ಪಂಜಾಬ್​ ಕಿಂಗ್ಸ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹೈದರಾಬಾದ್..​​​! –  ಪಾಯಿಂಟ್ಸ್​ ಟೇಬಲ್​​ನಲ್ಲಿ 2ನೇ ಸ್ಥಾನಕ್ಕೆ ಜಿಗಿತ

ಪಂಜಾಬ್​ ಕಿಂಗ್ಸ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹೈದರಾಬಾದ್..​​​! –  ಪಾಯಿಂಟ್ಸ್​ ಟೇಬಲ್​​ನಲ್ಲಿ 2ನೇ ಸ್ಥಾನಕ್ಕೆ ಜಿಗಿತ

ಪಂಜಾಬ್​​​ ಕಿಂಗ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ನಡುವೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಹೈದರಾಬಾದ್ ಗೆದ್ದು ಬೀಗಿದೆ. ಈ ಮೂಲಕ ಪಾಯಿಂಟ್ಸ್​ ಟೇಬಲ್​​ನಲ್ಲಿ 2ನೇ ಸ್ಥಾನಕ್ಕೆ ತಲುಪಿದೆ.

ಇದನ್ನೂ ಓದಿ: ಮದುವೆಗೆ ಮೊದಲೇ ತಂದೆಯಾದ ಹೆಡ್! – ಟ್ರಾವಿಸ್ – ಜೆಸ್ಸಿಕಾ ಜೋಡಿಯಾಗಿದ್ದೆಲ್ಲಿ?

ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್​ ಗೆದ್ದು ಫಸ್ಟ್ ಬ್ಯಾಟಿಂಗ್​ ಮಾಡಿದ ಪಂಜಾಬ್​​ 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 210 ರನ್​​ ಕಲೆ ಹಾಕಿತ್ತು. ಈ ಮೂಲಕ ಹೈದರಾಬಾದ್​​ಗೆ ಬೃಹತ್​ ಗುರಿ ನೀಡಿತ್ತು. ಪಂಜಾಬ್​ ಪರ ಅಥರ್ವ 46, ಪ್ರಭುಸಿಮ್ರಾನ್​ 71, ರೋಸೋ 49, ಜಿತೇಶ್​ ಶರ್ಮಾ 32 ರನ್​​ ಗಳಿಸಿದ್ದರು.

ಪಂಜಾಬ್​ ನೀಡಿದ ಬೃಹತ್​ ಗುರಿ ಬೆನ್ನತ್ತಿದ ಹೈದರಾಬಾದ್​ ಪರ ಓಪನರ್​ ಆಗಿ ಬಂದ ಅಭಿಶೇಕ್​ ಶರ್ಮಾ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 28 ಬಾಲ್​ನಲ್ಲಿ 6 ಸಿಕ್ಸರ್​​, 5 ಫೋರ್​ ಸಮೇತ 66 ರನ್​ ಚಚ್ಚಿದ್ರು. ರಾಹುಲ್​ ತ್ರಿಪಾಠಿ 33, ನಿತೀಶ್​ ರೆಡ್ಡಿ 37 ರನ್​ ಸಿಡಿಸಿದ್ರು. ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಹೈದರಾಬಾದ್​ ತಂಡವನ್ನು ಗೆಲ್ಲಿಸಿದ ಕ್ಲಾಸೆನ್​​ 42 ರನ್​ ಬಾರಿಸಿದ್ರು. ಹೈದರಾಬಾದ್​​ ಇನ್ನೂ ಒಂದು ಓವರ್​ ಇರುವಂತೆ ಗೆಲುವು ಸಾಧಿಸಿದೆ.

Shwetha M