ಗುಜರಾತ್ ವಿರುದ್ಧ ಗೆದ್ದು ಪ್ಲೇ ಆಫ್ಸ್ ಆಸೆ ಉಳಿಸಿಕೊಂಡ ಕೊಲ್ಕತ್ತಾ – ನಂಬರ್ 1 ಸ್ಥಾನದಲ್ಲಿ ಆರ್ ಸಿಬಿ ಸೇಫ್!

ಗುಜರಾತ್ ವಿರುದ್ಧ ಗೆದ್ದು ಪ್ಲೇ ಆಫ್ಸ್ ಆಸೆ ಉಳಿಸಿಕೊಂಡ ಕೊಲ್ಕತ್ತಾ – ನಂಬರ್ 1 ಸ್ಥಾನದಲ್ಲಿ ಆರ್ ಸಿಬಿ ಸೇಫ್!

2026ರ ಐಪಿಎಲ್ ನ ಪ್ಲೇ ಆಫ್ಸ್ ರೇಸ್ ರಣರೋಚಕ ಘಟ್ಟಕ್ಕೆ ಬಂದಿದೆ. ಒಬ್ಬರ ಸೋಲು ಮತ್ತೊಬ್ಬರ ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿರಿಸುತ್ತಿದೆ. ಕೊಲ್ಕತ್ತಾ ವಿರುದ್ಧ ಪಂಜಾಬ್  ಗೆದ್ದ ಮೇಲೆ ಮತ್ತೆ ಲೆಕ್ಕಾಚಾರಗಳು ಬುಡಮೇಲಾಗಿವೆ. ಸತತ ಪಂದ್ಯಗಳನ್ನ ಗೆದ್ದು ಬೀಗಿದ್ದ ಗುಜರಾತ್​ ಟೈಟಾನ್ಸ್​ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿದೆ. ಈಡೆನ್​ ಗಾರ್ಡನ್​ನಲ್ಲಿ ನಡೆದಿದ್ದ ಹೈ ಸ್ಕೋರಿಂಗ್ ಪಂದ್ಯವನ್ನು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ 29 ರನ್‌ಗಳಿಂದ ಗೆಲುವು ಸಾಧಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಕೊಲ್ಕತ್ತಾ ವಿರುದ್ಧ ಗೆದ್ದು ಪ್ಲೇ ಆಫ್ಸ್ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳೋ ಟಾರ್ಗೆಟ್ ನಲ್ಲಿದ್ದ ಗುಜರಾತ್​ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಬ್ಯಾಟಿಂಗ್​​ ಆರಂಭಿಸಿದ ಕೆಕೆಆರ್​ ಸ್ಫೋಟಕ ಪ್ರದರ್ಶನ ನೀಡಿತು. ಆರಂಭಿಕ ಬ್ಯಾಟರ್ ಫಿನ್ ಅಲೆನ್ 35 ಎಸೆತಗಳಲ್ಲಿ 93 ರನ್ ಗಳಿಸಿದರು, ಕೇವಲ 7 ರನ್​ಗಳಿಂದ ಶತಕವನ್ನು ತಪ್ಪಿಸಿಕೊಂಡರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಇವರಲ್ಲದೇ ಅಂಗ್‌ಕ್ರಿಶ್ ರಘುವಂಶಿ 44 ಎಸೆತಗಳಲ್ಲಿ 7 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳೊಂದಿಗೆ 82 ರನ್ ಗಳಿಸಿದರು, ಕ್ಯಾಮರೂನ್ ಗ್ರೀನ್ 28 ಎಸೆತಗಳಲ್ಲಿ 4 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳೊಂದಿಗೆ 52 ರನ್ ಗಳಿಸಿದರು. ತಂಡದ ಸ್ಕೋರ್ 44 ಆಗಿದ್ದಾಗ ನಾಯಕ ರಹಾನೆ 14 ರನ್ ಗಳಿಸಿ ನಿರ್ಗಮಿಸಿದರು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭವನ್ನು ನೀಡಿತು ಆದರೆ ಸಾಯಿ ಸುದರ್ಶನ್ ಮಧ್ಯದಲ್ಲಿ ಗಾಯಗೊಂಡರು. ಶುಭಮನ್ ಗಿಲ್ ಮತ್ತು ಜೋಶ್ ಬಟ್ಲರ್ ಅದ್ಭುತ ಇನ್ನಿಂಗ್ಸ್ ಆಡಿದರು. ನಾಯಕ ಶುಭಮನ್ ಗಿಲ್ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 85 ರನ್ ಗಳಿಸಿದರು, ಬಟ್ಲರ್ 35 ಎಸೆತಗಳಲ್ಲಿ 57 ರನ್ ಗಳಿಸಿದರು, ಸಾಯಿ ಸುದರ್ಶನ್ 28 ಎಸೆತಗಳಲ್ಲಿ 53 ರನ್ ಗಳಿಸಿದರು. ಆದಾಗ್ಯೂ, ಈ ಎಲ್ಲಾ ಬ್ಯಾಟ್ಸ್‌ಮನ್‌ಗಳು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಗೆಲುವಿಗಾಗಿ ಕೊನೆವರೆಗೂ ಪ್ರಯತ್ನ ಮಾಡಿತಾದರೂ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಲು ಮಾತ್ರ ಶಕ್ತವಾಯಿತು ಮತ್ತು ಪಂದ್ಯವನ್ನು 29 ರನ್ ಗಳಿಂದ ಸೋಲನುಭವಿಸಿತು.

ಗುಜರಾತ್ ವಿರುದ್ಧ ಗೆಲುವಿನೊಂದಿಗೆ ಕೆಕೆಆರ್​ ತಂಡ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಿಂದಿಕ್ಕಿ 7ನೇ ಸ್ಥಾನಕ್ಕೆ ತಲುಪಿದೆ. ಮತ್ತೊಂದೆಡೆ ಗುಜರಾತ್​ ತಂಡ ಈ ಸೋಲಿನೊಂದಿಗೆ 2ನೇ ಸ್ಥಾನದಲ್ಲೇ ಮುಂದುವರೆದಿದೆ. ಗುಜರಾತ್​ ಸೋಲಿನಿಂದಾಗಿ ಆರ್​ಸಿಬಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ.

Shantha Kumari

Leave a Reply

Your email address will not be published. Required fields are marked *