ನಾನೇ ಪ್ರೊಡ್ಯೂಸರ್‌.. ನಾನೇ ಡೈರೆಕ್ಟರ್‌.. ನಾನೇ ಕಥಾನಾಯಕ! -ಹೆಚ್‌ಡಿಕೆ ಹೀಗಂದಿದ್ಯಾಕೆ?  

ನಾನೇ ಪ್ರೊಡ್ಯೂಸರ್‌.. ನಾನೇ ಡೈರೆಕ್ಟರ್‌.. ನಾನೇ ಕಥಾನಾಯಕ! -ಹೆಚ್‌ಡಿಕೆ ಹೀಗಂದಿದ್ಯಾಕೆ?  

ಕಿಡ್ನಾಪ್ ಕೇಸ್‌ನಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ. ಇದಕ್ಕೆ ಕಥಾನಾಯಕ ಕುಮಾರಸ್ವಾಮಿ ಅವರಾಗಿದ್ದಾರೆ. ಡೈರೆಕ್ಟರ್, ಪ್ರೊಡ್ಯೂಸರ್ ಎಲ್ಲಾ ಇವರೇ ಎಂದಿದ್ದ ಡಿ.ಕೆ ಶಿವಕುಮಾರ್ ಅವರಿಗೆ ಹೆಚ್‌ಡಿಕೆ ತಿರುಗೇಟು ಕೊಟ್ಟಿದ್ದಾರೆ. ಹೌದು ನಾನೇ ಪ್ರೊಡ್ಯೂಸರ್‌.. ನಾನೇ ಡೈರೆಕ್ಟರ್‌.. ನಾನೇ ಕಥಾನಾಯಕ ಎಂದಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ – ಫಸ್ಟ್ ಡೇ ದಿನಚರಿ ಹೇಗಿತ್ತು..?

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್‌ಡಿಕೆ, ಹೌದು ನಾನೇ ಪ್ರೊಡ್ಯೂಸರ್‌.. ನಾನೇ ಡೈರೆಕ್ಟರ್‌.. ನಾನೇ ಕಥಾನಾಯಕ ಎಂದಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದ್ದು ಮಲಯಾಳಂ ಸಿನಿಮಾ ಕನ್ನಡದಲ್ಲಿ ಬಂತು ಅಲ್ವಾ ದೃಶ್ಯಂ ಈ ತರ ಸ್ಟೋರಿಗಳು ಸಿನಿಮಾದಲ್ಲಿ ಈಗಾಗಲೇ ಬಂದು ಬಿಟ್ಟಿವೆ. ಸ್ಟೋರಿಗಳಿಗೆ ಕಥಾನಾಯಕ ಬೇಕು ಅಲ್ವಾ. ನನ್ನನ್ನೇ ಕಥಾನಾಯಕ ಮಾಡಿಕೊಂಡವ್ರೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ಹೆಚ್‌.ಡಿ ರೇವಣ್ಣ ಅವರ ಬಂಧನ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದಾರೆ ಎನ್ನಲಾದ ಮಹಿಳೆ ಕುಟುಂಬ ಸದಸ್ಯರನ್ನ ಕೆ.ಕೆ ಗೆಸ್ಟ್‌ನಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಕಿಡ್ನಾಪ್ ಆದ ಮಹಿಳೆಯನ್ನು ಕರೆದುಕೊಂಡು ಬಂದು ಎಷ್ಟು ದಿನ ಆಯ್ತು. 164 ಹೇಳಿಕೆ ತೆಗೆದುಕೊಂಡಿದ್ದಾರಾ? ಆ ಮಹಿಳೆಯನ್ನು ಯಾಕೆ ಜಡ್ಜ್ ಮುಂದೆ ಹಾಜರುಪಡಿಸಿಲ್ಲ. ಆ ಮಹಿಳೆಯನ್ನು ತೋಟದ ಮನೆಯಿಂದ ಕರೆದುಕೊಂಡು ಬಂದ್ರಾ? ಇಲ್ಲಿಯವರೆಗೂ ಎಲ್ಲಿಂದ ಕರೆದುಕೊಂಡು ಬಂದ್ರು ಅನ್ನೋದು ಯಾಕೆ‌ ಹೇಳಿಲ್ಲ ಅಂತಾ ಪ್ರಶ್ನಿಸಿದ್ದಾರೆ.

Shwetha M