ನಾನು ಒಳ್ಳೆ ಮಗಳಲ್ಲ.. ತಾನು ಮಾಡಿದ ತಪ್ಪನ್ನು ನನ್ನ ಮಗಳು ಮಾಡುವುದಕ್ಕೆ ಬಿಡೋದಿಲ್ಲ ಎಂದು ಆಲಿಯಾ ಭಟ್‌!

ನಾನು ಒಳ್ಳೆ ಮಗಳಲ್ಲ.. ತಾನು ಮಾಡಿದ ತಪ್ಪನ್ನು ನನ್ನ ಮಗಳು ಮಾಡುವುದಕ್ಕೆ ಬಿಡೋದಿಲ್ಲ ಎಂದು ಆಲಿಯಾ ಭಟ್‌!

ನಟಿ ಆಲಿಯಾ ಭಟ್‌ ಅವರದ್ದು ಕ್ಯೂಟ್‌ ಫ್ಯಾಮಿಲಿ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್‌ ಜೀವನಕ್ಕೆ ಮುದ್ದು ಮಗಳು ರಾಹಾ ಎಂಟ್ರಿ ಕೊಟ್ಟಿದ್ದಾಳೆ. ರಾಹಾ ಹುಟ್ಟಿದ ಮೇಲಂತೂ ಈ ಕುಟುಂಬದಲ್ಲಿ ಖುಷಿಯೇ ತುಂಬಿದೆ. ಇದೀಗ ಆಲಿಯಾ ಭಟ್‌ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ. ತಾನು ಮಾಡಿರೋ ತಪ್ಪನ್ನು ತನ್ನ ಮಗಳು ಮಾಡಲು ಬಿಡಲ್ಲ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಲಕ್ನೋ ತಂಡಕ್ಕೆ ಪ್ಲೇ ಆಫ್ ರೇಸ್‌ನಲ್ಲಿ ಗೆಲುವು ಸಿಗುತ್ತಾ?- ನಾಯಕ ಕೆ.ಎಲ್ ರಾಹುಲ್ ಸಾಮರ್ಥ್ಯವೇ ಪ್ಲಸ್ ಆಗುತ್ತಾ?

ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ಆಲಿಯಾ ಭಟ್‌, ನಾನು ಗರ್ಭಿಣಿ ಎಂದು ತಿಳಿದು ಶಾಕ್‌ ಆದೆ. ಆಗ ನಾನು ಹಾಲಿವುಡ್​ನ ಹಾರ್ಟ್ ಆಫ ಸ್ಟೋನ್ ಸಿನಿಮಾ ಶೂಟಿಂಗ್​ಗಾಗಿ ಲಂಡನ್​ನಲ್ಲಿ ಇದ್ದೆ. ನಾನು ಮೂರು ದಿನ ನಿದ್ದೆ ಮಾಡಿರಲಿಲ್ಲ. ನಾನು ಒಳ್ಳೆಯ ಮಗಳಲ್ಲ ಎನ್ನುವ ಭಾವನೆ ನನ್ನನ್ನು ಕಾಡುತ್ತಿತ್ತು ಅಂತ ಹೇಳಿದ್ದಾರೆ.

ನಾನು ಮನೆಯಿಂದ ಹೊರಗೆ ಹೋದಾಗ ನನಗೆ 23 ವರ್ಷ. ಶೂಟಿಂಗ್ ಕಾರಣದಿಂದ ಮನೆಯಿಂದ ದೂರವೇ ಇರುತ್ತಿದ್ದೆ. ಯಾವ ನಗರ ಅನ್ನೋದು ಕೂಡ ನನಗೆ ಗೊತ್ತಿರುತ್ತಿರಲಿಲ್ಲ. ನಾನು ಮನೆಯನ್ನು ಬೇಗ ತೊರೆದೆ ಎಂದು ನನಗೆ ಅನಿಸೋಕೆ ಆರಂಭವಾಯಿತು. ಇದನ್ನು ನನ್ನ ಮಗಳಿಗೆ ಆಗೋಕೆ ಬಿಡಲ್ಲ ಅಂತಾ ಹೇಳೋ ಮೂಲಕ ಮಗಳನ್ನು 20 ವರ್ಷದವರೆಗೆ ಮನೆಯಿಂದ ಹೊರಗೆ ಹೋಗಿ ಬೇರೆ ಕಡೆ ಸೆಟಲ್ ಆಗೋಕೆ ಬಿಡಲ್ಲ ಎಂಬರ್ಥದಲ್ಲೂ ಆಲಿಯಾ ಮಾತನಾಡಿದ್ದಾರೆ.

ನಾನು ಭವಿಷ್ಯದ ಬಗ್ಗೆ ಆಲೋಚಿಸುವ ವ್ಯಕ್ತಿ. ಆದರೆ, ರಾಹಾ ವಿಚಾರದಲ್ಲಿ ಹಾಗಾಗುತ್ತಿಲ್ಲ. ರಹಾಗೆ ಕೆಳಗೆ ಬೀಳಲು ಅವಕಾಶವೇ ಕೊಡದೆ ಇದ್ದರೆ ಅವಳಿಗೆ ಹೇಗೆ ಎದ್ದೇಳಬೇಕು ಎಂಬುದೇ ಗೊತ್ತಾಗುವುದಿಲ್ಲ ಎಂದು ನನ್ನ ತಂದೆ ಯಾವಾಗಲೂ ನನಗೆ ಹೇಳುತ್ತಾ ಇರುತ್ತಾರೆ ಎಂದು ಆಲಿಯಾ ವಿವರಿಸಿದ್ದಾರೆ.

Shwetha M

Leave a Reply

Your email address will not be published. Required fields are marked *