ಅಯ್ಯಯ್ಯೋ.. ಕಾರ್‌ ವಾಶ್‌ ಮಾಡಿದ್ದಕ್ಕೆ 10 ಸಾವಿರ ಫೈನ್‌! – ಕಾರಣವೇನು ಗೊತ್ತಾ?

ಅಯ್ಯಯ್ಯೋ.. ಕಾರ್‌ ವಾಶ್‌ ಮಾಡಿದ್ದಕ್ಕೆ 10 ಸಾವಿರ ಫೈನ್‌! – ಕಾರಣವೇನು ಗೊತ್ತಾ?

ದೇಶದ ಅನೇಕ ಭಾಗಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಹನಿ, ಹನಿ ನೀರಿನ ಬೆಲೆ ಏನು ಅನ್ನೋದು ಜನರಿಗೆ ಈಗ ಅರ್ಥವಾಗುತ್ತಿದೆ. ಸರ್ಕಾರ ಕೂಡ ನೀರಿನ ಸಂರಕ್ಷಣೆ ಮಾಡಲು ನಾನಾ ಯೋಜನೆಗಳನ್ನ ರೂಲ್ಸ್‌ಗಳನ್ನ ತಂದಿದೆ. ಆದ್ರೆ ಕೆಲ ಜನರು ಇನ್ನೂ ನಿಯಮ ಪಾಲಿಸುತ್ತಿಲ್ಲ. ಇದೀಗ ಇಲ್ಲೊಬ್ಬ ತನ್ನ ಕಾರನ್ನು ವಾಶ್‌ ಮಾಡಿ, ದಂಡ ಕಟ್ಟುವಂತೆ ಆಗಿದೆ.

ಇದನ್ನೂ ಓದಿ: ಸ್ಮೃತಿ ಮಂದಾನಗೆ ಪಲಾಶ್ ಮೋಸ – ಯುವತಿ ಜತೆ ಫ್ಲರ್ಟ್.. ಮದುವೆ ಕ್ಯಾನ್ಸಲ್?

ನೀರಿನ ಕೊರತೆ ಇದೆ ಎಂದು ಹೇಳಿದ್ರು, ಕೆಲವರಿಗೆ ಇದು ಅರ್ಥವಾಗೋದೇ ಇಲ್ಲ. ಅನಗತ್ಯವಾಗಿ ನೀರನ್ನ ಪೋಲು ಮಾಡುತ್ತಾರೆ. ಇದೀಗ ಹೈದರಾಬಾದ್‌ನ ವ್ಯಕ್ತಿಯೊಬ್ಬರು ಬಂಜಾರ ಹಿಲ್ಸ್‌ನಲ್ಲಿ ತನ್ನ ಮರ್ಸಿಡಿಸ್ ಜಿ-ವ್ಯಾಗನ್ ಕಾರನ್ನು ಕುಡಿಯುವ ನೀರಿನಿಂದ ತೊಳೆದಿದ್ದಾರೆ. ಈ ವ್ಯಕ್ತಿಗೆ 10,000 ರೂ. ದಂಡ ವಿಧಿಸಲಾಗಿದೆ.

ಹೈದರಾಬಾದ್ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ರೆಡ್ಡಿ ನಗರದಲ್ಲಿ ನೀರು ಪೋಲು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾರುಗಳನ್ನು ಸ್ವಚ್ಛಗೊಳಿಸಲು, ಉದ್ಯಾನವನಗಳಿಗೆ ಹಾಗೂ ವಾಣಿಜ್ಯ ಬಳಕೆಗಳಿಗೆ ನೀರನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ದಂಡ ವಿಧಿಸಲಾಗುತ್ತದೆ. ಇದೀಗ ಬಂಜಾರ ಹಿಲ್ಸ್‌ನಲ್ಲೂ ನೀರು ಪೋಲು ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಂಡಿದ್ದಾರೆ. ಕುಡಿಯುವ ನೀರಿನಿಂದ ಕಾರು ವಾಶ್‌ ಮಾಡಿದ್ದಕ್ಕೆ ದಂಡ ವಿಧಿಸಿದ್ದಾರೆ. ಪೋರ್ಟಬಲ್ ನೀರಿನ ವ್ಯರ್ಥವನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ನಿಯಮಗಳ ಅಡಿಯಲ್ಲಿ ಆ ವ್ಯಕ್ತಿಗೆ ಸ್ಥಳದಲ್ಲೇ ದಂಡ ವಿಧಿಸಲಾಗಿದೆ. ಕುಡಿಯುವ ನೀರನ್ನು ಜವಾಬ್ದಾರಿಯುತವಾಗಿ ಬಳಸಬೇಕು ಮತ್ತು ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಆದ್ರೆ ದಂಡ ವಿಧಿಸಿರುವ ವ್ಯಕ್ತಿಯ ಮಾಹಿತಿಯನ್ನ ಬಹಿರಂಗಪಡಿಸಿಲ್ಲ.

Shwetha M