ಕಣ್ಣೀರು ಹಾಕಬೇಡ.. ನಿನ್ನ ಜೊತೆ ನಾನಿದ್ದೇನೆ! – ಡಿವೈನ್ ಸ್ಟಾರ್ಗೆ ವರಾಹ ಪಂಜುರ್ಲಿ ಅಭಯ

ಕಾಂತಾರ ಚಾಪ್ಟರ್ 1 ಸಿನಿಮಾ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಗಳಿಕೆ ಕಂಡಿದೆ. ಕಾಂತಾರ ಚಾಪ್ಟರ್ 1 ಚಿತ್ರ ಯಶಸ್ಸಿನ ಬೆನ್ನಲ್ಲೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಚಿತ್ರ ತಂಡ ಹರಕೆ ತೀರಿಸಿದೆ. ಈ ವೇಳೆ ವರಾಹ ಪಂಜುರ್ಲಿ ರಿಷಬ್ ಗೆ ಅಭಯ ನೀಡಿದೆ.
ಇದನ್ನೂ ಓದಿ: ದೈವಕ್ಕೆ ಅಪಮಾನ ಮಾಡಿದ ರಣವೀರ್ ಸಿಂಗ್ಗೆ ಎದುರಾಯ್ತು ಕಾನೂನು ಸಂಕಷ್ಟ! – ಅರೆಸ್ಟ್ ಆಗ್ತಾರಾ ಬಾಲಿವುಡ್ ನಟ?
ರಿಷಬ್ ಶೆಟ್ಟಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಚಿತ್ರ ಕಾಂತಾರ. ಕಾಂತಾರ ಎರಡು ಚಾಪ್ಟರ್ಗಳ ಕಥಾ ಹಂದರವೇ ತುಳುನಾಡಿನ ದೈವ. ಕಾಂತಾರ ಚಾಪ್ಟರ್ 1 ಸಿನಿಮಾ ಭರ್ಜರಿ ಯಶಸ್ಸು ಕಂಡು, ಚಿತ್ರತಂಡ ಗೆದ್ದು ಬಿಗಿದೆ. ಈ ಬೆನ್ನಲ್ಲೇ ಚಿತ್ರತಂಡ ಹರಕೆಯ ನೇಮೋತ್ಸವ ಸಲ್ಲಿಸಿದೆ.
ಕಾಂತಾರ ಸಿನಿಮಾ ನಿರ್ಮಾಣಕ್ಕೂ ಮೊದಲು ಸಿನಿಮಾ ಯಶಸ್ವಿಗಾಗಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪ್ರಾರ್ಥನೆ ಮಾಡಿ ಹರಕೆ ಹೊತ್ತಿದ್ದರು. ಅದರಂತೆ ದೈವದ ಆಶೀರ್ವಾದದಿಂದ ಸಿನಿಮಾ ಯಶಸ್ಸು ಕಂಡಿದೆ. ಹೀಗಾಗಿ ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ಸಲ್ಲಿಸಲಾಯಿತು. ಮಂಗಳೂರಿನ ಯೆಯ್ಯಾಡಿಯ ಬಾರೆಬೈಲ್ ನ ವಾರಾಹಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ಸಲ್ಲಿಸಲಾಗಿದೆ. ಸಿನಿಮಾ ತಂಡ ಹಾಗೂ ರಿಷಬ್ ಶೆಟ್ಟಿ ಕುಟುಂಬಸ್ಥರು ನಿನ್ನೆ ನೇಮೋತ್ಸವದಲ್ಲಿ ಭಾಗಿ ಆಗಿದ್ರು. ಈ ವೇಳೆ ವರಾಹ ಪಂಜುರ್ಲಿ ರಿಷಬ್ ಗೆ ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ ಎಂದು ಅಭಯ ನೀಡಿದೆ.
ಮಧ್ಯರಾತ್ರಿವರೆಗೂ ಕೋಲ ಸೇವೆಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್, ರಿಷಭ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವು ಭಾಗಿಯಾಗಿದ್ದರು. ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕಾಂತಾರ ಚಿತ್ರತಂಡ ಭಾಗಿಯಾಗಿತ್ತು.

ನೋಡಿರಿ

