ಭಾರತೀಯ ಯುವಕರನ್ನು ಉಕ್ರೇನ್‌ ವಿರುದ್ಧ ಹೋರಾಡಲು ಬಳಸಿದ ರಷ್ಯಾ – ಹೈದರಾಬಾದ್​​ನ ಯುವಕ ಗುಂಡೇಟಿಗೆ ಬಲಿ

ಭಾರತೀಯ ಯುವಕರನ್ನು ಉಕ್ರೇನ್‌ ವಿರುದ್ಧ ಹೋರಾಡಲು ಬಳಸಿದ ರಷ್ಯಾ – ಹೈದರಾಬಾದ್​​ನ ಯುವಕ ಗುಂಡೇಟಿಗೆ ಬಲಿ

ರಷ್ಯಾ ಸೇನೆಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರವಾಸಕ್ಕೆ ಉದ್ಯೋಗವನ್ನು ಅರಸಿ ರಷ್ಯಾಗೆ ಹೋಗುತ್ತಿರುವವರನ್ನೇ ಸೇನೆ ಟಾರ್ಗೆಟ್‌ ಮಾಡುತ್ತಿದೆ. ಭಾರತದ ಯುವಕರನ್ನು ಬಲವಂತವಾಗಿ ಯುದ್ಧಕ್ಕೆ ಬಳಸಿಕೊಂಡ ಬೆನ್ನಲ್ಲೇ ದುರಂತವೊಂದು ಸಂಭವಿಸಿಬಿಟ್ಟಿದೆ. ರಷ್ಯಾ ಪರವಾಗಿ ಯುದ್ಧದಲ್ಲಿ ಹೋರಾಡುತ್ತಿದ್ದ ವೇಳೆ ಹೈದರಾಬಾದ್​​ನ ಯುವಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಆ್ಯಸಿಡ್‌ ಮಾರಾಟ ನಿಷೇಧ – ಗೃಹ ಸಚಿವ ಪರಮೇಶ್ವರ್‌

ಕಳೆದ ಒಂದೂವರೆ ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಲೆಕ್ಕವಿಲ್ಲದಷ್ಟು ಜನರು ಸಾವನ್ನಪ್ಪಿದ್ದಾರೆ. ಈ ಯುದ್ಧದಿಂದಾಗಿ ರಷ್ಯಾ ಸೇನೆ ಬಹುತೇಕ ಸೈನಿಕರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ರಷ್ಯಾ ಸೇನೆ ಉದ್ಯೋಗಕ್ಕಾಗಿ ಅರಸಿ ರಷ್ಯಾಕ್ಕೆ ಬರುವ ಯುವಕರನ್ನೇ ಟಾರ್ಗೆಟ್​​ ಮಾಡುತ್ತಿದೆ. ರಷ್ಯಾದ ವ್ಯಾಗ್ನರ್​​​​ ಪಡೆ, ಅಸಾಯಕ ಯುವಕರಿಗೆ ಉದ್ಯೋಗ ಆಮಿಷ ತೋರಿಸಿ ಯುದ್ಧಕ್ಕೆ ಬಲವಂತವಾಗಿ ಬಳಸಿಕೊಳ್ಳುತ್ತಿದೆ. ಹೀಗೆ ರಷ್ಯಾಕ್ಕೆ ತೆರಳಿದ್ದ ಹೈದರಾಬಾದ್​​ ಮೂಲದ ಮೊಹಮ್ಮದ್​​​​ ಅಸ್ಫಾನ್ ವಂಚನೆ ಜಾಲಕ್ಕೆ ಸಿಲುಕಿದ್ದು, ರಷ್ಯಾ ಪರವಾಗಿ ಉಕ್ರೇನ್​ ವಿರುದ್ಧ ಹೋರಾಡುವಾಗ ಸಾವನ್ನಪ್ಪಿದ್ದಾನೆ.

ಯುವಕ ವಂಚನೆಗೆ ಒಳಗಾಗಿದ್ದು ಹೇಗೆ?

ರಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ದುಬೈನ ವ್ಯಕ್ತಿಯೊಬ್ಬ ಆಮಿಷವೊಡ್ಡಿದ್ದ. ತಿಂಗಳಿಗೆ 1 ರಿಂದ 2 ಲಕ್ಷ ರೂ ಸಂಬಳ ಕೊಡಿಸುವುದಾಗಿ ತಿಳಿಸಿದ್ದಾನೆ. ಈ ಮಾತನ್ನು ನಂಬಿ ಅಸ್ಫಾನ್​​​ ಮಾಸ್ಕೋಗೆ ತೆರಳಿದ್ದಾನೆ. ಅಲ್ಲಿ ತರಬೇತಿ ಶಿಬಿರಕ್ಕೆ ಸೇರಿಸಿ ಯುದ್ಧಕ್ಕೆ ಬಳಸಿಕೊಂಡಿದ್ದಾರೆ. ಅಲ್ಲದೇ ಕರ್ನಾಟಕ, ಪಂಜಾಬ್​​​ ಸೇರಿದಂತೆ ಉದ್ಯೋಗ ವಂಚನೆ ಜಾಲಕ್ಕೆ ಸಿಲುಕಿ ರಷ್ಯಾಕ್ಕೆ ತೆರಳಿರುವ ಭಾರತೀಯ ಯುವಕರನ್ನು ರಷ್ಯಾ ಸೇನೆ ತನ್ನ ಸ್ವಾರ್ಥಕ್ಕಾಗಿ ಬಳಿಸಿಕೊಳ್ಳುತ್ತಿದ್ದು, ಈ ಪ್ರಕರಣ ಹೈದ್ರಾಬಾದ್​​ನ ಸಂಸದ ಅಸಾವುದ್ದೀನ್​​ ಓವೈಸಿ ಮುಖಾಂತರ ಬೆಳಕಿಗೆ ಬಂದಿದೆ.

ಈ ಘಟನೆ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರನ್​​ಧೀರ್​ ಜೈಸ್ವಾಲ್​​ ಕಳೆದ ವಾರ ಮಾತನಾಡಿ, ಯುವಕರನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ರಷ್ಯಾದಲ್ಲಿ 20ಕ್ಕೂ ಭಾರತೀಯ ಯುವಕರು ಸಿಲುಕಿಕೊಂಡಿದ್ದಾರೆ. ನಾವು ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ, ಈಗಾಗಲೇ ಎರಡು ಸ್ಟೇಟ್​​ಮೆಂಟ್​ಗಳನ್ನು ನಾವು ನಾವು ನೀಡಿದ್ದು, ಅಲ್ಲಿರುವ ಯುವಕರಿಗೆ ಯುದ್ಧ ವಲಯಕ್ಕೆ ತೆರಳಬಾರದು, ಕಷ್ಟಕರ ಸಂದರ್ಭದಲ್ಲಿ ಸಿಲುಕಿಕೊಳ್ಳಬಾರದು ಎಂದು ತಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.

Shwetha M