಎಲ್ಲಾ ಕಡೆ ಹುಡುಕುತ್ತೇನೆ ಅಮ್ಮಾ..’ – ಜಾನ್ವಿ ಕಪೂರ್ ಭಾವುಕ ಮಾತು..
ಬಾಲಿವುಡ್‌ನ ಫಿಮೇಲ್ ಸೂಪರ್ ಸ್ಟಾರ್ ಶ್ರೀದೇವಿ ಇಲ್ಲದೇ 5 ವರ್ಷಗಳು ಕಳೆದಿದೆ. ಫೆಬ್ರವರಿ 24ರಂದು ಶ್ರೀದೇವಿಯವರ ಪುಣ್ಯಸ್ಮರಣೆ. ಇನ್ನೂ ಎರಡು ದಿನ ಇರುವಾಗಲೇ ಮಗಳು ಜಾನ್ವಿ ಕಪೂರ್ ಮತ್ತು ಪತಿ ಬೋನಿ ಕಪೂರ್ ಶ್ರೀದೇವಿಗೆ ನುಡಿ ನಮನ ಸಲ್ಲಿಸಿದ್ದಾರೆ. ಅಪ್ಪ ಮತ್ತು ಮಗಳ ಭಾವುಕ ಪೋಸ್ಟ್ ಅಭಿಮಾನಿಗಳ ಮನಗೆದ್ದಿದೆ. ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಅಮ್ಮನ ನೆನಪಿನಲ್ಲಿ ತನ್ನ ಮನದಾಳದ ಮಾತನ್ನು ಬರೆದುಕೊಂಡಿದ್ದಾರೆ. ‘ಈಗಲೂ ನಾನು ನಿಮಗಾಗಿ ಎಲ್ಲ ಕಡೆಗಳಲ್ಲಿ ಹುಡುಕುತ್ತೇನೆ ಅಮ್ಮ. ನಿಮಗೆ ಹೆಮ್ಮೆ ತರುವೆನೆಂಬ ಭರವಸೆಯಲ್ಲಿ ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವೆ. ನಾನು ಎಲ್ಲಿಯೇ ಹೋದರೂ ಏನೇ ಮಾಡಿದರೂ ಅದು ನಿಮ್ಮಿಂದಲೇ ಶುರುವಾಗುತ್ತದೆ ಹಾಗೂ ನಿಮ್ಮಲ್ಲೇ ಮುಗಿಯುತ್ತದೆ’ ಎಂದು ಜಾನ್ವಿ ಕಪೂರ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಬೀದಿ ಜಗಳದ ಬೆನ್ನಲ್ಲೇ ರೋಹಿಣಿ, ರೂಪಾ ಎತ್ತಂಗಡಿ – ಮುನೀಶ್ ಮೌದ್ಗಿಲ್ ರನ್ನೂ ವರ್ಗಾವಣೆ ಮಾಡಿದ್ದೇಕೆ..?
ಶ್ರೀದೇವಿ ಅವರ ಪತಿ ಬೋನಿ ಕಪೂರ್ ಕೂಡ ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ನೀನು ನಮ್ಮನ್ನು ಬಿಟ್ಟು ಹೋಗಿ 5 ವರ್ಷ ಆಯಿತು. ನಿನ್ನ ನೆನಪು ಮತ್ತು ಪ್ರೀತಿಯೇ ನಮ್ಮನ್ನು ಮುಂದುವರಿಸುತ್ತಿದೆ. ಅವು ನಮ್ಮ ಜೊತೆ ಸದಾ ಇರುತ್ತವೆ’ ಎಂದು ಬರೆದುಕೊಂಡಿರುವ ಬೋನಿ ಕಪೂರ್ ಅವರು ಶ್ರೀದೇವಿಯ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಅಪ್ಪ ಮತ್ತು ಮಗಳ ಭಾವುಕ ಪೋಸ್ಟ್ಗೆ ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳು ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.
ಪುಸ್ತಕ ರೂಪದಲ್ಲಿ ಶ್ರೀದೇವಿ ಅವರ ಜೀವನ ಚರಿತ್ರೆ ಪ್ರಕಟ ಆಗಲಿದೆ. ಆ ಸುದ್ದಿಯನ್ನು ಕೆಲವೇ ದಿನಗಳ ಹಿಂದೆ ಬೋನಿ ಕಪೂರ್ ಹಂಚಿಕೊಂಡಿದ್ದರು. ‘ಶ್ರೀದೇವಿ: ದಿ ಲೈಫ್ ಆಫ್ ಎ ಲೆಜೆಂಡ್’ ಎಂಬುದು ಇದರ ಶೀರ್ಷಿಕೆ. ಇದರ ಹಕ್ಕುಗಳನ್ನು ‘ವೆಸ್ಟ್ಲ್ಯಾಂಡ್ ಬುಕ್ಸ್’ ಪಡೆದುಕೊಂಡಿದೆ. ಧೀರಜ್ ಕುಮಾರ್ ಅವರು ಈ ಪುಸ್ತಕ ಬರೆಯುತ್ತಿದ್ದಾರೆ.