ಮದುವೆಯಾದ 3 ವರ್ಷಗಳ ಬಳಿಕ ಗೊತ್ತಾಯ್ತು ಅದೊಂದು ರಹಸ್ಯ! – ದಾಂಪತ್ಯ ಜೀವನ ಮುಂದುವರಿಸುತ್ತಾ ಈ ಜೋಡಿ?
ಈ ಜೋಡಿ ಸುಮಾರು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಸುಖವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಇದೀಗ ಈ ದಂಪತಿಗೆ ವಿಚಿತ್ರ ಪ್ರಸಂಗ ಎದುರಾಗಿದೆ. ತಾವಿಬ್ಬರು ಸೋದರಸಂಬಂಧಿಗಳು ಎನ್ನುವ ವಿಚಾರ ಗೊತ್ತಾಗಿದೆ.
ಮದುವೆಯಾದ ಮೇಲೆ ತಾವಿಬ್ಬರೂ ಸೋದರ ಸಂಬಂಧಿಗಳಾಗಬೇಕು ಎನ್ನುವ ವಿಷಯ ದಂಪತಿಗಳಿಗೆ ತಿಳಿದುಬರುವ ಘಟನೆಗಳು ಆಗಾಗ ಕಂಡುಬರುತ್ತವೆ. ಸತ್ಯ ಗೊತ್ತಾದಾಗ ಕೆಲವರು ಪರಸ್ಪರ ದೂರ ಆದ ಘಟನೆಗಳು ಸಾಕಷ್ಟು ವರದಿಯಾಗಿವೆ. ಇದೀಗ ಯುಎಸ್ಎಯ ಉತಾಹ್ನ ದಂಪತಿಗಳ ಜೀವನದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಟೈಲೀ ಮತ್ತು ನಿಕ್ ವಾಟರ್ಸ್ ಎಂಬ ದಂಪತಿ ಸ್ವತಃ ಈ ಸುದ್ದಿ ತಿಳಿದು ಬೆರಗಾಗಿದ್ದಾರೆ. ಇಬ್ಬರೂ ಈ ವಿಚಾರವನ್ನು ಟಿಕ್‌ಟಾಕ್‌ನಲ್ಲಿ ಬಹಿರಂಗಪಡಿಸಿ, ತಮ್ಮ ಸಂಬಂಧದ ಬಗ್ಗೆ ತಿಳಿಸಿದ್ದಾರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ತಮ್ಮ ಸಂಬಂಧದ ವಿಚಾರವನ್ನು ಜಗತ್ತಿಗೆ ತಿಳಿಸಿದ್ದಾರೆ. “ಮದುವೆಯಾಗಿ 3 ವರ್ಷಗಳ ನಂತರ ನಾವು ಸೋದರ ಸಂಬಂಧಿಗಳೆಂದು ಗೊತ್ತಾಯ್ತು”. ಆದರೂ ಈ ಅನಿರೀಕ್ಷಿತ ಘಟನೆಯ ಹೊರತಾಗಿಯೂ ಇಬ್ಬರೂ ತಮ್ಮ ಮದುವೆಯ ಬಗ್ಗೆ ಯಾವುದೇ ತಕರಾರು ಹೊಂದಿಲ್ಲ. ಬೇರ್ಪಡುವ ಬದಲು ಇಬ್ಬರೂ ತಮ್ಮ ಸಂಬಂಧಕ್ಕೆ ಬದ್ಧರಾಗಲು ನಿರ್ಧರಿಸಿದ್ದೇವೆ ಎಂದು ಪರಸ್ಪರ ಲಿಪ್-ಲಾಕ್ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ಅವರು ಜನ್ಮದಿನದ ಕುರಿತಾಗಿಯೂ ಬಹಿರಂಗಪಡಿಸಿದ್ದಾರೆ. ಆದರೆ ಈ ವಿಚಾರ ಹೇಗೆ ತಿಳಿಯಿತು ಎಂಬ ಬಗ್ಗೆ ದಂಪತಿಗಳು ಗುಟ್ಟು ಬಿಟ್ಟುಕೊಟ್ಟಿಲ್ಲ. ಇವರ ಕಥೆ ಕೇಳಿದ ಮೇಲೆ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಮದುವೆಯಾದ ನಂತರ ಇದೇ ರೀತಿಯ ಪರಿಸ್ಥಿತಿ ಎದುರಾದ ಬಗ್ಗೆ ಅನೇಕರು ತಮ್ಮ ಕಥೆಗಳನ್ನು ಹಂಚಿಕೊಂಡಿದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.