ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೈದರಾಬಾದ್ ಗೆ 1 ರನ್ ಗಳ ರೋಚಕ ಜಯ!

ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೈದರಾಬಾದ್ ಗೆ 1 ರನ್ ಗಳ ರೋಚಕ ಜಯ!

ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ ನಡುವೆ ನಡೆದ ಪಂದ್ಯದಲ್ಲಿ ಹೈದರಾಬಾದ್‌ ತಂಡ ರೋಚಕ ಗೆಲುವು ಸಾಧಿಸಿದೆ. ಪಂದ್ಯದ ಕೊನೆಯಲ್ಲಿ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಮತ್ತು ಭುವನೇಶ್ವರ್‌ ಕುಮಾರ್‌ ಅವರ ಮ್ಯಾಜಿಕ್‌ ಬೌಲಿಂಗ್‌ನಿಂದಾಗಿ ಹೈದರಬಾದ್‌  1 ರನ್‌ಗಳ ರೋಚಕ ಜಯ ದಾಖಲಿಸಿದೆ.

ಹೈದರಾಬಾದ್ ನಲ್ಲಿ ನಡೆದ ಐಪಿಎಲ್ 2024 ನ 50 ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌,  ಕೊನೆ ಎಸೆತದವರೆಗೂ ರೋಚಕತೆ ಕಾಯ್ದುಕೊಂದು ಅತ್ಯದ್ಭುತ ಜಯ ದಾಖಲಿಸಿದೆ. ಹೈದ್ರಾಬಾದ್‌ 10ರಲ್ಲಿ 6ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ರಾಜಸ್ಥಾನ 10ರಲ್ಲಿ 8 ಜಯದೊಂದಿಗೆ ಅಗ್ರಸ್ಥಾನದಲ್ಲೇ ಉಳಿದಿದೆ.

ಇದನ್ನೂ ಓದಿ: ಸುಡು ಬಿಸಿಲಿನಿಂದ ಪಾರಾಗಲು ಆಟೋ ಚಾಲಕನ ಕ್ರೇಜಿ ಪ್ಲಾನ್‌! – ಮಸ್ತ್‌ ಐಡಿಯಾ ಗೆ ಸೂರ್ಯನೇ ಶಾಕ್!

ಮೊದಲ ಓವರ್‌ನಲ್ಲೇ ಬಟ್ಲರ್‌ ಹಾಗೂ ಸ್ಯಾಮ್ಸನ್‌ರನ್ನು ಭುವನೇಶ್ವರ್‌ ಪೆವಿಲಿಯನ್‌ಗೆ ಅಟ್ಟಿದರು. ಆದರೆ 3ನೇ ವಿಕೆಟ್‌ಗೆ ಜೈಸ್ವಾಲ್‌(40 ಎಸೆತದಲ್ಲಿ 67) ಹಾಗೂ ರಿಯಾನ್‌(49 ಎಸೆತಗಳಲ್ಲಿ 77) 134 ರನ್‌ ಸೇರಿಸಿದರು. ಆದರೆ ಕೊನೆ ಕ್ಷಣದಲ್ಲಿ ಮತ್ತೆ ತಂಡ ಎಡವಿತು. ಪೊವೆಲ್‌ 15 ಎಸೆತದಲ್ಲಿ 27 ರನ್‌ ಸಿಡಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಕೊನೆ ಓವರಲ್ಲಿ 13, ಕೊನೆ ಎಸೆತದಲ್ಲಿ 2 ರನ್‌ ಬೇಕಿದ್ದಾಗ ಹೈದ್ರಾಬಾದ್‌ ಗೆಲುವು ತನ್ನದಾಗಿಸಿಕೊಂಡಿತು.

ಇನ್ನು  ಸನ್‌ರೈಸರ್ಸ್‌ನ ಆರಂಭ ತೀರಾ ಕಳಪೆಯಾಗಿತ್ತು. ಪವರ್‌ಪ್ಲೇನಲ್ಲಿ 2 ವಿಕೆಟ್‌ಗೆ 37, 10 ಓವರಲ್ಲಿ 75 ರನ್‌ ಗಳಿಸಿದ್ದ ತಂಡ ಬಳಿಕ ಗೇರ್‌ ಚೇಂಜ್‌ ಮಾಡಿತು. ನಿತೀಶ್‌ ರೆಡ್ಡಿ 42 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ನೊಂದಿಗೆ 76 ರನ್‌ ಚಚ್ಚಿದರೆ, ಹೆಡ್‌ 58 ರನ್‌ ಸಿಡಿಸಿದರು. ಕ್ಲಾಸೆನ್‌ 19 ಎಸೆತಗಳಲ್ಲಿ ಔಟಾಗದೆ 42 ರನ್‌ ಸಿಡಿಸಿ ತಂಡವನ್ನು 200ರ ಗಡಿ ದಾಟಿಸಿದರು. ರಾಜಸ್ಥಾನ 7 ವಿಕೆಟ್‌ಗೆ 200 ರನ್‌ ಗಳಿಸಿ ಸೋಲೊಪ್ಪಿತು.

Shwetha M

Leave a Reply

Your email address will not be published. Required fields are marked *