ಗಂಭೀರ್ ವಿರುದ್ಧ ಶ್ರೀಶಾಂತ್ ರೊಚ್ಚಿಗೆದ್ದಿದ್ದು ಯಾಕೆ ? – ಗಂಭೀರ್ ಮತ್ತು ಶ್ರೀಶಾಂತ್ ಮಧ್ಯೆ ಹೈಡ್ರಾಮಾದ ಫುಲ್ ಡಿಟೇಲ್ಸ್..!
ಗೌತಮ್ ಗಂಭೀರ್ ಮತ್ತು ಶ್ರೀಶಾಂತ್.. ಇಬ್ಬರೂ ಟೀಂ ಇಂಡಿಯಾದ ವರ್ಲ್ಡ್ಕಪ್ ಚಾಂಪಿಯನ್ಗಳು. ಜೊತೆಗೇ ಆಡಿ ಎರಡು ವಿಶ್ವಕಪ್ಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. 2007ರ ಟಿ-20 ಮತ್ತು 2011ರ ವಂಡೇ ವರ್ಲ್ಡ್ಕಪ್ನಲ್ಲಿ ಇಬ್ಬರೂ ಟೀಂ ಇಂಡಿಯಾದಲ್ಲಿ. ಇಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡ್ತಾ ಇಲ್ಲ. ಇದುವರೆಗೂ ಇಬ್ಬರ ನಡುವಿನ ಸಂಬಂಧ ಕೂಡ ಚೆನ್ನಾಗಿಯೇ ಇತ್ತು. ಸ್ಟಾರ್ ಸ್ಪೋರ್ಟ್ಸ್ ಸೇರಿದಂತೆ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಕೆಲವೊಮ್ಮೆ ಇಬ್ಬರೂ ಡಿಸ್ಕಷನ್ಗಳಿಗೆ ಗೆಸ್ಟ್ ಆಗಿ ಆಗಮಿಸುತ್ತಿದ್ದರು. ಹಳೆಯ ದಿನಗಳನ್ನೆಲ್ಲಾ ನೆನಸ್ಕೊಂಡು, ಪರಸ್ಪರ ಕಾಲೆಳೆದುಕೊಂಡು ನಗುತ್ತಿದ್ದರು. ಖಾಸಾ ದೋಸ್ತಿಗಳಂತಿದ್ದರು. ಆದ್ರೀಗ ಇದ್ದಕ್ಕಿದ್ದಂತೆ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಶ್ರೀಶಾಂತ್ ಮೇಲೆ ಗಂಭೀರ್ ಸಿಟ್ಟಾಗಿದ್ದಾರೆ. ಗಂಭೀರ್ ವಿರುದ್ಧ ಶ್ರೀಶಾಂತ್ ರೊಚ್ಚಿಗೆದ್ದಿದ್ದಾರೆ. ಅಷ್ಟಕ್ಕೂ ಗಂಭೀರ್ ಮತ್ತು ಶ್ರೀಶಾಂತ್ ಮಧ್ಯೆ ಹೈಡ್ರಾಮಾ ನಡೆದಿದ್ಯಾಕೆ? ಯಾವಾಗ, ಏನಾಯ್ತು? ಈ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಚೆಂಡನ್ನು ಮುಟ್ಟಿ ಔಟಾದ ಮುಫ್ತಿಕರ್ ರಹೀಮ್ – MCC ರೂಲ್ಸ್ ಬಲೆಯೊಳಗೆ ಬಿದ್ದ ಬಾಂಗ್ಲಾ ಟೀಮ್..!
ಗೌತಮ್ ಗಂಭೀರ್ ಮತ್ತು ಶ್ರೀಶಾಂತ್ ಇಬ್ಬರೂ ಲೆಜೆಂಡ್ಸ್ ಲೀಗ್ನಲ್ಲಿ ಆಡುತ್ತಿದ್ದಾರೆ. ಗಂಭೀರ್ ಇಂಡಿಯಾ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಶ್ರೀಶಾಂತ್ ಗುಜರಾತ್ ಜಯಾಂಟ್ಸ್ ಟೀಮ್ನಲ್ಲಿದ್ದಾರೆ. ಡಿಸೆಂಬರ್ 6ರಂದು ಎರಡೂ ತಂಡಗಳ ಮಧ್ಯೆ ಟಿ-20 ಮ್ಯಾಚ್ ನಡೆದಿದೆ. ಈ ಪಂದ್ಯದಲ್ಲಿ ಗೌತಮ್ ಗಂಭೀರ್ 30 ಬಾಲ್ಗಳಲ್ಲಿ 51 ರನ್ ಹೊಡೆದಿದ್ದಾರೆ. 7 ಬೌಂಡರಿ ಮತ್ತು 1 ಸಿಕ್ಸರ್ ಗಂಭೀರ್ ಬ್ಯಾಟ್ನಿಂದ ಬಂದಿತ್ತು. ಅಂತಿಮವಾಗಿ ಗಂಭೀರ್ ಟೀಮ್ ಮ್ಯಾಚ್ನ್ನ ಕೂಡ ಗೆದ್ದುಕೊಂಡಿದೆ. ಆದ್ರೆ ಇಂಡಿಯಾ ಕ್ಯಾಪಿಟಲ್ಸ್ ಬ್ಯಾಟಿಂಗ್ ಮಾಡಿದ್ದಾಗ ಗೌತಮ್ ಗಂಭೀರ್ ಓಪನಿಂಗ್ ಬಂದಿದ್ರು. 2ನೇ ಓವರ್ನ್ನ ಶ್ರೀಶಾಂತ್ ಎಸೆದಿದ್ರು. ಈ ವೇಳೆ ಶ್ರೀಶಾಂತ್ ಬಾಲ್ಗೆ ಗಂಭೀರ್ ಬ್ಯಾಕ್ ಟು ಬ್ಯಾಕ್ ಒಂದು ಸಿಕ್ಸರ್ ಮತ್ತು ಬೌಂಡರಿ ಹೊಡೀತಾರೆ. ನೆಕ್ಸ್ಟ್ ಬಾಲ್ನ್ನ ಡಿಫೆನ್ಸ್ ಮಾಡ್ತಾರೆ. ಗಂಭೀರ್ ಬಾಲ್ ಡಿಫೆನ್ಸ್ ಮಾಡುತ್ತಲೇ ಶ್ರೀಶಾಂತ್ ಗೌತಮ್ ಗಂಭೀರ್ರನ್ನೇ ದುರುಗುಟ್ಟಿ ನೋಡ್ತಾರೆ. ಈ ಹಿಂದೆ ಟೀಂ ಇಂಡಿಯಾ ಪರ ಆಡೋವಾಗ ಶ್ರೀಶಾಂತ್ ಹಲವು ಬಾರಿ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಇದೇ ರೀತಿ ಲುಕ್ ಕೊಟ್ಟಿದ್ರು. ಆಗೇನೋ ಸ್ವಿಚ್ಯುವೇಶನ್ ಬೇರೆ..ಫಾಸ್ಟ್ ಬೌಲರ್ಸ್ಗಳು ಬ್ಯಾಟ್ಸ್ಮನ್ಗಳನ್ನ ಈ ರೀತಿ ಲುಕ್ ಕೊಟ್ಟು ಪ್ರೊವೋಕ್ ಮಾಡೋದೆಲ್ಲಾ ಕಾಮನ್. ಇಂಟರ್ನ್ಯಾಷನಲ್ ಮ್ಯಾಚ್ಗಳಲ್ಲಿ ಈಗಲೂ ಅವೆಲ್ಲಾ ನಡೆಯುತ್ತೆ. ನಥಿಂಗ್ ರಾಂಗ್.. ಆದ್ರೆ ಈ ಲೆಜೆಂಡ್ಸ್ ಲೀಗ್ನಂಥಾ ಟೂರ್ನಿಗಳಲ್ಲಿ ಇವೆಲ್ಲಾ ಅಗತ್ಯವೇ ಇಲ್ಲ. ಇದೇನಿದ್ರೂ ಫ್ರೆಂಡ್ಲಿ ಮತ್ತು ಚ್ಯಾರಿಟಿ ಟೂರ್ನಮೆಂಟ್ಗಳಾಗಿರುತ್ತೆ. ಗೆದ್ದರೂ, ಸೋತರೂ ತಲೆ ಹೋಗೋದೇನಿಲ್ಲ. ಆದರೆ, ತಮ್ಮ ಬಾಲ್ಗೆ ಮೇಲಿಂದ ಮೇಲೆ ಒಂದು ಬೌಂಡರಿ, ಒಂದು ಸಿಕ್ಸರ್ ಬೀಳ್ತಿದ್ದಂತೆ ಶ್ರೀಶಾಂತ್ ಸ್ವಲ್ಪ ಚಾರ್ಚ್ ಆಗಿರೋದು ಸುಳ್ಳಲ್ಲ. ನೆಕ್ಸ್ಟ್ ಬಾಲ್ನ್ನ ಗಂಭೀರ್ ಡಿಫೆಂಡ್ ಮಾಡುತ್ತಲೇ ಶ್ರೀಶಾಂತ್ ದುರುಗುಟ್ಟಿ ನೋಡ್ತಾರೆ. ಆಗ ಗಂಭೀರ್ ಯಾಕೆ? ಏನಾಯ್ತು ಅಂತಾ ಕೈಯಲ್ಲೇ ಸಿಗ್ನಲ್ ಮಾಡ್ತಾರೆ. ನಂತರ ಆ ಓವರ್ ಮುಗಿಯುತ್ತಲೇ ಗಂಭೀರ್ ಮತ್ತು ಶ್ರೀಶಾಂತ್ ಮಧ್ಯೆ ಒಂದಷ್ಟು ಟಾಕ್ ಫೈಟ್ ಕೂಡ ನಡೆಯುತ್ತೆ. ಇಬ್ಬರ ನಡುವೆಯೂ ಮಾತಿಗೆ ಮಾತು ಜೋರಾಗುತ್ತೆ, ಅಂಪೈರ್ ಕೂಡ ಮಧ್ಯಪ್ರವೇಶಿಸ್ತಾರೆ.
ಇನ್ನು ಮ್ಯಾಚ್ ಮುಗಿದ ಮೇಲೆ ಶ್ರೀಶಾಂತ್ ಒಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಾರೆ. ಆ ವಿಡಿಯೋದಲ್ಲಿ ಗಂಭೀರ್ ವಿರುದ್ಧ ಆರೋಪಗಳನ್ನ ಮಾಡ್ತಾ ಬೈದಾಡ್ತಾರೆ. ಮಿಸ್ಟರ್ ಫೈಟರ್ ಜೊತೆಗೆ ಏನಾಯ್ತು ಅನ್ನೋ ಬಗ್ಗೆ ಕೆಲ ವಿಚಾರಗಳನ್ನ ಕ್ಲೀಯರ್ ಮಾಡ್ತೀನಿ. ಗೌತಮ್ ಗಂಭೀರ್ ಯಾವಾಗಲೂ ತಮ್ಮ ಕೊಲೀಗ್ಗಳ ಜೊತೆಗೆ ಫೈಟ್ ಮಾಡ್ತಾನೆ ಇರ್ತಾರೆ. ಯಾವುದೇ ಕಾರಣ ಇಲ್ಲದೆ ಕಿತ್ತಾಡ್ತಾರೆ. ತಮ್ಮ ಜೊತೆಗೇ ಆಡಿದ್ದ ಸೀನಿಯರ್ ಪ್ಲೇಯರ್ಸ್ಗಳನ್ನ ಕೂಡ ಗಂಭೀರ್ ಗೌರವಿಸೋದಿಲ್ಲ. ವಿರೇಂದ್ರ ಸೆಹ್ವಾಗ್ ಬಗ್ಗೆಯೂ ಗೌರವ ಇಲ್ಲ. ಇವತ್ತು ಕೂಡ ಅದೇ ಆಗಿರೋದು. ಯಾವುದೇ ಪ್ರೊವೋಕೇಷನ್ ಇಲ್ಲದೆ ನನ್ನ ವಿರುದ್ಧ ಕೂಗಾಡ್ತಾ ಇದ್ರು. ಒಂದು ವರ್ಡ್ನ್ನೇ ಪದೇ ಪದೆ ಬಳಸ್ತಾ ರೇಗಿಸ್ತಿದ್ರು. ಇಲ್ಲಿ ನನ್ನ ಕಡೆಯಿಂದ ಯಾವುದೇ ತಪ್ಪಿಲ್ಲ. ಮಿಸ್ಟರ್ ಗೌತಿ ಹೇಳಿರೋದನ್ನ ಶೀಘ್ರವೇ ಬಹಿರಂಗಪಡಿಸ್ತೇನೆ. ಮೈದಾನದಲ್ಲಿ ಗಂಭೀರ್ ಬಳಸಿದ ಪದವನ್ನ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ. ನನ್ನ ಕುಟುಂಬ, ನನ್ನ ಸ್ನೇಹಿತರು ಎಲ್ಲರೂ ಬೇಕಾದಷ್ಟು ಅನುಭವಿಸಿದ್ದಾರೆ. ಆದ್ರೀಗ ಮತ್ತೆ ಕೆಲವರು ನನ್ನನ್ನ ಡೌನ್ಪ್ಲೇ ಮಾಡೋಕೆ ನೋಡ್ತಿದ್ದಾರೆ ಅಂತಾ ಗೌತಮ್ ಗಂಭೀರ್ ವಿರುದ್ಧ ಶ್ರೀಶಾಂತ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲ, ವಿರಾಟ್ ಕೊಹ್ಲಿ ಮೇಲೆಯೂ ಗಂಭೀರ್ಗೆ ರೆಸ್ಪೆಕ್ಟ್ ಇಲ್ಲ. ಬ್ರಾಡ್ಕಾಸ್ಟಿಂಗ್ ವೇಳೆ ಕೊಹ್ಲಿ ಬಗ್ಗೆ ಏನಾದ್ರು ಕೇಳಿದ್ರೆ ಇನ್ನೇನೋ ಮಾತನಾಡ್ತಾರೆ ಅಂತೆಲ್ಲಾ ಶ್ರೀಶಾಂತ್ ಹೇಳಿಕೆ ಕೊಟ್ಟಿದ್ದಾರೆ. ಹಾಗೆಯೇ ಗೌತಿ ಭಾಯ್ಗೆ ಏನಾಯ್ತೋ ಗೊತ್ತಿಲ್ಲ. ಮೋಸ್ಟ್ಲಿ ತಿಂಡಿ ತಿಂದಿಲ್ಲ ಅನ್ಸುತ್ತೆ ಅಂತಾ ಶ್ರೀಶಾಂತ್ ವ್ಯಂಗ್ಯವಾಡಿದ್ದರು.
ಇಷ್ಟೆಲ್ಲಾ ಆಗುತ್ತಲೇ, ಗೌತಮ್ ಗಂಭೀರ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲೂ ಒಂದು ಪೋಸ್ಟ್ ಮಾಡ್ತಾರೆ. Smile when the world is all about attention! ಅಂತಾ ಗಂಬೀರ್ ಬರೆದುಕೊಳ್ತಾರೆ. ಇಲ್ಲಿ ಯಾರ ಹೆಸರು ಕೂಡ ಮೆನ್ಷನ್ ಮಾಡದೆ, ಎಲ್ಲಾ ಪ್ರಚಾರಕ್ಕಾಗಿ ಇಷ್ಟೆಲ್ಲಾ ಮಾಡ್ತಿದ್ದಾರೆ ಅಂತಾ ಗಂಭೀರ್ ವನ್ ಲೈನ್ನಲ್ಲೇ ಶ್ರೀಶಾಂತ್ಗೆ ಟಾಂಗ್ ಕೊಡ್ತಾರೆ. ಇದಾಗಿ ಕೆಲ ಹೊತ್ತಲ್ಲೇ ಶ್ರಿಶಾಂತ್ ಮತ್ತೊಂದು ವಿಡಿಯೋ ಪೋಸ್ಟ್ ಮಾಡ್ತಾರೆ. ಅದ್ರಲ್ಲಿ, ಗೌತಮ್ ಗಂಭೀರ್ ನನ್ನನ್ನ ಫಿಕ್ಸರ್ ಅಂತಾ ಕರೆದ್ರು. ಪಿಚ್ ಮಧ್ಯೆಯೇ ಯೂ ಆರ್ ಎ ಫಿಕ್ಸರ್..ಫಿಕ್ಸರ್ ಅಂತಾ ಕರೆದ್ರು. ಕೇವಲ ನನ್ನನ್ನ ಮಾತ್ರವಲ್ಲ ಅಂಪೈರ್ನ್ನ ಕೂಡ ಅಬ್ಯೂಸ್ ಮಾಡಿದ್ರು ಅಂತಾ ಶ್ರೀಶಾಂತ್ ಆರೋಪಿಸಿದ್ದಾರೆ.
ಈಗ ಗಂಭೀರ್ ವಿರುದ್ಧ ಶ್ರೀಶಾಂತ್ ಇಷ್ಟೆಲ್ಲಾ ಮಾತನಾಡಿದ್ದಾರೆ. ಆದ್ರೆ ಈ ಬಾರಿಯ ವರ್ಲ್ಡ್ಕಪ್ ಟೈಮ್ನಲ್ಲಿ ಇದೇ ಶ್ರೀಶಾಂತ್, ಗೌತಮ್ ಗಂಭೀರ್ರನ್ನ ಹಾಡಿ ಹೊಗಳಿದ್ರು. ಗಂಭೀರ್ ಭಾಯಿ ತುಂಬಾ ನೈಸ್ ಪರ್ಸನ್..ಸ್ವೀಟ್ ಪರ್ಸನ್.. ತುಂಬಾ ಹಾನೆಸ್ಟ್ ವ್ಯಕ್ತಿ..ಸತ್ಯವನ್ನೇ ಹೇಳ್ತಾರೆ..ತುಂಬಾ ಜನರನ್ನ ಬೆಂಬಲಿಸ್ತಾರೆ. ಗೌತಿ ಭಾಯ್ ದೇಶಕ್ಕೆ ಕೊಡುಗೆ ನೀಡೋದು ಇನ್ನಷ್ಟಿದೆ. ಎಕ್ಸಾಕ್ಲಿ ಇದೇ ಮಾತನ್ನ ಮೀಡಿಯಾವೊಂದರಲ್ಲಿ ಗೌತಮ್ ಗಂಭೀರ್ ಎದುರಲ್ಲೇ ಶ್ರೀಶಾಂತ್ ಹೇಳಿದ್ರು. ಇನ್ನು ಗಂಭೀರ್ ಕೂಡ ಅಷ್ಟೇ, ನಾನು ಶ್ರೀಶಾಂತ್ ಅಗ್ರೆಸಿವ್ನೆಸ್ನ್ನ ತುಂಬಾ ಇಷ್ಟ ಪಡ್ತೇನೆ. ಜನರು ಏನು ಮಾತನಾಡ್ತಾರೆ ಅಂತಾ ನೀವು ಚೇಂಜ್ ಆಗಬೇಕಾದ ಅವಶ್ಯಕತೆ ಇಲ್ಲ ಅಂತಾ ಗಂಭೀರ್ ಹೇಳಿದ್ರು. ಹಾಗೆಯೇ ನ್ಯೂಜಿಲ್ಯಾಂಡ್ ವಿರುದ್ಧದ ಸೀರಿಸ್ನಲ್ಲಿ ಗಂಭೀರ್ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದಾಗ ಎರಡು ಮ್ಯಾಚ್ಗಳಲ್ಲಿ ಶ್ರೀಶಾಂತ್ ಒಟ್ಟು 7 ವಿಕೆಟ್ಗಳನ್ನ ಪಡೆದಿದ್ದರು. ಗಂಭೀರ್ ಕ್ಯಾಪ್ಟನ್ಸಿ ಅಂಡರ್ನಲ್ಲೇ ನಾನು ಬೆಸ್ಟ್ ಪರ್ಫಾಮೆನ್ಸ್ ನೀಡಿರೋದು ಅಂತಾ ಶ್ರೀಶಾಂತ್ ಕೂಡ ಹೇಳಿಕೊಂಡಿದ್ರು. ಈ ಎಲ್ಲಾ ಮಾತುಕತೆಗಳು ಮೊನ್ನೆ ವರ್ಲ್ಡ್ಕಪ್ ಟೈಮ್ನಲ್ಲೇ ನಡೆದಿರೋದು. ಆದ್ರೀಗ ನೋಡಿದ್ರೆ ಬದ್ಧ ವೈರಿಗಳಂತೆ ಕಿತ್ತಾಡಿಕೊಂಡಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಇಬ್ಬರು ಕೂಡ ಕಾಂಟ್ರೋವರ್ಸಿಯ ಕಿಂಗ್ಗಳು. ಇಬ್ಬರ ನೇಚರ್ ಕೂಡ ಆಲ್ಮೋಸ್ಟ್ ಸೇಮ್. ಜಗಳಗಂಟರು ಅಂತಾನೆ ನೋಟ್ ಆಗಿದ್ದಾರೆ. ಶ್ರಿಶಾಂತ್ ಮೇಲೆಯಂತೂ ಮ್ಯಾಚ್ ಫಿಕ್ಸಿಂಗ್ ಕಳಂಕ ಅಂಟಿಕೊಂಡಿತ್ತು. ಕೆಲ ವರ್ಷಗಳ ಕಾಲ ಕ್ರಿಕೆಟ್ನಿಂದಲೇ ಬ್ಯಾನ್ ಆದರು. ಹೀಗಾಗಿ ಇಂಟರ್ನ್ಯಾಷನಲ್ ಕೆರಿಯರ್ ಕೂಡ ಹಾಳು ಮಾಡಿಕೊಂಡಿದ್ರು. ಈಗ ಶ್ರೀಶಾಂತ್ ಪಿಚ್ ಮಧ್ಯೆ ಗಂಭೀರ್ ಲುಕ್ ಕೊಡದೇ ಇರ್ತಿದ್ರೆ ಏನೂ ಆಗ್ತಾ ಇರ್ಲಿಲ್ವೋ ಏನೋ. ಗಂಭೀರ್ಗಂತೂ ಮೊದಲೇ ಟೆಂಪರ್ ಜಾಸ್ತಿ. ಅಂತೂ ಟೆಂಪರ್ ಮ್ಯಾನ್ಗಳಿಬ್ಬರೂ ಕಿತ್ತಾಡಿಕೊಂಡಿದ್ದಾರೆ.