ಪತ್ನಿಗಾಗಿ ಬರೋಬ್ಬರಿ 7 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣ– ಆಧುನಿಕ  ಶಹಜಹಾನ್ ಇವರೇ ನೋಡಿ…

ಪತ್ನಿಗಾಗಿ ಬರೋಬ್ಬರಿ 7 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣ– ಆಧುನಿಕ  ಶಹಜಹಾನ್ ಇವರೇ ನೋಡಿ…

ಹೆಂಡತಿ, ತಂದೆ ತಾಯಿ ಸತ್ತಾಗ ಅವರಂತೆ ಪ್ರತಿಮೆ ನಿರ್ಮಿಸಿ ಪೂಜಿಸುವುದನ್ನು ಕೇಳಿದ್ದೇವೆ. ಶಹಜಹಾನ್ ತನ್ನ ಮಡದಿ ಮುಮ್ತಾಜ್ ಗಾಗಿ ತಾಜ್ ಮಹಲ್ ಕಟ್ಟಿಸಿರುವುದನ್ನು ನಾವು ಪುಸ್ತಕಗಳಲ್ಲಿ ಓದಿರುತ್ತೇವೆ. ಅಷ್ಟೇ ಯಾಕೆ ಚಾಮರಾಜನಗರದಲ್ಲೊಬ್ಬ ರೈತ ತನ್ನ ಪತ್ನಿಯ ನೆನಪಿಗಾಗಿ ದೇವಾಲಯ ನಿರ್ಮಿಸಿ ಕಳೆದ 12 ವರ್ಷಗಳಿಂದ ನಿತ್ಯ ಪೂಜೆ ಸಲ್ಲಿಸುತ್ತಿರುವ ಬಗ್ಗೆ ಕೆಲ ತಿಂಗಳುಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಇಲ್ಲೊಬ್ಬ ವ್ಯಕ್ತಿ ಪತ್ನಿ ಆಸೆಯನ್ನು ಈಡೇರಿಸುವ ಇಚ್ಚೆಯಿಂದ ಹೆಂಡತಿಗಾಗಿ ಬರೋಬ್ಬರಿ 7 ಕೋಟಿ ಖರ್ಚು ಮಾಡಿ ದೇವಾಲಯ ನಿರ್ಮಿಸಿದ್ದಾರೆ.

ಇದನ್ನೂ ಓದಿ: ವಿದೇಶಿ ಸಿನಿಮಾ ನೋಡಿದ್ರೆ ಹುಷಾರ್ – ಮಕ್ಕಳಿಗೆ 5 ವರ್ಷ ಜೈಲು.. ಹೆತ್ತವರಿಗೆ 6 ತಿಂಗಳು ಶಿಕ್ಷೆ..!

ಹೌದು, ಒಡಿಶಾದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಂತೋಷಕ್ಕಾಗಿ ಬರೋಬ್ಬರಿ 7 ಕೋಟಿ ರೂ. ಮೌಲ್ಯದ ದೇವಾಲಯವನ್ನು ನಿರ್ಮಿಸಿದ್ದಾನೆ. ಈ ದೇವಾಲಯವು ಹಲವು ವಿಧಗಳಲ್ಲಿ ಬಹಳ ವಿಶಿಷ್ಟವಾಗಿದೆ ಮತ್ತು ಪತಿ-ಪತ್ನಿಯರ ನಡುವಿನ ಪ್ರೀತಿ ಮತ್ತು ಭಕ್ತಿಯ ಸಂಕೇತವಾಗಿದೆ ಅಂತಾ ಹೇಳಿಕೊಂಡಿದ್ದಾನೆ.

ಈ ದೇವಾಲಯವನ್ನು ಒಡಿಶಾದ ಜಾಜ್‌ಪುರ ಜಿಲ್ಲೆಯ ಉದ್ಯಮಿ ಖೇತ್ರವಾಸಿ ಲೆಂಕ ಎಂಬಾತ ತನ್ನ ಮುದ್ದಿನ ಮಡದಿ ಬೈಜಂತಿಗಾಗಿ ನಿರ್ಮಿಸಿದ್ದಾನೆ. ಖೇತ್ರವಾಸಿ ಲೆಂಕಾ ಮತ್ತು ಬೈಜಂತಿ 1992ರಲ್ಲಿ ವಿವಾಹವಾಗಿದ್ದರು. ಬೈಜಂತಿ ಸಂತೋಷಿ ಮಾ ಭಕ್ತರಾಗಿದ್ದರು. ‘ಮದುವೆಯಾದ ನಂತರ ಗ್ರಾಮದಲ್ಲಿ ಸಂತೋಷಿ ಮಾತೆಯ ಚಿಕ್ಕ ದೇವಸ್ಥಾನವನ್ನು ನಿರ್ಮಿಸೋಣ ಎಂದು ತನ್ನ ಪತಿ ಬಳಿ ಆಗಾಗ ಹೇಳಿಕೊಳ್ಳುತ್ತಿದ್ದರು. ಪತ್ನಿಯ ಆಸೆಯಂತೆ ಖೇತ್ರವಾಸಿ ದೇವಾಲಯ ನಿರ್ಮಿಸಲು ಮುಂದಾಗಿದ್ದಾರೆ. ಆರಂಭದಲ್ಲಿ ಇವರು ಸಣ್ಣ ದೇವಾಲಯ ನಿರ್ಮಿಸುತ್ತಾರೆ ಎಂದು ಅಲ್ಲಿನ ನಿವಾಸಿಗಳು ಅಂದುಕೊಂಡಿದ್ದರು. ಖೇತ್ರವಾಸಿ ದೊಡ್ಡ ದೇವಸ್ಥಾನವನ್ನು ನಿರ್ಮಿಸುತ್ತಾರೆ ಎಂದು ನಿವಾಸಿಗಳು ಯೋಚಿಸಿರಲಿಲ್ಲ.

‘ತನ್ನ ಪತಿ ತನಗಾಗಿ ದೇವಾಲಯವನ್ನು ನಿರ್ಮಿಸಿದ್ದಾನೆ. ಈ ದೇವಾಲಯವನ್ನು ನಿರ್ಮಿಸಿದ ನಂತರ ನನಗೂ ಸಂತೋಷವಾಗಿದೆ. ಗ್ರಾಮಸ್ಥರು ಕೂಡ ಸಂತೋಷಪಟ್ಟಿದ್ದಾರೆ. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಿಯ ಮೂರ್ತಿಯನ್ನು ಗ್ರಾಮ ಮಾತ್ರವಲ್ಲದೆ ದೇಶದಾದ್ಯಂತ ಜನರು ಪೂಜಿಸಿ ಸಂತೋಷಿ ಮಾತೆಯ ಆಶೀರ್ವಾದವನ್ನು ಪಡೆಯಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ’ ಎಂದು ಬೈಜಂತಿ ಹೇಳಿದ್ದಾರೆ.

ಅವರು 2008ರಲ್ಲಿ ದೇವಾಲಯದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಈಗ ಬರೋಬ್ಬರಿ 7 ಕೋಟಿ ವೆಚ್ಚದಲ್ಲಿ ದೇವಾಲಯವು ಸಿದ್ಧವಾಗಿದೆ. ಈ ದೇವಾಲಯವನ್ನು ದಕ್ಷಿಣ ಭಾರತೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯವನ್ನು ನಿರ್ಮಿಸಲು ಎಲ್ಲಾ ಕುಶಲಕರ್ಮಿಗಳು ಚೆನ್ನೈನಿಂದ ಬಂದಿದ್ದರು ಎಂದು ಬೈಜಂತಿ ಹೇಳಿದ್ದಾರೆ.

suddiyaana