‘ನನಗೆ ಸಮಸ್ಯೆ ಇತ್ತು. ಅದಕ್ಕಾಗಿ ಬಾಡಿಗೆ ತಾಯಿ ಮೂಲಕ ಮಗು ಪಡೆದೆ’ – ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

‘ನನಗೆ ಸಮಸ್ಯೆ ಇತ್ತು. ಅದಕ್ಕಾಗಿ ಬಾಡಿಗೆ ತಾಯಿ ಮೂಲಕ ಮಗು ಪಡೆದೆ’ –  ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದರು. ಆದರೆ, ಈ ಬಗ್ಗೆ ಸಲೆಬ್ರಿಟಿ ದಂಪತಿ ಅನೇಕ ಟೀಕೆಗಳನ್ನು ಎದುರಿಸಬೇಕಾಯ್ತು. ಪ್ರಿಯಾಂಕಾಗೆ ಮಗುವಿಗೆ ಜನ್ಮ ನೀಡಲು ಏನು ಕಷ್ಟ ಅಂತಾ ಕೆಲವರು ಪ್ರಶ್ನೆ ಮಾಡಿದ್ದರು. ತನ್ನ ಬಗ್ಗೆ ಟೀಕೆ ಮಾಡಿದವರಿಗೆ ಪ್ರಿಯಾಂಕಾ ಚೋಪ್ರಾ ಕೆಲವೊಂದು ವಿಚಾರವನ್ನು ಹೇಳಿದ್ದಾರೆ. ಹೌದು. ನನಗೆ ಸಮಸ್ಯೆ ಇದ್ದಿದ್ದರಿಂದಲೇ ನಾನು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ದುಡ್ಡು ಕೊಟ್ಟು ಆಸ್ಕರ್ ಸಮಾರಂಭದ ಟಿಕೆಟ್ ಪಡೆದ್ರಾ ‘ಆರ್‌ಆರ್‌ಆರ್‌’ ತಂಡ? – ರಾಜಮೌಳಿ ಮಗ ಹೇಳಿದ್ದೇನು?

‘ಸಿಟಾಡೆಲ್’ ವೆಬ್ ಸಿರೀಸ್ ಪ್ರಚಾರದ ವೇಳೆ ಅವರು ಈ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಂಡಾಣು ಶೇಖರಣೆ ಮಾಡಿ ಬಳಿಕ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯೋಕೆ ಅನೇಕರು ಸಿದ್ಧರಿರುವುದಿಲ್ಲ. ಆದರೆ, ಈ ರೀತಿ ಮಾಡುವಂತೆ ಪ್ರಿಯಾಂಕಾಗೆ ಅವರ ತಾಯಿ ಮಧು ಚೋಪ್ರಾ ಅವರಿಂದ ಸೂಚನೆ ಬಂದಿತ್ತು. ಮಧು ಚೋಪ್ರಾ ಪ್ರಸೂತಿ ತಜ್ಞೆ. ಮಗಳ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅವರು ಈ ರೀತಿ ಹೇಳಿದ್ದರು. ಈ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ. ‘ನನಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿತ್ತು. ನನಗೆ ಸಾಧನೆ ಮಾಡಬೇಕಿತ್ತು. ನನ್ನ ವೃತ್ತಿಜೀವನದಲ್ಲಿ ಎತ್ತರಕ್ಕೆ ಬೆಳೆಯಬೇಕಿತ್ತು. ಆಗ ನನಗೆ ಒತ್ತಡದ ಸಮಸ್ಯೆ ಇತ್ತು. ನನ್ನ ತಾಯಿ ಅಂಡಾಣು ಶೇಖರಿಸಿ ಇಡುವಂತೆ ಸೂಚಿಸಿದರು’ ಎಂದು ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಿಕ್ ಜೋನಸ್ ಜೊತೆ ಡೇಟ್ ಮಾಡೋಕೆ ಪ್ರಿಯಾಂಕಾಗೆ ಆರಂಭದಲ್ಲಿ ಇಷ್ಟವಿರಲಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ನಾನು ಮಗುಹೊಂದಬೇಕು ಎಂದುಕೊಂಡಿದ್ದೆ. ಇದೇ ಕಾರಣಕ್ಕೆ ನಿಕ್ ಜೊತೆ ಡೇಟ್ ಮಾಡೋಕೆ ಹಿಂಜರಿದೆ. 25ನೇ ವಯಸ್ಸಿಗೆ ತಂದೆ ಆಗೋಕೆ ನಿಕ್ ಸಿದ್ಧರಿರುತ್ತಾರೋ ಅಥವಾ ಇಲ್ಲವೋ ಎನ್ನುವ ಭಯ ನನ್ನನ್ನು ಕಾಡಿತು. ಯುನಿಸೆಫ್ನಲ್ಲಿ ಮಕ್ಕಳ ಜೊತೆ ನಾನು ಕೆಲಸ ಮಾಡಿದ್ದೆ. ಪ್ರಾಣಿ ಹಾಗೂ ಮಕ್ಕಳನ್ನು ಕಂಡರೆ ನಮ್ಮ ಕುಟುಂಬದವರಿಗೆ ಪ್ರೀತಿ’ ಎಂದು ಅವರು ಹೇಳಿದ್ದಾರೆ.

suddiyaana