ನಿರ್ಣಾಯಕ ಪಂದ್ಯದಲ್ಲಿ ಸೋತು ಗಂಟು ಮೂಟೆ ಕಟ್ಟಿದ ಸಿಎಸ್‌ಕೆ – ಚೆನ್ನೈ ವಿರುದ್ಧ ಹೈದರಾಬಾದ್‌ಗೆ ರೋಚಕ ಗೆಲುವು

ನಿರ್ಣಾಯಕ ಪಂದ್ಯದಲ್ಲಿ ಸೋತು ಗಂಟು ಮೂಟೆ ಕಟ್ಟಿದ ಸಿಎಸ್‌ಕೆ – ಚೆನ್ನೈ ವಿರುದ್ಧ ಹೈದರಾಬಾದ್‌ಗೆ ರೋಚಕ ಗೆಲುವು

ಚೆನ್ನೈ ತನ್ನ ತವರಿನಲ್ಲಿ ಮತ್ತೊಂದು ಸೋಲು ಕಂಡಿದೆ. ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಸಿಎಸ್‌ಕೆ ಸೋತು ಶರಣಾಗಿದೆ. ಈ ಸೋಲಿನೊಂದಿಗೆ ಚೆನ್ನೈ ತಂಡ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.

ಇದನ್ನೂ ಓದಿ:ಪಂತ್ ಔಟ್.. ಪಾಂಡ್ಯಗೆ ಗೇಟ್ ಪಾಸ್ – 2027ಕ್ಕೆ ನಾಲ್ವರು ನಾಯಕರ ತಲೆದಂಡ

ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ ರೋಚಕ ಗೆಲುವು ಸಾಧಿಸಿದೆ. ಜೊತೆಗೆ ಪ್ಲೇಆಫ್ ಪ್ರವೇಶವನ್ನ ಖಚಿತಪಡಿಸಿಕೊಂಡಿದೆ. ಪ್ಲೇಆಫ್​ ರೇಸ್​​​ನಲ್ಲಿ ಉಳಿಯಲು ಎರಡೂ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್​ಕೆ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್​ಗಳಿಸಿತ್ತು. ಸಂಜು ಸ್ಯಾಮ್ಸನ್ 13 ಎಸೆತಗಳಲ್ಲಿ 26, ಕಾರ್ತಿಕ್ ಶರ್ಮಾ 19 ಎಸೆತಗಳಲ್ಲಿ 32, ಡೆವಾಲ್ಡ್ ಬ್ರೆವಿಸ್ 27 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ಗಳ ಸಹಿತ  44 ರನ್, ಶಿವಂ ದುಬೆ 23 ಎಸೆತಗಳಲ್ಲಿ 26 ರನ್​ಗಳಿಸಿದರು. ನಾಯಕ ರುತುರಾಜ್ ಗಾಯಕ್ವಾಡ್ 21 ಎಸೆತಗಳಲ್ಲಿ ಕೇವಲ 15 ರನ್​ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ತಂಡಕ್ಕೆ ಹೊರೆಯಾಯ್ತು.

181 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಹೈದರಾಬಾದ್​ 19 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ರೋಚಕ ಗೆಲುವು ಸಾಧಿಸಿತು. ಇಶಾನ್ ಕಿಶನ್ 70 ಹಾಗೂ ಹೆನ್ರಿಕ್ ಕ್ಲಾಸೆನ್ 47 ರನ್​ಗಳಿಸಿ ಗೆಲುವಿನ ರೂವಾರಿಯಾದರು. ಈ ಗೆಲುವಿನ ಮೂಲಕ ಹೈದರಾಬಾದ್ ತಂಡ ಗುಜರಾತ್ ಟೈಟನ್ಸ್​ ತಂಡದ ಜೊತೆಗೆ ಪ್ಲೇಆಫ್​ ಪ್ರವೇಶಿಸಿತು. ಸೋತ ಸಿಎಸ್​ಕೆ ಬಹುತೇಕ ಟೂರ್ನಿಯಿಂದ ಹೊರಬಿದ್ದಿತು.

ಹೈದರಾಬಾದ್ ತಂಡ 2026ರ ಆವೃತ್ತಿಯಲ್ಲಿ ತನ್ನ ಪ್ಲೇಆಫ್​ ಪ್ರವೇಶವನ್ನ ಖಚಿತಪಡಿಸಿಕೊಂಡಿತು. ಆರ್​ಸಿಬಿ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಲಿದ್ದು, ಅಗ್ರ 2 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದೆ. ಆರ್​ಸಿಬಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಸೋಲಿನೊಂದಿಗೆ ಸಿಎಸ್​ಕೆ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಸಿಎಸ್​ಕೆ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರೆ, ರಾಜಸ್ಥಾನ್  ಹಾಗೂ ಕೆಕೆಆರ್ ತಂಡಗಳು ತಮ್ಮ 2 ಪಂದ್ಯಗಳನ್ನೂ ಹಾಗೂ  ಪಂಜಾಬ್ ಮತ್ತು ಡೆಲ್ಲಿ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಸೋತರೆ ಮಾತ್ರ ಸಿಎಸ್​ಕೆ ಪ್ಲೇಆಫ್​ ಪ್ರವೇಶಿಸಲಿದೆ.

Sulekha

Leave a Reply

Your email address will not be published. Required fields are marked *